
ಕಲಾವಿದೆ ಹೇಮಾ ಉಪಾಧ್ಯಾಯ, ಆಕೆಯ ವಕೀಲ ಹರೀಶ್ ಭಂಭಾನಿ ಜೋಡಿಕೊಲೆ ಪ್ರಕರಣ ಇದೀಗ ದೇಶದಲ್ಲೇ ಸಂಚಲನ ಮೂಡಿಸಿದೆ.
ಡಿಸೆಂಬರ್ 12 ರಂದು ಮುಂಬೈನ ಡಂಕುರ್ ವಾಡಿ ಪ್ರದೇಶದ ಮೋರಿಯಲ್ಲಿ ಬಿದ್ದಿದ್ದ ಬಾಕ್ಸ್ ವೊಂದರಲ್ಲಿ ಈ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದವು. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಟ್ರಕ್ ಡ್ರೈವರ್, ಇಬ್ಬರು ವೇರ್ ಹೌಸ್ ನೌಕರರು, ಸಾಧು ರಾಜ್ಭೇರ್ ಈ ನಾಲ್ವರನ್ನು ಬಂಧಿಸಿದ್ದರೂ, ಇನ್ನೂ ಮೂವರನ್ನು ಶಂಕಿತರೆಂದು ಗುರುತಿಸಲಾಗಿದೆ. ಕಲಾಕೃತಿಗಳ ರು.5ಲಕ್ಷ ರುಪಾಯಿ ವಿಷಯದಲ್ಲಿ ಹೇಮಾ ಮತ್ತು ಗೋದಾಮು ಮಾಲೀಕ ವಿದ್ಯಾಧರ್ ರಾಜ್ಭಾನರ್ ನಡುವೆ ಜಗಳವಾದದ್ದು, ಕೊಲೆಯಾಗುವ ದಿನ ಸಂಜೆ 6.30ಗೆ ಗೋಟು ಹೇಮಾಗೆ ಮಾಡಿದ್ದೇ ಕೊನೆಯ ಫೋನ್ ಕರೆ ಆಗಿರುವುದು ಅನುಮಾನಕ್ಕೆ ಪುಷ್ಟಿ ನೀಡಿದೆ. ಆದರೆ ಈ ಗೋಟು ಎಲ್ಲಿದ್ದಾನೆಂದು ಇನ್ನೂ ಪತ್ತೆಯಾಗಿಲ್ಲ.
ಇನ್ನು ಪ್ರಕರಣ ಸಂಬಂಧ ವಿದ್ಯಾಧರ್ ರಾಜ್ಬಾರ್ ಮೇಲೂ ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. ಪ್ರಕರಣ ಸಂಬಂಧ ಇದುವರೆಗೂ ಐವರನ್ನು ಬಂಧಿಸಲಾಗಿದೆ. ಹೇಮಾಳನ್ನು ಚಿಂತನ್ ಕೊಲೆ ಮಾಡಿದ್ದಾನೆ. ಆತ ಈ ಮೊದಲು ಹೇಮಾಳಿಗೆ ಕೊಲ್ಲುವ ಬೆದರಿಕೆ ಒಡ್ಡಿದ್ದ. ಹೀಗಾಗಿ ಎಫ್ ಐ ಆರ್ ನಲ್ಲಿ ಆತನ ಹೆಸರನ್ನು ಮೊದಲಿಗೆ ಸೇರಿಸಬೇಕು. ಆಸ್ತಿಗಾಗಿ ಹೇಮಾಳನ್ನು ಕೊಲೆ ಮಾಡಲಾಗಿದೆ ಎಂದು ಹೇಮಾ ಸಂಬಂಧಿಕರು ಆರೋಪಿಸಿದ್ದಾರೆ.
ಪ್ರಸ್ತುತ ಪ್ರಕರಣದ ತನಿಖೆ ಮುಂದುವರೆಸಿರುವ ಮುಂಬೈ ಪೊಲೀಸರು ಹೇಮಾ ಉಪಾಧ್ಯಾಯ ಪತಿ ಚಿಂತನ್ ಉಪಾಧ್ಯಾಯನನ್ನು ಬಂಧಿಸಿದ್ದಾರೆ.
Advertisement