ಗ್ರೀನ್ ಟೀ: ಹೊಸ ಜೀವನಶೈಲಿಯ ಪ್ರತೀಕ; ಆರೋಗ್ಯಕ್ಕೂ ಪೂರಕ!

ಚಹಾ ಆಯ್ಕೆಗೆ ಪೈಪೋಟಿ ನೀಡುವ ಗ್ರೀನ್ ಟೀ ಇತ್ತೀಚಿನ ದಿನಗಳಲ್ಲಿ ಮನೆಮಾತಾಗಿದೆ. ಇದರ ಸ್ವಾದಭರಿತ ಸುವಾಸನೆ ಕೇವಲ ಕುಡಿಯಲು ಮಾತ್ರವಲ್ಲ, ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸುತ್ತದೆ. 

Published: 12th May 2021 02:48 PM  |   Last Updated: 12th May 2021 03:05 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಚಹಾ ಆಯ್ಕೆಗೆ ಪೈಪೋಟಿ ನೀಡುವ ಗ್ರೀನ್ ಟೀ ಇತ್ತೀಚಿನ ದಿನಗಳಲ್ಲಿ ಮನೆಮಾತಾಗಿದೆ. ಇದರ ಸ್ವಾದಭರಿತ ಸುವಾಸನೆ ಕೇವಲ ಕುಡಿಯಲು ಮಾತ್ರವಲ್ಲ, ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸುತ್ತದೆ. 

ಇಲ್ಲಿಯವರೆಗೂ ಅಪರಿಚಿತವಾಗಿದ್ದ ಗ್ರೀನ್ ಟೀ ಈಗ ಎಲ್ಲೆಡೆ ಲಭ್ಯವಾಗುತ್ತಿದೆ. ಇದಕ್ಕೆ ಇದರ ಆರೋಗ್ಯಕರ ಗುಣಗಳೇ ಕಾರಣ.

ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್‌ಗಳು (ಉತ್ಕರ್ಷಣ ನಿರೋಧಕ) ಮತ್ತು ಇತರ ಖನಿಜಗಳ ಪ್ರಮಾಣವನ್ನು ಪರಿಗಣಿಸಿದರೆ ಇದೊಂದು ಅತ್ಯುತ್ತಮವಾದ ಪಾನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರೀನ್ ಟೀ ನೋಡಲು ಮಾತ್ರ ಹಸಿರಾಗಿರದೆ ದೇಹವನ್ನೂ ಹಸಿರುಗೊಳಿಸಲು ಸಮೃದ್ಧವಾಗಿದೆ.

ಇದರಲ್ಲಿರುವ ಫ್ಲೇವನಾಯ್ಡ್, ಕ್ಯಾಟೆಚಿನ್ ಎಂಬ ಪಾಲಿಫಿನಾಲ್ಗಳು ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಂತೆ ಕೆಲಸ ಮಾಡುತ್ತವೆ. ಇದು ಜೀವಕೋಶಗಳ ಸವೆತ ತಡೆಯುವುದು ಮತ್ತು ಹೊರಪದರಗಳಿಗೆ ಬಲಿಷ್ಟತೆಯನ್ನು ನೀಡುವ ಕಾರಣ ಅತ್ಯಂತ ತಳಮಟ್ಟದಿಂದ ಆರೋಗ್ಯವನ್ನು ವೃದ್ಧಿಸುತ್ತದೆ.

ಮನಸ್ಸಿಗೆ ನವಚೈತನ್ಯ ತುಂಬುತ್ತದೆ:

ಗ್ರೀನ್ ಟೀಯಲ್ಲಿ ಶೇ.2-4 ಕೆಫೀನ್ ಅಂಶ ಇದ್ದು, ಇದು ನಮ್ಮ ಮನಸ್ಸನ್ನು ಜಾಗರೂಕತೆಯಿಂದ ಇರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಜೊತೆಗೆ ಮೆದುಳಿನ ಕಾರ್ಯಚಟುವಟಿಕೆಯನ್ನು ಸುಧಾರಿಸಲು ಸಹ ಕೆಲಸ ಮಾಡುತ್ತದೆ, ಸ್ವಲ್ಪ ಕೆಲಸ ಮಾಡಿದ ನಂತರ ಮಾನಸಿಕವಾಗಿ ಸುಸ್ತಾಗುತ್ತಿದ್ದರೆ ಈ ಗ್ರೀನ್ ಟೀ ಆಯಾಸವನ್ನು ದೂರಾಗಿಸುತ್ತದೆ.

ಗ್ರೀನ್ ಟೀಯಲ್ಲಿ ಥೈನೈನ್ ಅಂಶವಿದೆ, ಇದರಲ್ಲಿ ಅಮೈನೋ ಆಮ್ಲಗಳಿವೆ. ಅಮೈನೊ ಆಮ್ಲಗಳು ದೇಹದಲ್ಲಿ ತಾಜಾತನವನ್ನು ಕಾಪಾಡಿಕೊಳ್ಳುತ್ತವೆ ಮತ್ತು ನಿಮಗೆ ಆಯಾಸವಾಗುವುದಿಲ್ಲ. ಇದು ಯಾವಾಗಲೂ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ.

ಪ್ರತಿ ದಿನ ಬೆಳಗ್ಗೆ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದರಿಂದ ದೀರ್ಘ ಕಾಲದಿಂದ ಬಳಲುತ್ತಿರುವ ಉರಿಯೂತದ ಸಮಸ್ಯೆಯ ಜೊತೆಗೆ ಇನ್ನಿತರ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಮೆದುಳಿಗೆ ಚುರುಕುತನದ ಪ್ರಭಾವ ಉಂಟಾಗುವುದರಿಂದ ಚಟುವಟಿಕೆಯಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಲು ಸಹಾಯವಾಗುತ್ತದೆ.

ತ್ವಚೆಯ ಆರೋಗ್ಯದ ಮೇಲೆ ಗ್ರೀನ್ ಟೀ ಪರಿಣಾಮ:

ನಮ್ಮ ತ್ವಚೆಯ ಕಾಂತಿ ನಮ್ಮ ಸೌಂದರ್ಯವನ್ನು ಬಿಂಬಿಸುತ್ತದೆ. ನಮ್ಮ ದೇಹದ ಚರ್ಮ ಆರೋಗ್ಯ ಭರಿತವಾದರೆ ಹಲವಾರು ಚರ್ಮ ವ್ಯಾಧಿಗಳಿಂದ ನಾವು ದೂರ ಉಳಿಯಬಹುದು.

ನಿರ್ಜಲೀಕರಣದ ಸಮಸ್ಯೆ ಹೊಂದಿಲ್ಲದಿದ್ದರೆ ನಮ್ಮ ಚರ್ಮ ಆರೋಗ್ಯದಿಂದಲೇ ಕೂಡಿರುತ್ತದೆ. ಸೀಮಿತವಾದ ಗ್ರೀನ್ ಟೀ ಸೇವನೆಯ ಅಭ್ಯಾಸ ನಮ್ಮದಾದರೆ ಅದರಲ್ಲಿರುವ ಬಹಳಷ್ಟು ಬಗೆಯ ಪೌಷ್ಟಿಕ ಸತ್ವಗಳು ಮತ್ತು ಆಂಟಿ - ಆಕ್ಸಿಡೆಂಟ್ ಅಂಶಗಳು ನಮ್ಮ ಚರ್ಮಕ್ಕೆ ಪೋಷಕಾಂಶಗಳನ್ನು ಒದಗಿಸಿ ಆರೋಗ್ಯಕರವಾದ ತ್ವಚೆಯನ್ನು ನಮ್ಮದಾಗಿಸುತ್ತದೆ.

ದೇಹದಲ್ಲಿನ ಕೊಬ್ಬು ನಿವಾರಣೆಗೆ ಸಹಾಯ:

ಗ್ರೀನ್ ಟೀನಲ್ಲಿ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ಇಜಿಸಿಜಿ ಕ್ಯಾಟೆಚಿನ್ಸ್) ಎಂಬ ಕೆಲವು ರೀತಿಯ ಫ್ಲೇವನಾಯ್ಡ್ಗಳಿವೆ. ಇದು ದೇಹದ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ಕೊಬ್ಬಿನ ಉತ್ಕರ್ಷಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹೆಚ್ಚುವರಿ ಕೊಬ್ಬು ಹೆಚ್ಚಾಗಿ ಮಧುಮೇಹಕ್ಕೆ ಕಾರಣವಾಗುತ್ತದೆ. ಇಜಿಸಿಜಿ ಕ್ಯಾಟೆಚಿನ್ಸ್ ಗ್ಲೂಕೋಸ್ ವಿರುದ್ಧ ಸಹಿಷ್ಣುತೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ವ್ಯಕ್ತಿಯ ಟೈಪ್ 1 ಡಯಾಬಿಟಿಸ್ ಅಭಿವೃದ್ಧಿಯಾಗುವುದಿಲ್ಲ. ಅಲ್ಲದೆ, ಇಜಿಸಿಜಿ ಕ್ಯಾಟೆಚಿನ್ಸ್ ಟೈಪ್ 2 ಡಯಾಬಿಟಿಸ್ ನಿಂದ ನಿಮ್ಮನ್ನು ರಕ್ಷಿಸುತ್ತವೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲಾಗದೆ ಏರುತ್ತಿದ್ದರೆ ಮಧುಮೇಹದ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಗ್ರೀನ್ ಟೀ ಸೇವಿಸುವುದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುವ ಅಡ್ರಿನಾಲಿನ್ ಹಾರ್ಮೋನ್ ಉತ್ಪಾದನೆಯು ಕಡಿಮೆಯಾಗುತ್ತದೆ. 

ಜೀರ್ಣ ಕ್ರಿಯೆಗೂ ಸಹಾಯಕ:

ಗ್ರೀನ್ ಟೀ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಸಾಮರ್ಥ್ಯಕ್ಕೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಒತ್ತಡ, ಖಿನ್ನತೆ ಅಥವಾ ಆತಂಕಕ್ಕೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳಿಂದ ನಿಮ್ಮನ್ನು ತಡೆಯುತ್ತದೆ. ಮಧುಮೇಹ ಹೊಂದಿರುವವರಿಗಂತೂ ಈ ಗ್ರೀನ್ ಟೀ ಪರಿಣಾಮಕಾರಿಯಾಗಿದೆ.


Stay up to date on all the latest ಜೀವನಶೈಲಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp