
ಮುಂಬೈ: ಬಾಲಿವುಡ್ ಬಾಡ್ ಬಾಯ್ ಸಲ್ಮಾನ್ ಖಾನ್‌ಗೆ ಇದೀಗ ಮತ್ತೊಂದು ಸಂಕಟ ಎದುರಾಗಿದೆ. 2002 ರ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ನಡೆಸಲಾದ ರಕ್ತದ ಪರೀಕ್ಷೆಯಲ್ಲಿ ಸಲ್ಮಾನ್ ಖಾನ್ ರಕ್ತದಲ್ಲಿ ಆಲ್ಕೋಹಾಲ್ ಇರುವುದು ಪತ್ತೆಯಾಗಿದೆ. ರಕ್ತದದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದಾಗಿ ತಜ್ಞರು ವರದಿ ಸಲ್ಲಿಸಿದ್ದಾರೆ.
48 ವಯಸ್ಸಿನ ಸಲ್ಮಾನ್ ಖಾನ್ ತನ್ನ ಸಹೋದರಿಯೊಂದಿಗೆ ಇಂದು ಮುಂಬೈನ ಸೆಷನ್ಸ್ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಆಗಮಿಸಿದರು. 200 ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ವಿಚಾರಣೆಯ ವೇಳೆ ಸಲ್ಮಾನ್ ಖಾನ್ ರಕ್ತದಲ್ಲಿ ಆಲ್ಕೋಹಾಲ್ ಅಂಶ ಇರುವುದು ಖಚಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
30 ಮಿ.ಗ್ರಾಂ ಹಾಲ್ಕೋಹಾಲ್ ಸಾಮಾನ್ಯ ಪ್ರಮಾಣಕ್ಕಿಂತ, ಸಲ್ಮಾನ್‌ಖಾನ್ ಅವರ ರಕ್ತದಲ್ಲಿ 62 ಗ್ರಾಂ ನಷ್ಟು ಆಲ್ಕೋಹಾಲ್ ಅಂಶವಿದ್ದದ್ದು, ಪತ್ತೆಯಾಗಿದೆ ಎಂದು ತಜ್ಞರು ಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್ 28, 2009ರಂದು ಭಾಂದ್ರ ಭಾಗದಲ್ಲಿ ಸಲ್ಮಾನ್ ಖಾನ್ ಬೇಕರಿಯೊಂದಕ್ಕೆ ಕಾರು ನುಗ್ಗಿಸಿದ್ದ ಘಟನೆಯಲ್ಲಿ, ಫುಟ್‌ಪಾತಿನಲ್ಲಿ ಮಲಗಿದ್ದವರ ಮೇಲೆ ಕಾರು ಹತ್ತಿಸಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರು. ಅಲ್ಲದೆ ನಾಲ್ಕು ಜನರು ತೀವ್ರವಾಗಿ ಗಾಯಗೊಂಡಿದ್ದರು.
ಪ್ರಕರಣ ಸಂಬಂಧ ಇಬ್ಬರು ಪ್ರತ್ಯಕ್ಷ ದರ್ಶಿಗಳ ಹೇಳಿಕೆಯನ್ನು ಪಡೆದಿದ್ದು, ಇನ್ನೂ 11 ಮಂದಿ ಪ್ರತ್ಯಕ್ಷ ದರ್ಶಿಗಳ ವಾದ ಆಲಿಸಬೇಕಾಗಿದೆ.
Advertisement