ಚರ್ಮದ ಆರೈಕೆ ಬಗ್ಗೆ ಇರುವ ಮಿಥ್ಯೆಗಳ ಬಗ್ಗೆ ನಿಮಗೆ ಗೊತ್ತೇ? ಕಾಫಿ ಗ್ರೌಂಡ್ ಬಳಕೆಯಿಂದ ಏನಾಗುತ್ತದೆ ತಿಳಿಯಿರಿ!
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವ ಬೀರುವ ವ್ಯಕ್ತಿಯಿಂದ ಮಾರ್ಕೆಟಿಂಗ್ ಮಾಡುವುದು ಸರಿಯಾದ ಮಾಹಿತಿಯಿಲ್ಲದ ಅಭಿಪ್ರಾಯಗಳು, ನಕಲಿ ವಿಮರ್ಶೆಗಳೊಂದಿಗೆ ಈ ಬಗ್ಗೆ ನಂಬಿಕೆ ಕೊರತೆ ಉಂಟಾಗುವಂತೆ ಮಾಡಿದೆ.
Published: 17th August 2022 03:43 PM | Last Updated: 17th August 2022 04:29 PM | A+A A-

ಪ್ರಾತಿನಿಧಿಕ ಚಿತ್ರ
ಚರ್ಮದ ಆರೈಕೆ ಮಾಡುವುದಕ್ಕೂ ಹಲವು ನಿಯಮಿತ ವಿಧಾನಗಳಿವೆ. ಆದರೆ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಚರ್ಮದ ಆರೈಕೆಯು ದೊಡ್ಡ ರೀತಿಯಲ್ಲಿ ಸುದ್ದಿಯಾಯಿತು. ನಿರ್ದಿಷ್ಟವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವ ಬೀರುವ ವ್ಯಕ್ತಿಯಿಂದ ಮಾರ್ಕೆಟಿಂಗ್ ಮಾಡುವುದು ಸರಿಯಾದ ಮಾಹಿತಿಯಿಲ್ಲದ ಅಭಿಪ್ರಾಯಗಳು, ನಕಲಿ ವಿಮರ್ಶೆಗಳೊಂದಿಗೆ ಈ ಬಗ್ಗೆ ನಂಬಿಕೆ ಕೊರತೆ ಉಂಟಾಗುವಂತೆ ಮಾಡಿದೆ. ಹೀಗಾಗಿ, ಚರ್ಮದ ಆರೈಕೆಯ ಬಗ್ಗೆ ಇರುವ ಸತ್ಯ ಮಿಥ್ಯೆಗಳನ್ನು ಚರ್ಮರೋಗ ತಜ್ಞೆ ಶಿಲ್ಪಾ ಶರ್ಮ ಹೀಗೆ ವಿವರಿಸಿದ್ದಾರೆ.
ಮಿಥ್ಯೆ: ಕಾಫಿ ಗ್ರೌಂಡ್‌ಗಳು ಫೇಸ್ ಸ್ಕ್ರಬ್‌ನಂತೆ ಕೆಲಸ ಮಾಡುತ್ತವೆ
ರಿಯಾಲಿಟಿ: ಕಾಫಿಯು ಚರ್ಮಕ್ಕೆ ವಿವಿಧ ರೀತಿಯ ಪ್ರಯೋಜನಗಳನ್ನು ನೀಡುತ್ತದೆಯಾದರೂ, ಅದನ್ನು ಸ್ಕ್ರಬ್ ಆಗಿ ಬಳಸಬಾರದು. ಏಕೆಂದರೆ ಇದು ಚರ್ಮದ ಸವೆತಗಳನ್ನು ಉಂಟುಮಾಡಬಹುದು, ಮೊಡವೆಗಳನ್ನು ಉಲ್ಬಣಗೊಳಿಸಬಹುದು ಅಥವಾ ಚರ್ಮವು ಸೋಂಕುಗಳಿಗೆ ಒಳಗಾಗಬಹುದು.
(ಕಾಫಿ ಗ್ರೌಂಡ್ ಎನ್ನುವುದು ಕಾಫಿಯನ್ನು ತಯಾರಿಸಿದ ನಂತರ ಉಳಿಯುವ ಉತ್ಪನ್ನ. ಇದನ್ನು ಸಾಮಾನ್ಯವಾಗಿ ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ.)
ಮಿಥ್ಯೆ: ಎಕ್ಸ್ಫೋಲಿಯೇಟ್ ಮಾಡುವುದು ಅಥವಾ ಹಬೆಯಾಡಿಸುವ ಮೂಲಕ ಚರ್ಮದ ರಂಧ್ರಗಳನ್ನು ತೆರೆಯಲ್ಪಡುತ್ತವೆ
ರಿಯಾಲಿಟಿ: ಟರ್ಮದಲ್ಲಿನ ರಂಧ್ರಗಳು ತೆರೆಯಲು ಮತ್ತು ಮುಚ್ಚಲು ಸಾಧ್ಯವಿಲ್ಲ. ಅವು ಸ್ವಲ್ಪ ಹಿಗ್ಗುತ್ತವೆ, ಮತ್ತು, ಅದಕ್ಕಿಂತ ಹೆಚ್ಚೇನೂ ಆಗುವುದಿಲ್ಲ.

ಮಿಥ್ಯೆ: ತುಟಿಗಳಿಗೆ SPF ಅಗತ್ಯವಿಲ್ಲ
ರಿಯಾಲಿಟಿ: ದೇಹದ ಇತರೆ ಭಾಗಗಳಿಗಿಂತ ಕಡಿಮೆ ಮೆಲನಿನ್ ಅನ್ನು ಹೊಂದಿರುವುದರಿಂದ UV ಕಿರಣಗಳು ತುಟಿಗಳಿಗೆ ಹಾನಿಯುಂಟು ಮಾಡುತ್ತವೆ. ಆದ್ದರಿಂದ ಸನ್‌ಬರ್ನ್‌ಗೆ ಒಳಗಾಗುತ್ತವೆ.
ಮಿಥ್ಯೆ: ಯಾವುದೇ ಉತ್ಪನ್ನದಲ್ಲಿ 'ಚರ್ಮಶಾಸ್ತ್ರೀಯವಾಗಿ ಪರೀಕ್ಷಿಸಲಾಗಿದೆ', ಇದು ಸುರಕ್ಷಿತವಾಗಿದೆ ಎಂದು ಹೇಳುವುದು
ರಿಯಾಲಿಟಿ: ಎಲ್ಲಾ ಉತ್ಪನ್ನಗಳಲ್ಲಿ ಈ ಪದಗುಚ್ಛವನ್ನು ಬಳಸುವುದು ಸಾಮಾನ್ಯವಾಗಿಬಿಟ್ಟಿದೆ. ನಿರ್ದಿಷ್ಟ ಅಲರ್ಜಿಗಳು ಮತ್ತು ಚರ್ಮದ ಪರಿಸ್ಥಿತಿಗಳನ್ನು ನೋಡಿದರೆ ಇವು ಎಲ್ಲರಿಗೂ ಉತ್ತಮವಲ್ಲ. ಅಲ್ಲದೆ, 'ಚರ್ಮಶಾಸ್ತ್ರೀಯವಾಗಿ ಪರೀಕ್ಷಿಸಲ್ಪಟ್ಟಿದೆ' ಎಂದು ಹೇಳುವ ಅನೇಕ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇವೆ.
ಮಿಥ್ಯೆ: ಸೌತೆಕಾಯಿಗಳು ಕಣ್ಣಿನ ಕೆಳಗಿನ ಚೀಲಗಳಿಗೆ ಉತ್ತಮವಾಗಿವೆ
ರಿಯಾಲಿಟಿ: ಕೋಲ್ಡ್ ಸೌತೆಕಾಯಿಗಳು ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡಬಹುದು, ಆದರೆ ನೀವು ಕಣ್ಣಿನ ಅಡಿಯಲ್ಲಿ ಹೊಂದಿರುವ ಚೀಲಗಳಿಗೆ ಏನನ್ನೂ ಮಾಡಬೇಡಿ.