ವರ್ಕ್ ಫ್ರಮ್ ಹೋಮ್ ನಿಂದ ಒತ್ತಡ, ನಿದ್ರಾಹೀನತೆ, ಖಿನ್ನತೆ!

ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌಕ್ ಜಾರಿಯಾಗಿ ಐದನೇ ವಾರಕ್ಕೆ ಕಾಲಿಟ್ಟಿರುವಂತೆ ಧೀರ್ಘಕಾಲದವರೆಗಿನ ವರ್ಕ್ ಫ್ರಮ್ ಹೋಮ್ ನಿಂದಾಗಿ ನಿದ್ರಾ ಹೀನತೆ, ಬೆನ್ನುನೋವು, ಒತ್ತಡ, ಖಿನ್ನತೆ ಮತ್ತಿತರ ಅಡ್ಡ ಪರಿಣಾಮಗಳನ್ನು ಎದುರಿಸುವಂತಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌಕ್ ಜಾರಿಯಾಗಿ ಐದನೇ ವಾರಕ್ಕೆ ಕಾಲಿಟ್ಟಿರುವಂತೆ ಧೀರ್ಘಕಾಲದವರೆಗಿನ ವರ್ಕ್ ಫ್ರಮ್ ಹೋಮ್ ನಿಂದಾಗಿ ನಿದ್ರಾ ಹೀನತೆ, ಬೆನ್ನುನೋವು, ಒತ್ತಡ, ಖಿನ್ನತೆ ಮತ್ತಿತರ ಅಡ್ಡ ಪರಿಣಾಮಗಳನ್ನು ಎದುರಿಸುವಂತಾಗಿದೆ. 

ಮಾರ್ಚ್ 25 ರಂದು ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ನಂತರ ಅನೇಕ ಕಂಪನಿಗಳು ಮತ್ತು ಸಂಸ್ಥೆಗಳು ಕಾರ್ಯವನ್ನು ಸ್ಥಗಿತಗೊಳಿಸಿವೆ. ದೇಶದಲ್ಲಿ ಕೋವಿಡ್-19 ಸೋಂಕಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಉದ್ದೇಶಿಸಲಾಗಿದ್ದ ಲಾಕ್ ಡೌನ್  ಮೇ. 3ರವರೆಗೂ ವಿಸ್ತರಣೆಯಾಗಿದೆ. 

ಬಹುತೇಕ ಸಮಯವನ್ನು ಲ್ಯಾಪ್ ಟಾಪ್ ಪರದೆ ಅಥವಾ ಮೊಬೈಲ್ ಫೋನ್ ಮುಂಭಾಗ ಕಳೆಯುವುದಾಗಿ ಹೇಳುವ ದೆಹಲಿ ಮೂಲದ ಟೆಕ್ಕಿ ಸುರೇಶ್ ಶರ್ಮಾ, ವರ್ಕ್ ಫ್ರಮ್ ಹೋಮ್ ಎಂಜಾಯ್ ಮಾಡುತ್ತಿದ್ದೀನಿ. ಆದಾಗ್ಯೂ, ಇದರಿಂದ ಆರೋಗ್ಯಕ್ಕೆ ಹಾನಿ ಅನ್ನಿಸುತ್ತಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಭೆಗಳಲ್ಲಿ ಪಾಲ್ಗೊಂಡು, ಜನರೊಂದಿಗೆ ಸಂವಹನ ನಡೆಸುತ್ತಿದ್ದೆ. ಆದರೆ, ಇದೀಗ ಎಲ್ಲವೂ ಆನ್ ಲೈನ್ ಆಗಿದೆ, ಆಗಾಗ್ಗೆ ತಲೆನೋವು ಮತ್ತು ಬೆನ್ನುನೋವು ಬರುವುದಾಗಿ ಹೇಳುತ್ತಾರೆ 

ವರ್ಕ್ ಫ್ರಮ್ ಹೋಮ್ ನಿಂದ ವೈಯಕ್ತಿಕ ಮತ್ತು ವೃತ್ತಿಜೀವನದ ಹಾದಿಯನ್ನು ಮಂಕಾಗಿಸುವುದರ ಜೊತೆಗೆ ನಿದ್ರಾಹೀನತೆಯನ್ನುಂಟುಮಾಡಿದೆ ಎಂದು ಬೆಂಗಳೂರು ಮೂಲದ ಟೆಕ್ಕಿ ಗೀತಾ ಮಲ್ಹೋತ್ರಾ ಹೇಳಿಕೊಂಡಿದ್ದಾರೆ

'ಯಾವಾಗ ಬೇಕೋ ಆವಾಗ ತಿಂತೀನಿ. ಕೆಲ ಸಂದರ್ಭಗಳಲ್ಲಿ ದಿನಕ್ಕೆ ಎರಡು ಬಾರಿ, ಮತ್ತೆ ಕೆಲವು ವೇಳೆ ದಿನಕ್ಕೆ ನಾಲ್ಕು ಬಾರಿ ತಿನ್ನುತ್ತೇನೆ. ಸ್ವಲ್ವ ನಡೆಯುವುದನ್ನು ಕೂಡಾ ನಿಲ್ಲಿಸಿದ್ದೇನೆ. ಲಾಕ್ ಡೌನ್ ಜಾರಿಯಾದ ಮೇಲೆ ನಾಲ್ಕು ಕೆಜಿ ದಪ್ಪ ಆಗಿದ್ದೇನೆ. ಆದರೆ, ರಾತ್ರಿ ಹೊತ್ತು ನಿದ್ರೆ ಬರಲ್ಲ ಅಂತಾ ತಮ್ಮ ಸಂಕಟವನ್ನು ಮಲ್ಹೋತ್ರಾ ಹಂಚಿಕೊಂಡಿದ್ದಾರೆ. 

ಅನೇಕ ದೊಡ್ಡ ಐಟಿ ಕಂಪನಿಗಳು ಸೇರಿದಂತೆ ಅಂದಾಜು 90ರಿಂದ 95 ರಷ್ಟು ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.  ಮನಸ್ಸು ಹಾಗೂ ದೇಹವನ್ನು ಸಮತೋಲನದಲ್ಲಿ ಇಡಲು ವ್ಯಾಯಾಮ, ಧ್ಯಾನ್ಯ ಮಾಡುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ದೈಹಿಕ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡದ ಹಿನ್ನೆಲೆಯಲ್ಲಿ ಇಂತಹ ಅನುಭವವಾಗುತ್ತಿರುತ್ತದೆ.  ಉದ್ಯೋಗ ಭದ್ರತೆಯ ಆತಂಕದಿಂದ ಕೆಲವರಿಗೆ ನಿದ್ರಾ ಹೀನತೆ ಉಂಟಾಗುತ್ತಿದೆ ಎಂದು ಗುರಾಗಾಂವ್ ನ ಪಾರಸ್ ಆಸ್ಪತ್ರೆಯ ಮನೋಶಾಸ್ತ್ರಜ್ಞೆ ಪ್ರೀತಿ ಸಿಂಗ್ ಹೇಳುತ್ತಾರೆ.

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಹೋದ್ಯೋಗಿಗಳನ್ನ ನೋಡುತ್ತಿವಿ. ವಿರಾಮದ ವೇಳೆಯಲ್ಲಿ  ಕಾಫಿ, ಅಥವಾ ಊಟಕ್ಕೆ ಹೋಗುತ್ತಿವೆ. ಆದರೆ, ಇದೀಗ ಮನೆಯಲ್ಲಿ ಇಡೀ ದಿನ ಕುಳಿತುಕೊಳ್ಳುವಂತಾಗಿದೆ. ಕೆಲಸದ ಅವಧಿ ಮುಗಿದ ಬಳಿಕವೂ ವಿಶ್ರಾಂತಿ ಸಿಗುತ್ತಿಲ್ಲ, ಕಚೇರಿಯಿಂದ ಸಂದೇಶ ಬರುತ್ತಿರುತ್ತದೆ ಎಂದು ಬೆಂಗಳೂರಿನಲ್ಲಿ ಆರ್ಕೆಟೆಕ್ ಆಗಿ ಕೆಲಸ ಮಾಡುತ್ತಿರುವ ಶೈಲಾಜಾ ತನ್ನದೇ ಆದ ನೋವನ್ನು ತೋಡಿಕೊಂಡಿದ್ದಾರೆ.

ವರ್ಕ್ ಫ್ರಮ್ ಹೋಮ್ ನಿಂದ ದೇಹದ ಆಕಾರವೇ ಬದಲಾಗಿದೆ. ತೀವ್ರ ಬೆನ್ನುನೋವು, ಭೀತಿ, ವಿರಾಮವೇ ಇಲ್ಲದಂತಾಗಿದೆ ಎಂದು ಬಹು ಗುರಾಂಗಾವ್ ಮೂಲದ ಐಟಿ ಉದ್ಯೋಗಿ ರಾಹುಲ್ ಕುಮಾರ್ ಹೇಳುತ್ತಾರೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಉಪದ್ರವಕಾರಿ ಸುದ್ದಿ ಕೂಡಾ ಜನರ ಮಾನಸಿಕ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತಿದೆ ಎಂದು ಕೆಲ ಆರೋಗ್ಯ ತಜ್ಞರು ಹೇಳುತ್ತಾರೆ.

ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಉಪದ್ರವಕಾರಿ ಸುದ್ದಿ ಜನರ ಆರೋಗ್ಯ ಹಾಗೂ ಅವರ ಕುಟುಂಬದವರ ಬಗ್ಗೆ ಭಯ ಪಡುವಂತೆ ಮಾಡುತ್ತಿದೆ. ಆದ್ದರಿಂದ ಡ್ಯಾನ್ಸ್, ಯೋಗ, ಮತ್ತಿತರ ಸಕಾರಾತ್ಮಕ ಚಿಂತನೆಗಳನ್ನು ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜೈಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್ಮೆಂಟ್ ರಿಸರ್ಚ್ ಯೂನಿವರ್ಸಿಟಿ ಅಧ್ಯಕ್ಷ ಪಂಕಜ್ ಗುಪ್ತಾ ಸಲಹೆ ನೀಡಿದ್ದಾರೆ.

ಲಾಕ್ ಡೌನ್ ಕಾರಣದಿಂದಾಗಿ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನರಿಗಾಗಿ ಸರ್ಕಾರ ಉಚಿತ ಸಹಾಯವಾಣಿ ಸಂಖ್ಯೆ-08046110007ನ್ನು ತೆರೆದಿದೆ.  ಅಗತ್ಯವಿರುವವರು ಇದನ್ನು ಸಂಪರ್ಕಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com