LIVE: ಭಾರತವು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ- ಸುಬ್ರಮಣಿಯನ್ ಸ್ವಾಮಿ

ಇಡೀ ದೇಶವು 'ಹಿಂದೂ ರಾಷ್ಟ್ರ' ಪರಿಕಲ್ಪನೆಯನ್ನು ಚರ್ಚಿಸುತ್ತಿರುವ ಸಮಯದಲ್ಲಿ, ಬಿಜೆಪಿ ಸಂಸದ ಮತ್ತು ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ, ಭಾರತವು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ ಮತ್ತು ಭಾರತೀಯ ಸಂವಿಧಾನವು ಹಿಂದೂ ಧರ್ಮವನ್ನು ಬೋಧಿಸುತ್ತದೆ ಎಂದು ಹೇಳಿದರು.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

2013ರಿಂದ ಪ್ರತಿ ವರ್ಷ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ದೇಶದ ಶಿಕ್ಷಣದ ಸ್ಥಿತಿ ಮತ್ತು ದೇಶದ ಯುವಕರು ಯಾವ ದಿಕ್ಕಿನತ್ತ ಸಾಗುತ್ತಿದ್ದಾರೆ ಎಂಬುದನ್ನು ಚರ್ಚಿಸಲು ದೇಶದ ಕೆಲವು ಅತ್ಯುತ್ತಮ ಮನಸ್ಸುಗಳನ್ನು ಹೊಂದಿದ ಮತ್ತು ಬದಲಾವಣೆ ಮಾಡುವವರನ್ನು ಒಂದೇ ವೇದಿಕೆಯಲ್ಲಿ ಕರೆತಂದಿದ್ದು. ಇದೀಗ 8ನೇ ಬಾರಿ ದೇಶದ ಅತ್ಯುತ್ತಮ ಚಿಂತನಾಸಭೆಯನ್ನು ನಡೆಸುತ್ತಿದೆ.

ಈ ವರ್ಷದ 8ನೇ ಆವೃತ್ತಿಯ ಚಿಂತನಾಸಭೆಯು ಜನವರಿ 8 ರಿಂದ ಚೆನ್ನೈನಲ್ಲಿ ಪ್ರಾರಂಭವಾಗಿದ್ದು, ಜನವರಿ 9 ರವರೆಗೆ ನಡೆಯಲಿದೆ, ‘ಇಂಡಿಯಾ ಅಟ್ 75: ವಿಷನ್ 2022’ ಎಂಬ ವಿಷಯದ ಕುರಿತು ಯೋಜನೆ ಮತ್ತು ಆಲೋಚನೆಗಳನ್ನು ಪ್ರಸ್ತುತಪಡಿಸುವ ಮೂಲಕ ಆ ಪರಂಪರೆಯನ್ನು ಮುಂದುವರೆಸುತ್ತಿದೆ. 

ಕಳೆದ ವರ್ಷ ಚೆನ್ನೈನ ಐಟಿಸಿ ಗ್ರ್ಯಾಂಡ್ ಛೋಲಾದಲ್ಲಿ ನಡೆದ ಥಿಂಕ್ ಎಡು ಕಾಂಕ್ಲೇವ್ ಅನ್ನು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಉದ್ಘಾಟಿಸಿದ್ದರು. ಅಲ್ಲದೆ ಭವಿಷ್ಯದ ಭಾರತದ ಶಿಕ್ಷಣದ ಕುರಿತು ತಮ್ಮ ಅಲೋಚನೆಗಳನ್ನು ಹಂಚಿಕೊಂಡಿದ್ದರು. ನಂತರ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಯುವ ನಾಯಕ, ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದಂತೆ ಹಲವು ಗಣ್ಯರು ಚಿಂತನಾಸಭೆಯಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದ್ದರು

ಇಂದು ಬೆಳಗ್ಗೆ 10.30ಕ್ಕೆ ಡಾ. ಕೆ ಕಸ್ತೂರಿರಂಗನ್ ಅವರು ಥಿಂಕ್ ಎಡು ಕಾಂಕ್ಲೇವ್ ಗೆ ಚಾಲನೆ ನೀಡಿದ್ದು, 11.30ಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಅವರು ಹೊಸ ಶಿಕ್ಷಣ ನೀತಿ ಕುರಿತು ಮಾತನಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com