ನೀವು ಓವರ್ ಥಿಂಕ್ ಮಾಡ್ತೀರಾ? ಅದರ ಸೈಡ್ ಎಫೆಕ್ಟ್ ಏನು ಗೊತ್ತಾ?

ಹೆಚ್ಚಿನ ಸಂದರ್ಭಗಳಲ್ಲಿ ಜನರಿಗೆ ತಾವು ಓವರ್ ಥಿಂಕಿಂಗ್ ಸಮಸ್ಯೆಯನ್ನು ಹೊಂದಿರುವುದೇ ಗೊತ್ತಿರುವುದಿಲ್ಲ. ತಾವು ಬರೀ ಥಿಂಕಿಂಗ್ ಮಾಡುತ್ತಿದ್ದೇವೆ ಎಂದು ಅಂದುಕೊಂಡಿರುತ್ತಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಥಿಂಕ್ ಮಾಡುವುದು ಒಳ್ಳೆಯದು. ಆದರೆ ಓವರ್ ಆಗಿ ಮಾಡುವುದು ಮಾತ್ರ ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ ಹಾಗೆಯೇ ಥಿಂಕಿಂಗ್ ಕೂಡಾ ಅತಿಯಾದರೆ ಆರೋಗ್ಯಕ್ಕೆ ವಿಷವಿದ್ದಂತೆ.

ಓವರ್ ಥಿಂಕಿಂಗ್ ಅನ್ನು ಅನಾಲಿಸಿಸ್ ಪ್ಯಾರಾಲಿಸಿಸ್ ಎಂದೂ ಕರೆಲಾಗುತ್ತದೆ. ಇದು ಜನರಲ್ಲಿ ನಕಾರಾತ್ಮಕ ಚಿಂತನೆಗಳನ್ನು, ಕೆಟ್ಟ ಯೋಚನೆಗಳನ್ನು ಹುಟ್ಟು ಹಾಕುತ್ತದೆ.     

ಕಂಡು ಹಿಡಿಯುವುದು ಹೇಗೆ?

ಹೆಚ್ಚಿನ ಸಂದರ್ಭಗಳಲ್ಲಿ ಜನರಿಗೆ ತಾವು ಓವರ್ ಥಿಂಕಿಂಗ್ ಸಮಸ್ಯೆಯನ್ನು ಹೊಂದಿರುವುದೇ ಗೊತ್ತಿರುವುದಿಲ್ಲ. ತಾವು ಬರೀ ಥಿಂಕಿಂಗ್ ಮಾಡುತ್ತಿದ್ದೇವೆ ಎಂದು ಅಂದುಕೊಂಡಿರುತ್ತಾರೆ. 

ಥಿಂಕಿಂಗ್ ಮತ್ತು ಓವರ್ ಥಿಂಕಿಂಗ್ ಮಾಡುವವರ ನಡುವಿನ ಪ್ರಮುಖ ವ್ಯತ್ಯಾಸ ಎನೂ ಅಂದರೆ, ಥಿಂಕ್ ಮಾಡುವವರಿಗೆ ತಾವು ಯಾವಾಗ ಯೋಚನೆ ಮಾಡುವುದನ್ನು ನಿಲ್ಲಿಸಬೇಕೆಂದು ತಿಳಿದಿರುತ್ತದೆ. ಆದರೆ ಓವರ್ ಥಿಂಕ್ ಮಾಡುವವರು ಸದಾ ಕಾಲ ಯೋಚಿಸುತ್ತಲೇ ಇರುತ್ತಾರೆ. 

ಓವರ್ ಥಿಂಕಿಂಗ್ ಅಡ್ಡಪರಿಣಾಮಗಳು

ಓವರ್ ಥಿಂಕ್ ಮಾಡುವವರಿಗೆ ರಾತ್ರಿ ನಿದ್ದೆ ಚೆನ್ನಾಗಿ ಬರುವುದಿಲ್ಲ. ಅವರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ಅವರ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂದರೆ ಅವರು ಜಾಗೃತರಾಗಿರುವುದಿಲ್ಲ. 

ಅಲ್ಲದೆ ಓವರ್ ಥಿಂಕಿಂಗ್ ನಿಂದ ಬಳಲುತ್ತಿರುವವರು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎಡವುತ್ತಾರೆ. ಅದರಿಂದ ಅವರ ಕ್ರಿಯಾಶೀಲತೆ ಹಾಳಾಗುತ್ತದೆ. 

ಪರಿಹಾರ ಏನು?

  • ಓವರ್ ಥಿಂಕಿಂಗ್ ಸಮಸ್ಯೆಯನ್ನು ಮೊದಲ ಹಂತದಲ್ಲಿಯೇ ಪತ್ತೆ ಹಚ್ಚುವುದು
  • ರೇಕಿ ಹೀಲಿಂಗ್ ಪದ್ಧತಿಯಿಂದ ಮನಸ್ಸನ್ನು ಶಾಂತಗೊಳಿಸಬಹುದು
  • ಪ್ರತಿದಿನ ವ್ಯಾಯಾಮ ಮಾಡುವುದರಿಂದ, ಉಸಿರಾಟ ವ್ಯಾಯಾಮ ಮಾಡುವುದರಿಂದ ಯೋಚನಾಲೋಕಕ್ಕೆ ಜಾರದೇ ವಾಸ್ತವದಲ್ಲಿ ಜೀವನ ಕಂಡುಕೊಳ್ಳಬಹುದು 
  • ನೆಗೆಟಿವ್ ಯೋಚನೆಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಿ ಪಾಸಿಟಿವ್ ಆದ, ಒಳ್ಲೆಯ ಚಿಂತನೆಗಳನ್ನು ಮಾಡುವುದು
  • ಯಾವುದೇ ಹವ್ಯಾಸವನ್ನು ರೂಢಿಸಿಕೊಂಡು ಅದರಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದು
  • ಧ್ಯಾನ ಮಾಡುವುದು
  • ಸ್ನೇಹಿತರು, ಕುಟುಂಬಸ್ಥರೊಂದಿಗೆ ಹೆಚ್ಚು ಕಾಲ ಕಳೆಯುವುದು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com