ಹಿನ್ನೋಟ 2022: ಯಶಸ್ಸು ಗಳಿಸದಿದ್ದರೂ ಸದ್ದು ಮಾಡಿದ ಸ್ಯಾಂಡಲ್ ವುಡ್ ಸಿನಿಮಾಗಳಿವು!

2022 ಸ್ಯಾಂಡಲ್ ವುಡ್ ಪಾಲಿಗೆ ಸುವರ್ಣ ಯುಗ ಎಂತಲೇ ಕರೆಯಲಾಗುತ್ತಿದೆ. 'ಲವ್ ಮಾಕ್ಟೆಲ್ 2' ಸಿನಿಮಾದಿಂದ ಆರಂಭಿಸಿ ಆ ನಂತರ ಬಿಡುಗಡೆಯಾದ ಹಲವು ಸಿನಿಮಾಗಳು ಹಿಟ್ ಎನಿಸಿಕೊಂಡವು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

2022 ಸ್ಯಾಂಡಲ್ ವುಡ್ ಪಾಲಿಗೆ ಸುವರ್ಣ ಯುಗ ಎಂತಲೇ ಕರೆಯಲಾಗುತ್ತಿದೆ. 'ಲವ್ ಮಾಕ್ಟೆಲ್ 2' ಸಿನಿಮಾದಿಂದ ಆರಂಭಿಸಿ ಆ ನಂತರ ಬಿಡುಗಡೆಯಾದ ಹಲವು ಸಿನಿಮಾಗಳು ಹಿಟ್ ಎನಿಸಿಕೊಂಡವು. 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ', 'ವಿಕ್ರಾಂತ್ ರೋಣ', 'ಕಾಂತಾರ', 'ಗಂಧದ ಗುಡಿ' ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ, ಕನ್ನಡ ಚಿತ್ರರಂಗದ ಬಗ್ಗೆ ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಾತನಾಡುವಂತಾಯಿತು.

ಈ ವರ್ಷ ಸಾಕಷ್ಟು ಉತ್ತಮ ಚಿತ್ರಗಳು ಬಂದಿದ್ದು, ಬಿಡುಗಡೆ ಬಳಿಕ ಯಶಸ್ಸು ಗಳಿಸದ ಚಿತ್ರಗಳೂ ಕೂಡ ಸದ್ದು ಮಾಡಿದ್ದು ಕಂಡು ಬಂದಿತು. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗೆಲವು ಸಾಧಿಸದಿದ್ದರೂ, ಉತ್ತಮ ಸಿನಿಮಾ ಎಂಬ ಹೆಸರು ಗಳಿಸಿದ ಕೆಲವು ಚಿತ್ರಗಳ ಪಟ್ಟಿ ಇಲ್ಲಿದೆ...

'ವಿಂಡೋ ಸೀಟ್'


ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಸಿನಿಮಾ ಅಂತಹ ದೊಡ್ಡ ಯಶಸ್ಸು ಗಳಿಸದಿದ್ದರೂ, ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

'ಧರಣಿ ಮಂಡಲ ಮಧ್ಯದೊಳಗೆ'


ವರ್ಷದ ಅಂತ್ಯದಲ್ಲಿ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಬಿಡುಗಡೆ ಆಯಿತು. ಸಿನಿಮಾವು ಭಿನ್ನವಾಗಿತ್ತು. ಬಹಳ ಶಾರ್ಪ್‌ ಆದ ಚಿತ್ರಕತೆಯನ್ನು ಹೊಂದಿತ್ತು. ಇಂತಹ ಸಿನಿಮಾಗಳು ಗೆಲ್ಲಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

'ತಲೆದಂಡ'


ಸಂಚಾರಿ ವಿಜಯ್ ನಟನೆಯ 'ತಲೆದಂಡ' ಸಿನಿಮಾ ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಅರೆಹುಚ್ಚನ ಪಾತ್ರದಲ್ಲಿ ಸಂಚಾರಿ ವಿಜಯ್ ಅದ್ಭುತವಾಗಿ ನಟಿಸಿದ್ದರು. ಪ್ರಕೃತಿ ಉಳಿಸಲು ಅರೆಹುಚ್ಚ ಮಾಡುವ ಹೋರಾಟದ ಕತೆ ಹಲವರನ್ನು ಭಾವುಕಗೊಳಿಸಿತು. ಅದ್ಭುತ ನಟ ಸಂಚಾರಿ ವಿಜಯ್ ಅಗಲಿಕೆಯ ನೋವಿನ ನೆನಪನ್ನು ಮತ್ತೆ ನೆನೆಯುವಂತೆ ಮಾಡಿದ ಸಿನಿಮಾ ಇದಾಗಿತ್ತು.

'ಕೋಳಿ ತಾಲ್'


ಕೋಳಿ ತಾಲ್' ಸಿನಿಮಾ ಒಂದು ಭಿನ್ನ ಪ್ರಯತ್ನವಾಗಿತ್ತು. ಪಟ್ಟಣದಿಂದ ಬಂದ ಮೊಮ್ಮಗನಿಗೆ ಕೋಳಿ ಸಾರು ಮಾಡಿ ಹಾಕಬೇಕೆಂದು ಆಸೆಯಿಂದಿರುತ್ತಾನೆ ತಾತ. ಆದರೆ, ಆ ಕೋಳಿ ಹಠಾತ್ತನೆ ಕಾಣೆಯಾಗಿಬಿಡುತ್ತದೆ. ಆ ಕೋಳಿಯ ಹುಡುಕಾಟದಲ್ಲಿ ತಾತ ತೊಡಗುತ್ತಾನೆ. ಆ ಹುಡುಕಾಟದ ಪಯಣವೇ 'ಕೋಳಿ ತಾಲ್' ಸಿನಿಮಾ.

'ಸಕುಟುಂಬ ಸಮೇತ'


ರಕ್ಷಿತ್ ಶೆಟ್ಟಿಯವರ ಪರಮವಃ ಸ್ಟುಡಿಯೋಸ್ ನಿರ್ಮಾಣ ಮಾಡಿದ 'ಸಕುಟುಂಬ ಸಮೇತ' ಈ ವರ್ಷ ಗಮನ ಸೆಳದ ಸಿನಿಮಾಗಳಲ್ಲಿ ಒಂದು. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡದಿದ್ದರು, ಈ ಸಿನಿಮಾದ ಕಂಟೆಂಟ್ ಚೆನ್ನಾಗಿತ್ತು.

'ಲವ್ 360'


ಪ್ರೇಮಕತೆಯ ಜೊತೆಗೆ ಮರ್ಡರ್ ಮಿಸ್ಟರಿ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಹಾಡುಗಳು ಹಲವರ ಗಮನ ಸೆಳೆದಿದ್ದತ್ತು. ಆದರೆ, ಚಿತ್ರವು ದೊಡ್ಡ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ.

'ಕಂಬ್ಳಿಹುಳ'


ಹೊಸ ಹುಡುಗರ ಹೊಸ ಪ್ರಯತ್ನ 'ಕಂಬ್ಳಿಹುಳ'. ಸಿನಿಮಾ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

'ವ್ಹೀಲ್ ಚೇರ್ ರೋಮಿಯೊ'


ಈ ವರ್ಷ ಗಮನ ಸೆಳೆದ ಸಿನಿಮಾಗಳಲ್ಲಿ ಒಂದು 'ವ್ಹೀಲ್ ಚೇರ್ ರೋಮಿಯೊ' ಸಿನಿಮಾ ಕೂಡ ಒಂದು. ಅಂಗವಿಕಲ ನಾಯಕ, ಕಣ್ಣು ಕಾಣದ ನಾಯಕಿಯ ನಡುವೆ ನಡೆದ ಅದ್ಭುತ ಪ್ರೇಮ ಹಾಗೂ ಜೀವನದ ಕತೆಯನ್ನು ಹೊಂದಿರುವ ಸಿನಿಮಾ ಇದಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com