ಕೊರೋನಾ ವೈರಸ್ ಕುರಿತ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ! 

ಕೊರೋನಾ ವೈರಸ್ ಕುರಿತಂತೆ ಸಾಧ್ಯವಾದಷ್ಟೂ ಮಟ್ಟಿಗೆ ಹರಡಿರುವ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ ಎಂಬ ಮಾಹಿತಿ ಬಹಿರಂಗವಾಗಿದೆ. 
ಸಾಮಾಜಿಕ ಜಾಲತಾಣ
ಸಾಮಾಜಿಕ ಜಾಲತಾಣ
Updated on

ನ್ಯೂಯಾರ್ಕ್: ಕೊರೋನಾ ವೈರಸ್ ಕುರಿತಂತೆ ಸಾಧ್ಯವಾದಷ್ಟೂ ಮಟ್ಟಿಗೆ ಹರಡಿರುವ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ ಎಂಬ ಮಾಹಿತಿ ಬಹಿರಂಗವಾಗಿದೆ. 

ಆನ್ನೆನ್ಬರ್ಗ್ ವಿಜ್ಞಾನ ಸಮೀಕ್ಷೆಯಲ್ಲಿ ಮಾರ್ಚ್ ತಿಂಗಳಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ, ಅಮೆರಿಕದ 1,008 ವಯಸ್ಕರನ್ನು ಪ್ರಶ್ನೆ ಕೇಳಲಾಗಿತ್ತು. ಈ ಪೈಕಿ ಪ್ರತಿಕ್ರಿಯೆ ನೀಡಿರುವವರ ಪೈಕಿ ಹಲವರು ಕೋವಿಡ್-19 ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಲಭ್ಯವಾಗಲು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳೂ ಕಾರಣ ಎಂಬುದನ್ನು ಯೂನಿವರ್ಸಿಟಿ ಆಫ್ ಪೆನ್ಸಲ್ವೇನಿಯಾ ಹಾಗೂ ಅರ್ಬಾನಾ-ಚಾಂಪೇನ್‌ನಲ್ಲಿ ಇಲಿನಾಯ್ಸ್ ನ ಸಂಶೋಧಕರು ಕಂಡುಕೊಂಡಿದ್ದಾರೆ. 

ಕೊರೋನ ಹರಡಿದ ಪ್ರಾರಂಭದ ದಿನಗಳಲ್ಲಿ ಅದನ್ನು ತಡೆಗಟ್ಟುವುದಕ್ಕೆ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಅದರ ಕುರಿತಾದ ಕಾನ್ಸ್ಪಿರೆಸಿ ಥಿಯರಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾದ ತಪ್ಪು ಮಾಹಿತಿ ಹರಡುತ್ತಿತ್ತು. ಅದನ್ನೆ ಬಹುತೇಕ ಮಂದಿ ನಂಬಿದ್ದರು ಎಂದು ಹಾರ್ವರ್ಡ್ ಕೆನಡಿ ಸ್ಕೂಲ್ ಮಿಸ್ ಇನ್ಫಾರ್ಮೇಷನ್ ರಿವ್ಯೂ ಜರ್ನಲ್ ನಲ್ಲಿ ಪ್ರಕಟವಾದ ಸಮೀಕ್ಷಾ ವರದಿ ಹೇಳಿದೆ. 

ಸಾಮಾಜಿಕ ಜಾಲತಣಾ ಅಥವಾ ಇನ್ನಿತರ ಮಾಧ್ಯಮಗಳನ್ನು ಗಮನಿಸುತ್ತಿದ್ದ ಜನರ ಪೈಕಿ ಶೇ.23 ರಷ್ಟು ಜನರು ಕೊರೋನಾ ವೈರಸ್ ನ್ನು ಚೀನ ಉದ್ದೇಶಪೂರ್ವಕವಾಗಿ ಕೊರೋನಾ ವೈರಸ್ ನ್ನು ಬಯೋ’ವೆಪನ್ ನ್ನಾಗಿ ಬಳಕೆ ಮಾಡಿದೆ ಎಂಬುದನ್ನು ನಂಬಿದ್ದರು. ಶೇ.21 ರಷ್ಟು ಮಂದಿ ಕೊರೋನಾವನ್ನು ತಡೆಗಟ್ಟಲು ವಿಟಮಿನ್ C ಉಪಯುಕ್ತವೆಂದು ನಂಬಿದ್ದರು. ಆದರೆ ಇವೆರಡಕ್ಕೂ ಸ್ಪಷ್ಟ ಸಾಕ್ಷ್ಯಾಧಾರ ಇನ್ನೂ ದೊರೆತಿಲ್ಲ ಅಥವಾ ಸದ್ಯದ ಮಟ್ಟಿಗೆ ಸುಳ್ಳು ಮಾಹಿತಿಗಳಾಗಿವೆ. 
 
ಫೇಸ್ ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್ ನ್ನು ವೀಕ್ಷಿಸುವ ಜನರು ಕೊರೋನಾ ತಡೆಗೆ ವಿಟಮೀನ್ C  ಉಪಯುಕ್ತ ಎಂದು ನಂದಿದ್ದರು. ಗೂಗಲ್ ನ್ಯೂಸ್, ಯಾಹೂ ನ್ಯೂಸ್ ನ್ನು ವೀಕ್ಷಿಸುವ ಜನರು (ಮಾರ್ಚ್ ತಿಂಗಳಲ್ಲಿ) ಕೊರೋನಾ ಹರಡುವಿಕೆ ತಡೆಗೆ ರೋಗಲಕ್ಷಣಗಳಿಲ್ಲದ ವ್ಯಕ್ತಿಯಿಂದ ದೂರ ಉಳಿಯುವ ಅಗತ್ಯವಿಲ್ಲವೆಂದೂ, ಕೈ ತೊಳೆಯುವುದು ಪರಿಣಾಮಕಾರಿಯಲ್ಲವೆಂದೂ ನಂಬಿದ್ದರು. 

ಆದರೆ ಮುಖ್ಯವಾಹಿನಿಯಲ್ಲಿರುವ ಸುದ್ದಿ ವಾಹಿನಿಗಳು ಹಾಗೂ ಮುದ್ರಣ ಮಾಧ್ಯಮಗಳು ಕೋವಿಡ್-19 ಹರಡುವಿಕೆ, ಅದನ್ನು ತಡೆಯುವ ವಿಧಾನ, ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ನಿಖರ, ನೈಜ ಮಾಹಿತಿ ನೀಡಿವೆ ಎಂದು ಸಮೀಕ್ಷೆಯ ಮೂಲಕ ತಿಳಿದುಬಂದಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com