ಚಳಿಗಾಲದಲ್ಲಿ ಶಿಶುವಿನ ಚರ್ಮದ ಆರೈಕೆ ಹೇಗೆ? 

ಚಳಿಗಾಲ ಬಂತೆಂದರೆ ಸಾಕು ಮಕ್ಕಳಿರುವ ಮನೆಗಳಲ್ಲಿ ತಲೆ ನೋವು ಶುರುವಾಗುತ್ತದೆ. ಮಕ್ಕಳನ್ನು ಆರೈಕೆ ಮಾಡುವುದೇ ದೊಡ್ಡ ಕೆಲಸವಾಗಿ ಹೋಗುತ್ತದೆ. ಚಳಿಗಾಲದಲ್ಲಿ ಮಗುವಿನ ಚರ್ಮ ಹಾಗೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಳಿಗಾಲ ಬಂತೆಂದರೆ ಸಾಕು ಮಕ್ಕಳಿರುವ ಮನೆಗಳಲ್ಲಿ ತಲೆ ನೋವು ಶುರುವಾಗುತ್ತದೆ. ಮಕ್ಕಳನ್ನು ಆರೈಕೆ ಮಾಡುವುದೇ ದೊಡ್ಡ ಕೆಲಸವಾಗಿ ಹೋಗುತ್ತದೆ. ಚಳಿಗಾಲದಲ್ಲಿ ಮಗುವಿನ ಚರ್ಮ ಹಾಗೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. 

ಚಳಿಗಾಲದಲ್ಲಿ ಮಗುವಿನ ಸುಕೋಮಲ ತ್ವಚೆ ಬಹಳ ಬೇಗ ಹಾಳಾಗಬಹುದು. ಹೀಗಾಗಿ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ಚರ್ಮ ಬಹಳ ಬೇಗ ಒಣಗುತ್ತದೆ. ಈ ವೇಳೆ ಬಹಳ ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. 

ಬಿಸಿ ಗಾಳಿಗಿಂತಲೂ ತಂಪಾದ ಗಾಳಿ ಚರ್ಮವನ್ನು ಬಹಳ ಬೇಗ ಒಣಗುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಮಗುವಿಗೆ ಪ್ರತೀನಿತ್ಯ ಸ್ನಾನ ಮಾಡಿಸುವುದು ಉತ್ತಮ. ಆದರೆ, ಸೂಕ್ತ ರೀತಿಯ ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವಾಗ ಮೈಲ್ಡ್ ಸೋಪ್ ಗಳನ್ನು ಬಳಕೆ ಮಾಡಬೇಕು. ಮಕ್ಕಳ ಚರ್ಮ ಉತ್ತಮವಾಗಿರಬೇಕೆಂದರೆ ಬಾದಾಮಿ ಎಣ್ಣೆ, ಆಲಿವ್ ಆಯಿಲ್ ಗಳಿಂದ ಮಸಾಜ್ ಮಾಡಿ ಇದು ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ. 

ಮಗುವಿಗೆ ಹೆಚ್ಚೆಚ್ಚು ದೀರ್ಘಕಾಲಿಕವಾಗಿ ಸ್ನಾನ ಮಾಡಿಸದಿರಿ. ಹೆಚ್ಚು ಬಿಸಿಯಿಂದ ಕೂಡಿದ ನೀರಿನಿಂದಲೂ ಸ್ನಾನ ಮಾಡಿಸದಿರಿ. ಇದರಿಂದ ಚರ್ಮ ಒಣಗುವ ಸಂದರ್ಭ ಎದುರಾಗಬಹುದು. ಬಾದಾಮಿ ಎಣ್ಣೆ, ಆಲಿವ್ ಎಣ್ಣೆಯಿಂದ ಕೂಡಿದ ಸೋಪ್ ಗಳನ್ನು ಬಳಕೆ ಮಾಡಬಹುದು. ಸ್ನಾನ ಮಾಡಿಸಿದ ಬಳಿಕ ಸೂಕ್ತ ಮಾಯಿಶ್ಚರೈಸರ್ ಬಳಕೆ ಮಾಡಿ, ಇದು ಮಗುವಿನ ಚರ್ಮವನ್ನು ರಕ್ಷಣೆ ಮಾಡುತ್ತದೆ. ಮಾಯಿಶ್ಚರೈಸರ್ ಬಳಕೆ ಮಗುವಿನ ಚರ್ಮವನ್ನು ಇಡೀ ದಿನ ರಕ್ಷಣೆ ಮಾಡುತ್ತದೆ. ಅಲ್ಲದೆ, ಚರ್ಮ ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ. 

ವಿಟಮಿನ್ ಇ ಇರುವ ಕ್ರೀಮ್ ಗಳು ಮಗುವಿನ ಚರ್ಮಕ್ಕೆ ಸೂಕ್ತವಾಗಿರುತ್ತದೆ. ಯಾವುದೇ ಲೋಷನ್ ಹಚ್ಚಿದ ನಂತರ ಮಗುವಿನ ಚರ್ಮ ಒಣಗುತ್ತಿದೆ ಎಂದೆನಿಸಿದರೆ, ಕೂಡಲೇ ಅಂತಹ ಲೋಷನ್ ಗಳನ್ನು ಬಳಸಿದಿರಿ. 

ವಾರಕ್ಕೊಮ್ಮೆಯಾದರೂ ಅರಿಶಿಣ ಹಾಗೂ ಹಾಲು ಪೇಸ್ಟ್ ಮಾಡಿ, ಆಗಾಗ ಮಗುವಿನ ಚರ್ಮಕ್ಕೆ ಹಚ್ಚಿ ಸ್ನಾನ ಮಾಡಿಸಿ. ಸೋಪಿನ ಬದಲು ಕಡಲೆಹಿಟ್ಟಿಗೆ ಹೆಚ್ಚಿನ ಆದ್ಯತೆ ನೀಡಿ. ಬೆಚ್ಚಗೆ ಮಾಡಿಕೊಂಡ ಎಣ್ಣೆಯಿಂದ ಮಸಾಜ್ ಮಾಡಿ. ಎಣ್ಣೆಯಿಂದ ಮಸಾಜ್ ಮಾಡುವುದರಿಂದ ದೇಹದ ಉಷ್ಣಾಂಶವನ್ನು ಸೂಕ್ತ ಪ್ರಮಾಣದಲ್ಲಿ ಕಾಪಾಡಲು ಸಹಾಯಕವಾಗುತ್ತದೆ. ವಿಟಮಿನ್ ಇ ಅಂಶ ಇರುವ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುತ್ತದೆ. ಅಲ್ಲದೆ, ಮಗುವಿಗೂ ಆರಾಮ ಎನಿಸುತ್ತದೆ. 

ಚಳಿಗಾಲದಲ್ಲಿ ಮಕ್ಕಳಿಗೆ ಶೀತ ನೆಗಡಿ ಸಾಮಾನ್ಯ ವಿವಿಧ ಸೋಂಕುಗಳಿಗು ಮಗು ತುತ್ತಾಗಬಹುದು ಎಚ್ಚರಿಕೆ ವಹಿಸಿ. ಹಾಲು ಬೆಚ್ಚಿಗುವಂತೆಯೇ ಮಗುವಿಗೆ ಕುಡಿಸಿ. ಮಗುವಿನ ಚರ್ಮ ಎಳೆಯದಾಗಿದ್ದು, ವಿಪರೀತವಾಗಿ ಬಿಸಿನೀರಿನಲ್ಲಿ ಸ್ನಾನ ಮಾಡಿಸದಿರಿ. ಮಗುವಿಗೆ ಬಳಕೆ ಮಾಡುವ ಯಾವುದೇ ವಸ್ತುವೇ ಆದರೂ, ಹೆಚ್ಚಿನ ಪದಾರ್ಥಗಳು ನೈಸರ್ಗಿಕವಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳಿ. ಮಗುವಿನ ಡೈಪರ್ ಗಳನ್ನು ಆಗಾಗ ಬದಲಾಯಿಸುತ್ತಿರಿ. ಡೈಪರ್ ಹಾಕುವ ಸ್ಥಳವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ತೇವಾಂಶವುಳ್ಳ ಡೈಪರ್ ಗಳು ಮಗುವಿಗೆ ಚರ್ಮದ ಸಮಸ್ಯೆಯನ್ನು ಎದುರು ಮಾಡುತ್ತವೆ. ಅಲ್ಲದೆ, ಇದರಿಂದ ಸೋಂಕುಗಳೂ ಕೂಡ ಬಹಳ ಬೇಗಾಗುತ್ತದೆ. ಅಲೋವೆರಾ ವೈಪ್ಸ್ ಗಳನ್ನು ಬಳಕೆ ಮಾಡಿ ಡೈಪರ್ ಹಾಕುವ ಸ್ಥಳವನ್ನು ಒರೆಸುತ್ತಿರಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com