ದೇಹದ ವ್ಯಾಯಾಮ ಜೊತೆಗೆ ತ್ವಚೆಯ ಆರೈಕೆ ಬಗ್ಗೆಯೂ ಇರಲಿ ಗಮನ!
ವ್ಯಾಯಾಮ ಮಾಡುವುದು ದೇಹ ಹಾಗೂ ಮನಸ್ಸು ಎರಡಕ್ಕೂ ಉತ್ತಮವಾದದ್ದು. ಆದರೆ, ವ್ಯಾಯಾಮ ಮಾಡುವಾಗ ಎದುರಾಗುವ ತ್ವಚೆಯ ಸಮಸ್ಯೆಗಳ ಬಗ್ಗೆ ನಿಮಗೆಷ್ಟು ಗೊತ್ತು ? ಈ ಸಮಸ್ಯೆಗಳನ್ನು ದೂರಾಗಿಸುವುದು ಹೇಗೆ? ಇಲ್ಲಿದೆ ಮಾಹಿತಿ..
Published: 24th August 2021 01:09 PM | Last Updated: 24th August 2021 01:33 PM | A+A A-

ಸಾಂದರ್ಭಿಕ ಚಿತ್ರ
ವ್ಯಾಯಾಮ ಮಾಡುವುದು ದೇಹ ಹಾಗೂ ಮನಸ್ಸು ಎರಡಕ್ಕೂ ಉತ್ತಮವಾದದ್ದು. ಆದರೆ, ವ್ಯಾಯಾಮ ಮಾಡುವಾಗ ಎದುರಾಗುವ ತ್ವಚೆಯ ಸಮಸ್ಯೆಗಳ ಬಗ್ಗೆ ನಿಮಗೆಷ್ಟು ಗೊತ್ತು ? ಈ ಸಮಸ್ಯೆಗಳನ್ನು ದೂರಾಗಿಸುವುದು ಹೇಗೆ? ಇಲ್ಲಿದೆ ಮಾಹಿತಿ...
ವ್ಯಾಯಾಮ ಮಾಡುವಾಗ ಕೇವಲ ಮೈಕಟ್ಟು ನೋಡಿಕೊಂಡರಷ್ಟೇ ಸಾಲದು ತ್ವಚೆ ಆರೈಕೆ ಕೂಡ ಮಾಡುವುದು ಮುಖ್ಯವಾಗುತ್ತದೆ. ವರ್ಕೌಟ್ ಮಾಡುವಾಗ ಸಾಮಾನ್ಯವಾಗಿ ಬೆವರು, ಧೂಳು ಹಾಗೂ ಕೆಲ ಬ್ಯಾಕ್ಟೀರಿಯಾಗಳು ಎದುರಾಗುತ್ತವೆ, ಈ ವೇಳೆ ಚರ್ಮದ ಸಮಸ್ಯೆಗಳು ಶುರುವಾಗುತ್ತವೆ.
ವ್ಯಾಯಾಮ ಮಾಡುವಾಗ ಬರುವ ಬೆವರಿನಿಂದ ಬ್ಯಾಕ್ಟಿರಿಯಾಗಳು ಎದುರಾಗುತ್ತವೆ. ಚರ್ಮದಲ್ಲಿ ಧೂಳುಗಳು ಉಳಿದುಕೊಳ್ಳುತ್ತವೆ. ವ್ಯಾಯಾಮದಿಂದ ಬೆವರು ಹೊರ ಬರುವ ಹಿನ್ನೆಲೆಯಲ್ಲಿ ಚರ್ಮ ಒಣಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮೊಡವೆಗಳು ಹಾಗೂ ಇತರೆ ಚರ್ಮ ಸಮಸ್ಯೆಗಳಿಂದ ದೂರ ಇರಲು ತ್ವಚೆಯ ಆರೈಕೆ ಮುಖ್ಯವಾಗುತ್ತದೆ ಎಂದು ಚರ್ಮರೋಗ ತಜ್ಞ, ಕಾಸ್ಮೆಟಾಲಜಿಸ್ಟ್ ಮತ್ತು ಟ್ರೈಕೊಲಾಜಿಸ್ಟ್ ಡಾ ಪಿ ಸ್ವಪ್ನಾ ಪ್ರಿಯಾ ಅವರು ಹೇಳಿದ್ದಾರೆ.
ವರ್ಕೌಟ್ ವೇಳೆ ತ್ವಚೆಯ ಆರೈಕೆ ಕುರಿತು ರೂಪದರ್ಶಿ ತನ್ವಿ ಆಕಾಂಕ್ಷ ಕೊಪ್ಪಿನೀಡಿ ಅವರು ಕೆಲ ಸಲಹೆಗಳನ್ನು ನೀಡಿದ್ದಾರೆ. ವ್ಯಾಯಾಮಕ್ಕೂ ಮುನ್ನ ಮುಖವನ್ನು ತೊಳೆದುಕೊಳ್ಳುವುದು ಹಾಗೂ ಮನೆಯಲ್ಲಿಯೇ ವ್ಯಾಯಾಮ ಮಾಡುತ್ತಿದ್ದರೆ ಲೈಟ್ ಮಾಯಿಶ್ಚರೈಸರ್ ಬಳಸಬಹುದು. ಒಂದು ವೇಳೆ ಹೊರಗೆ ವರ್ಕೌಟ್ ಮಾಡುವುದಾದರೆ, ಸನ್ ಸ್ಕ್ರೀನ್ ಬಳಕೆ ಮಾಡಬೇಕು. ವರ್ಕೌಟ್ ಗೂ ಮೊದಲು ಮಾಯಿಶ್ಚರೈಸರ್ ಮತ್ತು ಲಿಪ್ ಬಾಮ್ ಹಚ್ಚಿಕೊಳ್ಳಬೇಕು. ಲಿಪ್ ಬಾಮ್ ತುಟಿಗಳು ಒಡೆಯುವುದನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದ್ದಾರೆ.
ವರ್ಕೌಟ್'ಗೂ ಮುನ್ನ ತ್ವಚೆಯ ಆರೈಕೆ ಹೇಗೆ?
ತ್ವಚೆಯನ್ನು ಸ್ವಚ್ಛಗೊಳಿಸಿ: ವರ್ಕೌಟ್ ಆರಂಭಿಸುವುದಕ್ಕೂ ಮೊದಲು ನಿಮ್ಮ ಮುಖವನ್ನು ತೊಳೆದುಕೊಳ್ಳಿ, ಇದು ನಿಮಗೆ ಆರಾಮ ಮತ್ತು ತಾಜಾತನವನ್ನು ನೀಡುತ್ತದೆ. ಮೇಕಪ್ ಹಚ್ಚಿದ್ದರೆ ಎಲ್ಲವನ್ನೂ ತೆಗೆಯಿರಿ. ಏಕೆಂದರೆ, ಇದು ರಂಧ್ರಗಳು ಹಾಗೂ ಬೆವರನ್ನು ನಿಯಂತ್ರಿಸುತ್ತದೆ. ಅಲ್ಲದೆ, ಚರ್ಮ ಉಸಿರಾಡಲು ಸಹಾಯ ಮಾಡುತ್ತದೆ.
ಮಾಯಿಶ್ಚರೈಸ್: ವ್ಯಾಯಾಮ ಮಾಡುವ ವೇಳೆ ಹೆಚ್ಚು ಬೆವರುವುದರಿಂದ ಚರ್ಮ ಒಣಗುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಮಾಯಿಶ್ಚರೈಸರ್ ಬಳಕೆ ಮಾಡಬೇಕು. ಇದು ನಿಮ್ಮ ಚರ್ಮವನ್ನು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ. ಮುಖವನ್ನು ರಿಫ್ರೆಶ್ ಮಾಡಲು ಸೀರಮ್ ನ್ನೂ ಕೂಡ ಬಳಕೆ ಮಾಡಬಹುದು.
ಎಸ್‌ಪಿಎಫ್ ಪ್ರೊಟೆಕ್ಷನ್: ಬಿಸಿಲು ಇರುವ ಸ್ಥಳದಲ್ಲಿ ವರ್ಕೌಟ್ ಮಾಡುತ್ತಿದ್ದರೆ, ಸನ್ ಸ್ಕ್ರೀನ್ ಬಳಸುವುದು ಉತ್ತಮ. ಇದು ಚರ್ಮ ಕಪ್ಪಗಾಗುವುದನ್ನು ತಡೆಯುತ್ತದೆ. ಒಂದು ಗಂಟೆಗಿಂತಲೂ ಹೆಚ್ಚು ಕಾಲ ಬಿಸಿಲಿನಲ್ಲಿದ್ದರೆ, ಮತ್ತೆ ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದನ್ನು ಮರೆಯದಿರಿ.
ಡಿಯೋಡರೈಜರ್: ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ತಪ್ಪಿಸಲು ನಿಮ್ಮ ಅಂಡರ್ ಆರ್ಮ್ಸ್ ಮತ್ತು ಕುತ್ತಿಗೆಗೆ ಡಿಯೋಡರೆಂಟ್ ಅಥವಾ ಆಂಟಿಪೆರ್ಸ್ಪಿರಂಟ್ ಅನ್ನು ಸಿಂಪಡಿಸಿಕೊಳ್ಳಿ.
ವರ್ಕೌಟ್ ಮಾಡುವಾಗ ತ್ವಚೆಯ ಆರೈಕೆ ಹೇಗೆ...?
- ಮುಖವನ್ನು ಮುಟ್ಟದಿರಿ: ವರ್ಕೌಟ್ ಮಾಡುವಾಗ, ಬಳಸಿದ ಉಪಕರಣಗಳ ಮೇಲೆ ಧೂಳು ಹಾಗೂ ಬ್ಯಾಕ್ಟೀರಿಯಾಗಳು ಇರುತ್ತವೆ. ಹೀಗಾಗಿ ಕಾಣದಿದ್ದರೂ ಕೈಗಳು ಕೊಳಕಾಗಿರುತ್ತವೆ. ಈ ವೇಳೆ ಮುಖವನ್ನು ಸ್ಪರ್ಶಿಸುವುದರಿಂದ ಚರ್ಮ ಸಮಸ್ಯೆಗಳು ಎದುರಾಗಬಹುದು.
- ಬಟ್ಟೆಯಿಂದ ಮುಖವನ್ನು ಉಜ್ಜುವುದನ್ನು ಮಾಡದಿರಿ. ಏಕೆಂದರೆ ಇದರಿಂದ ತುರಿಕೆ ಹಾಗೂ ದದ್ದುಗಳಾಗಬಹುದು.
- ಹೈಡ್ರೇಟ್: ಸಾಧ್ಯವಾದಷ್ಟು ಹೆಚ್ಚಾಗಿ ನೀರು ಕುಡಿಯಿರಿ.
ವರ್ಕೌಟ್ ಮಾಡಿದ ಬಳಿಕ ತ್ವಚೆಯ ಆರೈಕೆ ಹೇಗೆ...?
- ಮುಖವನ್ನು ಸ್ವಚ್ಛಗೊಳಿಸಿ: ಬೆವರು ಹಾಗೂ ಎಣ್ಣೆಯುಕ್ತ ತ್ವಚೆಯು ಮುಖದಲ್ಲಿ ರಂಧ್ರಗಳು ಹಾಗೂ ಚರ್ಮ ಒಡೆಯಲು ಕಾರಣವಾಗುತ್ತದೆ. ಹೀಗಾಗಿ ವರ್ಕೌಟ್ ಆದ ಕೂಡಲೇ ಮುಖವನ್ನು ಸ್ವಚ್ಛಗೊಳಿಸುವುದನ್ನು ಮರೆಯದಿರಿ.
- ಸ್ನಾನ ಮಾಡಿ: ಸ್ನಾನ ಮಾಡುವುದರಿಂದ ಚರ್ಮ ಸ್ವಚ್ಛಗೊಳ್ಳುತ್ತದೆ. ಚರ್ಮದ ರಂಧ್ರಗಳೂ ಮುಚ್ಚಿಕೊಳ್ಳುತ್ತವೆ. ಸ್ನಾನದ ಬಳಿಕ ಮಾಯಿಶ್ಚರೈಸ್ ಹಚ್ಚಿಕೊಳ್ಳುವುದನ್ನು ಮರೆಯದಿರಿ. ಇದು ಚರ್ಮವನ್ನು ಮೃದುವಾಗಿರುವಂತೆ ಮಾಡುತ್ತದೆ.