ಪ್ರತಿದಿನ ಒಂದು ಸ್ಲೈಸ್ ಚೀಸ್​​ ಸೇವನೆ: ಆರೋಗ್ಯ ಪ್ರಯೋಜನಗಳು ಏನು ಗೊತ್ತೇ?

ನಿಮ್ಮ ದೇಹದಲ್ಲಿ ಲ್ಯಾಕ್ಟೋಸ್ ಅಂಶ ಕಡಿಮೆ ಇದ್ರೆ, ನಿಮಗೆ ಚೀಸ್ ಅತ್ಯಂತ ಪ್ರಯೋಜನಕಾರಿ. ಈ ಉತ್ಪನ್ನವು ಆರೋಗ್ಯಕ್ಕೆ ಅಮೂಲ್ಯವಾದ ಅನೇಕ ಅಂಶಗಳನ್ನು ಒಳಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಿಮ್ಮ ದೇಹದಲ್ಲಿ ಲ್ಯಾಕ್ಟೋಸ್ ಅಂಶ ಕಡಿಮೆ ಇದ್ರೆ, ನಿಮಗೆ ಚೀಸ್ ಅತ್ಯಂತ ಪ್ರಯೋಜನಕಾರಿ. ಈ ಉತ್ಪನ್ನವು ಆರೋಗ್ಯಕ್ಕೆ ಅಮೂಲ್ಯವಾದ ಅನೇಕ ಅಂಶಗಳನ್ನು ಒಳಗೊಂಡಿದೆ. ನಮ್ಮ ದೇಹದ ಮೂಳೆಗಳನ್ನು ಬಲಪಡಿಸುವುದರಿಂದ ಹಿಡಿದು, ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುವವರೆಗೆ ಚೀಸ್​​ ತುಂಬಾ ಪ್ರಯೋಜನಕಾರಿಯಾಗಿದೆ.

ಹೆಲ್ತ್‌ಲೈನ್ ವರದಿಯ ಪ್ರಕಾರ, ಚೀಸ್ ವಿಟಮಿನ್ ಎ, ವಿಟಮಿನ್ ಬಿ 12, ಸತು, ರಂಜಕ, ಮೆಗ್ನೀಸಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಇದು ಹಲ್ಲುಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಚೀಸ್‌ನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಮತ್ತು ವಿಟಮಿನ್ ಕೆ 2 ಸಮೃದ್ಧವಾಗಿದೆ.

ಚೀಸ್​​ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಮ್ಮಿಂದ ದೂರವಿಡುತ್ತದೆ. ಅಲ್ಲದೇ ಎನ್​ಬಿಟಿ ಪ್ರಕಾರ, ಪ್ರತಿದಿನ ಒಂದು ಸ್ಲೈಸ್ ಚೀಸ್​​ನನ್ನು ಸೇವಿಸುವುದು ಒಂದು ಲೋಟ ಹಾಲಿಗೆ ಸಮವಾಗಿದೆ.

ಚೀಸ್‌ನ ಕೆಲವು ಪ್ರಯೋಜನಗಳು ಇಲ್ಲಿವೆ:                                                                                                      

ಕ್ಯಾವಿಟಿ ತೆಗೆದುಹಾಕುತ್ತದೆ:                                                                                                                          ಹೆಲ್ತ್‌ಲೈನ್ ಪ್ರಕಾರ, ಹಲ್ಲುಗಳನ್ನು ರಕ್ಷಿಸುವಲ್ಲಿ ಚೀಸ್ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದು ಹಲ್ಲುಗಳ ಸುತ್ತ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರಲ್ಲಿರುವ ಲ್ಯಾಕ್ಟಿಕ್ ಆಮ್ಲವು ಹಲ್ಲಿನ ದಂತಕವಚವನ್ನು ರಕ್ಷಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ ಡಿ ಹಲ್ಲುಗಳನ್ನು ಒಳಗಿನಿಂದ ಗಟ್ಟಿಯಾಗಿರಿಸುತ್ತದೆ ಮತ್ತು ಹಾನಿಯಾಗದಂತೆ ತಡೆಯುತ್ತದೆ.

ತೂಕವನ್ನು ನಿಯಂತ್ರಿಸುತ್ತದೆ:                                                                                                                      ಪ್ರತಿದಿನ ಸಾಕಷ್ಟು ಪ್ರಮಾಣದ ಚೀಸ್ ಸೇವನೆಯು ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ನೀವು ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ನಿಮ್ಮ ದೈನಂದಿನ ಆಹಾರದಲ್ಲಿ ಚೀಸ್​ನನ್ನು ಸೇರಿಸಿ.

ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ:                                                                                                         ಚೀಸ್ ಉತ್ತಮ ಸೂಕ್ಷ್ಮ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಅವು ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇವು ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಇದಲ್ಲದೆ, ಚೀಸ್ ಸ್ಯಾಚುರೇಟೆಡ್ ಕೊಬ್ಬು ಆಗಿದ್ದು, ಅದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಮೆದುಳಿಗೆ ಒಳ್ಳೆಯದು:                                                                                                                                ಚೀಸ್ ಒಮೆಗಾ 3, 6 ಮತ್ತು ಅಮೈನೋ ಆಮ್ಲಗಳಂತಹ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ಮೆದುಳಿನಲ್ಲಿ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ.

ಎಲುಬುಗಳನ್ನು ಗಟ್ಟಿಗೊಳಿಸುತ್ತದೆ:                                                                                                                ವಿಟಮಿನ್ ಬಿ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿರುವ ಇದು ಮೂಳೆಗಳನ್ನು ಬಲಪಡಿಸುತ್ತದೆ. ಹಾಗಾಗಿ ಇದು ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆಸ್ಟಿಯೊಪೊರೋಸಿಸ್‌ನಿಂದ ವಯಸ್ಸಾದವರನ್ನು ರಕ್ಷಿಸಲು ಚೀಸ್​ನನ್ನು ಸಹ ಸೇವಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com