ಹಿನ್ನೋಟ 2022: ಈ ವರ್ಷ ಸುದ್ದಿ ಮಾಡಿದ, ಕುಖ್ಯಾತಿಗಳಿಸಿದವರತ್ತ ಒಂದು ನೋಟ...

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸುಳಿಗೆ ಸಿಲುಕಿದ್ದ ಭಾರತವು 2022ರಲ್ಲಿ ನಿಧಾನಗತಿಯಲ್ಲಿ ಸಹಜ ಸ್ಥಿತಿಯತ್ತ ಮರಳಿತು. ಸಾರ್ವಜನಿಕ ಬದುಕನ್ನು ಸಹಜ ಸ್ಥಿತಿಗೆ ಹಿಂತಿರುಗಿಸಿದ 2022ರ ವರ್ಷಕ್ಕೆ ಗುಡ್ ಬೈ ಹೇಳುವ ದಿನ ಸನ್ನಿಹಿತವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸುಳಿಗೆ ಸಿಲುಕಿದ್ದ ಭಾರತವು 2022ರಲ್ಲಿ ನಿಧಾನಗತಿಯಲ್ಲಿ ಸಹಜ ಸ್ಥಿತಿಯತ್ತ ಮರಳಿತು. ಸಾರ್ವಜನಿಕ ಬದುಕನ್ನು ಸಹಜ ಸ್ಥಿತಿಗೆ ಹಿಂತಿರುಗಿಸಿದ 2022ರ ವರ್ಷಕ್ಕೆ ಗುಡ್ ಬೈ ಹೇಳುವ ದಿನ ಸನ್ನಿಹಿತವಾಗಿದೆ.

ಕರಾವಳಿ ಕರ್ನಾಟಕದಲ್ಲಿ ಮೇರುಕೃತಿ ನಿರ್ಮಿಸಿದ ಚಲನಚಿತ್ರ ಪ್ರತಿಯೊಬ್ಬರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿತ್ತು. ಚಿತ್ರದ ನಿರ್ಮಾಪಕರಿಂದ ಹಿಡಿದು ಬೆಂಗಳೂರು ರಸ್ತೆ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ ಪೊಲೀಸರವರೆಗೆ ರಾಜ್ಯದಲ್ಲಿ 2022 ರಲ್ಲಿ ಸುದ್ದಿ ಮಾಡಿದ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ ನಾಯಕರ ಪಟ್ಟಿ ಇಲ್ಲಿದೆ...

ಎಂಎ ಸಲೀಂ, ಎಡಿಜಿಪಿ, ವಿಶೇಷ ಪೊಲೀಸ್ ಆಯುಕ್ತ (ಸಂಚಾರ)
ನವೆಂಬರ್ 14 ರಂದು ಐಪಿಎಸ್ ಅಧಿಕಾರಿಯನ್ನು ವಿಶೇಷ ಪೊಲೀಸ್ ಕಮಿಷನರ್ (ಸಂಚಾರ) ಆಗಿ ನಿಯೋಜಿಸಿದಾಗ ಅವರಿಗೆ ನೀಡಲಾಗಿದ್ದ ಆದೇಶ ಬಹಳ ಸ್ಪಷ್ಟವಾಗಿತ್ತು. ಬೆಂಗಳೂರಿನ ರಸ್ತೆಗಳಲ್ಲಿ ಎದುರಾಗಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಸಲೀಂ ಅವರು ಕಾರ್ಯಾಚರಣೆಗಿಳಿಸಿದ್ದರು. ಇದರಂತೆ ತಮ್ಮ ಉತ್ತಮ ಕ್ರಮಗಳ ಮೂಲಕ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿದರು. ಈ ಬೆಳವಣಿಗೆಗೆ ಸಾರ್ವಜನಿಕರಿಂದ ಮೆಚ್ಚುಗೆಗಳು ವ್ಯಕ್ತವಾಗಿದ್ದವು.

ರಿಷಬ್ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಮತ್ತು ನಟ
ರಿಷಭ್ ಶೆಟ್ಟಿಯವರ ಇತ್ತೀಚಿನ ಸಿನಿಮಾ 'ಕಾಂತಾರ', ಪ್ರಕೃತಿ ಮತ್ತು ಮಾನವರ ನಡುವಿನ ಸಂಬಂಧವನ್ನು ಕೇಂದ್ರೀಕರಿಸುತ್ತದೆ. ಈ ಚಿತ್ರವು ಬಹು ಭಾಷೆಗಳಲ್ಲಿ ಬಿಡುಗಡೆಯಾಯಿತು, ಇದು ದೇಶಾದ್ಯಂತ ಭಾರೀ ಮೆಚ್ಚುಗೆಗಳನ್ನು ಪಡೆದುಕೊಂಡಿತು. 2022 ರಲ್ಲಿ ಬಿಡುಗಡೆಯಾದ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದಾಗಿದೆ.

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಕ್ಟೋಬರ್ 2022 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು, 24 ವರ್ಷಗಳಲ್ಲಿ ಪಕ್ಷವನ್ನು ಮುನ್ನಡೆಸಿದ ಮೊದಲ ಗಾಂಧಿಯೇತರ ವ್ಯಕ್ತಿ ಇವರಾಗಿದ್ದಾರೆ.

ಅಮೃತ್ ಪೌಲ್, ಐಪಿಎಸ್
ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗಕ್ಕೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಏಪ್ರಿಲ್ 27, 2022 ರಂದು ವರ್ಗಾವಣೆ ಮಾಡಲಾಗಿತ್ತು. 1995ನೇ ಇಸ್ವಿ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರು ಮೂಲತಃ ಪಂಜಾಬ್‌ನವರು. ಕರ್ನಾಟಕ ಕೇಡರ್‌ನಲ್ಲಿ ಆಯ್ಕೆ ಆಗಿದ್ದ ಅವರ ವಿರುದ್ಧ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ವೇಳೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಕರ್ನಾಟಕದ ಇತಿಹಾಸದಲ್ಲಿ ಬಂಧನಕ್ಕೊಳಗಾದ ಎಡಿಜಿಪಿ ಶ್ರೇಣಿಯ ಮೊದಲ ಅಧಿಕಾರಿ ಎಂಬ ಕುಖ್ಯಾತಿ ಇವರ ಮೇಲಿದೆ.

ಭಾಸ್ಕರ್ ರಾವ್, ಎಎಪಿ ರಾಜ್ಯ ಉಪಾಧ್ಯಕ್ಷ
ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು, ಸೇವೆ ತ್ಯಜಿಸಿ, ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದರು. 2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ 2022ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್
ಕರ್ನಾಟಕದ ನೂತನ ಲೋಕಾಯುಕ್ತರಾಗಿ 2022ರ ಜೂನ್ ತಿಂಗಳಿನಲ್ಲಿ ನಿವೃತ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ನೇಮಕಗೊಂಡಿರು. ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆಯೇ ಪಾಟೀಲ್ ಅವರು, ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ,  ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆಗೆ ಲೋಕಾಯುಕ್ತರ ಅಧಿಕಾರವನ್ನು ಮರುಸ್ಥಾಪಿಸಿಸಿದರು,

ಬಸವರಾಜ ಹೊರಟ್ಟಿ, ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು
ಹಿರಿಯ ನಾಯಕರಾದ ಬಸವರಾಜ ಹೊರಟ್ಟಿ ಅವರು, ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರ ವಿಧಾನಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿದ್ದರು. ಹೊರಟ್ಟಿಯವರು 1980 ರಿಂದ ಪರಿಷತ್ತಿನ ಸದಸ್ಯರಾಗಿದ್ದಾರೆ.

ಮೊಹಮ್ಮದ್ ಶಾರಿಕ್, ಭಯೋತ್ಪಾದಕ ಆರೋಪಿ
ನವೆಂಬರ್ 19 ರಂದು ಮಂಗಳೂರು ಆಟೋ ರಿಕ್ಷಾ ಸ್ಫೋಟದಲ್ಲಿ 24 ವರ್ಷದ ಯುವಕ ಗಾಯಗೊಂಡಿದ್ದ. ಈತರೇ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು
ಚಿತ್ರದುರ್ಗದ ಲಿಂಗಾಯತ ಮಠದ ಮಠಾಧೀಶರು ನಡೆಸುತ್ತಿರುವ ಶಾಲೆಗಳಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಗಳು ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಮಠಾಧೀಶರನ್ನು ಬಂಧನಕ್ಕೊಳಪಡಿಸಲಾಗಿತ್ತು. ಒಂದು ಕಾಲದಲ್ಲಿ ಕ್ರಾಂತಿಕಾರಿ ಸುಧಾರಣೆಗಳಿಗೆ ಹೆಸರಾಗಿದ್ದ ಶರಣರು ಈಗ ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com