ಗಿನ್ನಿಸ್ ದಾಖಲೆ ಪುಟ ಸೇರಿದ ಬೃಹತ್ 'ಮಾನವ ರಾಷ್ಟ್ರಧ್ವಜ'

ಗಿನ್ನಿಸ್  ಸೇರಿದ ಬೃಹತ್ 'ಮಾನವ ರಾಷ್ಟ್ರಧ್ವಜ'
ಗಿನ್ನಿಸ್ ಸೇರಿದ ಬೃಹತ್ 'ಮಾನವ ರಾಷ್ಟ್ರಧ್ವಜ'

ಚೆನ್ನೈ ನಿವಾಸಿಗಳ ಅದ್ಭುತ ಪ್ರದರ್ಶನವೊಂದು ಗಿನ್ನೆಸ್ ದಾಖಲೆಯ ಪುಟ ಸೇರಿತ್ತು. ಕಳೆದ ಡಿಸೆಂಬರ್ 7ರಂದು ಚೆನ್ನೈ ಕ್ರೀಡಾ ಮೈದಾನದಲ್ಲಿ ಸೇರಿದ್ದ 50 ಸಾವಿರ ಮಂದಿ 'ಮಾನವ ರಾಷ್ಟ್ರ ಧ್ವಜವನ್ನು ನಿರ್ಮಾಣ ಮಾಡುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ದಾಖಲೆ ಬರೆದಿದ್ದರು. ಎಲ್ಲ 50 ಸಾವಿರ ಮಂದಿ ಮೂರು ಭಾಗಗಳಾಗಿ ಬೇರ್ಪಟ್ಟು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ತೊಡುವ ಮೂಲಕ ಭಾರತದ ತ್ರಿವರ್ಣ ಧ್ವಜವನ್ನು ನಿರ್ಮಿಸಿದ್ದರು. ಇದು ವಿಶ್ವದ ಅತೀ ದೊಡ್ಡ ಮಾನವ ಧ್ವಜ ಎಂಬ ಕೀರ್ತಿಗೆ ಭಾಜನವಾಗಿತ್ತು. ಈ ಹಿಂದೆ ಪಾಕಿಸ್ತಾನದಲ್ಲಿ ಇಂತಹ ಮೊದಲ ಪ್ರಯತ್ನ ಮಾಡಲಾಗಿತ್ತು. ಲಾಹೋರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಮಾನವ ಧ್ವಜ ಕಾರ್ಯಕ್ರಮದಲ್ಲಿ ಸುಮಾರು 28.957 ಮಂದಿ ಪಾಲ್ಗೊಂಡಿದ್ದರು. ಇದು ಈ ವರೆಗಿನ ದಾಖಲೆಯಾಗಿತ್ತು. ಇದನ್ನು ಚೆನ್ನೈ ಜನತೆ ಮುರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com