ಸೊಳ್ಳೆಗಳ ಕಾಟಕ್ಕೆ ಹೇಳಿ ಗುಡ್‌ಬೈ! ಇಲ್ಲಿದೆ ಸೊಳ್ಳೆ ಓಡಿಸಲು ಸಿಂಪಲ್ ಮನೆಮದ್ದು

ಸಂಜೆಯಾಗುತ್ತಿದ್ದಂತೆ ಮನೆಯೊಳಗೆ ಸೊಳ್ಳೆಗಳ ಕಾಟ ಹೆಚ್ಚಾಗುವುದು ಪ್ರತಿಯೊಂದು ಮನೆಯ ಸಮಸ್ಯೆಯಾಗಿದೆ. ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು! ಆದ್ರೆ, ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು.
mosquitoes problems
ಸಂಜೆಯಾದರೆ ಸೊಳ್ಳೆಗಳ ಆರ್ಭಟ?Online Desk
Updated on

Mosquito Repellent Tips: ಮಳೆಗಾಲ ಬಂತು ಅಂದ್ರೆ ಸಂಜೆಯಿಂದಲೇ ಶುರುವಾಗುತ್ತೆ ಸೊಳ್ಳೆಗಳ ಕಾಟ. ಲೈಟ್ ಆನ್ ಮಾಡಿದ ಕೂಡಲೇ ಕಿವಿಯ ಹತ್ತಿರ ಝೀಂ ಅಂತ ಸದ್ದು. ಮಕ್ಕಳು ನಿದ್ದೆ ಮಾಡಲು ಬಿಡಲ್ಲ, ದೊಡ್ಡವರಿಗೆ ಕಡಿತದಿಂದ ಗುಳ್ಳೆ. ಜೊತೆಗೆ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾದ ಭಯ ಬೇರೆ. ಹಾಗಾಗಿ, ಮಾರ್ಕೆಟ್‌ನಲ್ಲಿ ಸಿಗುವ ಕಾಯಿಲ್, ಲಿಕ್ವಿಡ್, ಸ್ಪ್ರೇಗಳನ್ನು ರಾತ್ರಿಯಿಡೀ ಹಚ್ಚಿದರೆ ತಾತ್ಕಾಲಿಕ ಪರಿಹಾರ ಸಿಗುತ್ತೆ. ಆದ್ರೆ ಅದರ ಹೊಗೆಯಿಂದ ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಕೆಮ್ಮು, ತಲೆನೋವು ನಂತಹ ಸಮಸ್ಯೆ ಬರಬಹುದು. ಜೊತೆಗೆ ಪ್ರತಿ ತಿಂಗಳು ₹300-₹500 ಖರ್ಚು ಕೂಡ ಆಗುತ್ತೆ. ಆದ್ರೆ ಚಿಂತೆ ಬೇಡ. ನಮ್ಮ ಅಡುಗೆ ಮನೆ ಮತ್ತು ಸುತ್ತಮುತ್ತಲೇ ಇರುವ ವಸ್ತುಗಳಿಂದಲೇ ಸೊಳ್ಳೆಗಳನ್ನು ನೈಸರ್ಗಿಕವಾಗಿ ಓಡಿಸಬಹುದು. ರಾಸಾಯನಿಕವಿಲ್ಲ, ಸೈಡ್ ಎಫೆಕ್ಟ್ ಇಲ್ಲ, ಖರ್ಚೂ ಕಡಿಮೆ. ಆ ಕುರಿತ ವರದಿ ಇಲ್ಲಿದೆ:

ಸಾಂಬ್ರಾಣಿ ಮತ್ತು ಹಸಿ ಕರ್ಪೂರದ ಧೂಪ

ಸಂಜೆ ವೇಳೆ ಮನೆಯಲ್ಲಿ ಸಾಂಬ್ರಾಣಿ ಧೂಪ ಹಾಕುವುದು ಹಳೆಯ ಸಂಪ್ರದಾಯವಾಗಿದೆ. ಸಾಂಬ್ರಾಣಿ ಹೊಗೆಗೆ ಸ್ವಲ್ಪ ಹಸಿ ಕರ್ಪೂರ ಮತ್ತು ಬೇವಿನ ಎಲೆಗಳನ್ನು ಸೇರಿಸಿ ಧೂಪ ಹಾಕಿದರೆ ಮನೆಯಲ್ಲಿರುವ ಸೊಳ್ಳೆಗಳು ತಕ್ಷಣ ಹೊರಗೆ ಓಡಿಹೋಗುತ್ತವೆ. ಈ ಹೊಗೆಯಿಂದ ಮನೆಗೆ ಉತ್ತಮ ಸುಗಂಧ ಸಿಗುವುದಲ್ಲದೆ ಕ್ರಿಮಿಕೀಟಗಳು ನಾಶವಾಗುತ್ತವೆ.

ಬೇವಿನ ಎಣ್ಣೆ ಮತ್ತು ಕರ್ಪೂರ:

ಬೇವಿನ ಎಣ್ಣೆಯಲ್ಲಿ ಸೊಳ್ಳೆಗಳು ಬರದಂತೆ ಮಾಡುವ ಬ್ರಹಮಾಸ್ತ್ರವಿದೆ. ಬೇವಿನ ಎಣ್ಣೆಗೆ ಸ್ವಲ್ಪ ಕರ್ಪೂರವನ್ನು ಪುಡಿ ಮಾಡಿ ಹಾಕಿ ದೀಪ ಹಚ್ಚಿದರೆ ಅದರ ವಾಸನೆಗೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ. ಇದಲ್ಲದೆ ಈ ಮಿಶ್ರಣವನ್ನು ಮೈಗೆ ಹಚ್ಚಿಕೊಳ್ಳುವುದರಿಂದಲೂ ಸೊಳ್ಳೆ ಕಡಿಯುವುದನ್ನು ತಡೆಯಬಹುದು.

mosquitoes problems
Homemade Hair Oils ನಿಂದ ಕೂದಲು ವೇಗವಾಗಿ ಬೆಳೆಯುತ್ತದೆಯೇ? ವೈರಲ್ Tips ಗಳು ನಿಜಕ್ಕೂ ಕೆಲಸ ಮಾಡುತ್ತವೆಯೇ? ಸತ್ಯವೇನು, ಮಿಥ್ಯವೇನು..?

ನಿಂಬೆಹಣ್ಣು ಮತ್ತು ಲವಂಗದ ಮ್ಯಾಜಿಕ್:

ಒಂದು ನಿಂಬೆಹಣ್ಣನ್ನು ಎರಡು ತುಂಡಾಗಿ ಕತ್ತರಿಸಿ ಅದಕ್ಕೆ 7-8 ಲವಂಗಗಳನ್ನು ಸೇರಿಸಿ ಮನೆಯ ಮೂಲೆಗಳಲ್ಲಿ ಇಡಿ. ನಿಂಬೆ ಮತ್ತು ಲವಂಗದ ಮ್ಮಿಶ್ರಣದ ತೀವ್ರವಾದ ವಾಸನೆಗೆ ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ. ಇದು ಅತ್ಯಂತ ಸರಳ ಮತ್ತು ಹೆಚ್ಚು ಖರ್ಚಿಲ್ಲದ ಮನೆಮದ್ದಾಗಿದೆ.

ನೀಲಗಿರಿ ಎಣ್ಣೆ

ನೀರಿಗೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಸೇರಿಸಿ ಮನೆಯಲ್ಲಿ ಸ್ಪ್ರೇ ಮಾಡಿ. ಈ ನೈಸರ್ಗಿಕ ಸುಗಂಧವು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಮತ್ತು ಮನೆಯ ವಾತಾವರಣವನ್ನು ತಾಜಾವಾಗಿರಿಸುತ್ತದೆ.

ಸಂಜೆ ವೇಳೆ ವಹಿಸಬೇಕಾದ ಮುನ್ನೆಚ್ಚರಿಕೆಗಳು:

ಸಂಜೆ 6 ರ ಸುಮಾರಿಗೆ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವ ಸಮಯವಾಗಿರುವುದರಿಂದ ಆ ಸಮಯದಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡುವುದು ಒಳ್ಳೆಯದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಪ್ರಮುಖ ಮಾರ್ಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com