
80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆಯಿತು. ಜನವರಿ 7ರಂದು ಆರಂಭವಾದ ಸಮ್ಮೇಳನಕ್ಕೆ ಜನವರಿ 9ರಂದು ತೆರೆ ಎಳೆಯಲಾಗಿತ್ತು. ಅದ್ಧೂರಿಯಾಗಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಕವಿ ನಾ.ಡಿಸೋಜಾ ಅವರು ಅಧ್ಯಕ್ಷತೆ ವಹಿಸಿದ್ದರು. ಸತತ ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು, ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಕವಿ, ಸಾಮಾಜಿ ಕಾರ್ಯಕರ್ತರಿಗೆ ಸನ್ಮಾನ ಮಾಡಲಾಯಿತು.
ಕನ್ನಡ ಭಾಷೆಯ ಉಳಿವಿಗಾಗಿ ತಜ್ಞರು, ಕವಿಗಳು ಮತ್ತು ಬುದ್ಧಿ ಜೀವಿಗಳ ವೈಚಾರಿಕ ವಿಶ್ಲೇಷಣೆಗಳು ಗಮನ ಸೆಳೆದವು. ಮುಖ್ಯವಾಗಿ ಈ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.
1. ನಾಡ ವಿರೋಧಿಗಳಿಗಳಿಗೆ ಖಂಡನೆ
2.ಕನ್ನಡ ನಾಡ ಗೀತೆಯನ್ನು ಕಡ್ಡಾಯವಾಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿಯೂ ಹಾಡಿಸಬೇಕು.
3.ಗಡಿನಾಡಿನಲ್ಲಿರುವ ಶಾಲೆಗಳನ್ನು ಮುಚ್ಚಬಾರದು. ಮತ್ತು ಈ ಶಾಲೆಗಳಲ್ಲಿರುವ ಮಕ್ಕಳಿಗೆ ಉಚಿತವಾಗಿ ಕನ್ನಡ ಪುಸ್ತಕಗಳನ್ನು ಹಂಚಿಕೆ ಮಾಡಬೇಕು.
4.ಪಶ್ಚಿಮ ಘಟ್ಟ ಅಭಿವೃದ್ಧಿ ಕುರಿತ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು.
5.ರಾಜ್ಯ ಹೈಕೋರ್ಟ್ ಸೇರಿದಂತೆ ಎಲ್ಲ ಬಗೆಯ ನ್ಯಾಯಾಲಯಗಳಲ್ಲಿ ನಡಾವಳಿಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.
Advertisement