
ಚೆನ್ನೈ: ವಿಧಾನಸಭೆ ಕಲಾಪಕ್ಕೆ ಹಾಜರಾಗಲು ಬಂದಿದ್ದ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಸಿಟ್ಟಿನಿಂದ ಹೊರ ನಡೆದಿದ್ದು, ನನ್ನಂತ ಅಂಗವಿಕಲನಿಗೆ ವಿಧಾನಸಭೆಯಲ್ಲಿ ಸ್ಥಳವಿಲ್ಲ ಎಂದು ಆರೋಪಿಸಿದ್ದಾರೆ.
ವಿಧಾನಸಭೆ ಕಲಾಪಗಳಿಗೆ ಸತತ ಗೈರಾ ಹಾಜರಾಗುತ್ತಿದ್ದು, ಕಲಾಪಗಳಿಗೆ ಹಾಜರಾಗುವಂತೆ ಕರುಣಾನಿಧಿ ಅವರಿಗೆ ಕಳೆದ ಭಾನುವಾರ ತಮಿಳುನಾಡು ಮುಖ್ಯಮಂತ್ರಿ ಪಿ. ಪನ್ನೀರ್ ಸೆಲ್ವಂ ಅವರು ಸವಾಲು ಹಾಕಿದ್ದರು.
ನಡೆದಾಡಲು ಸಾಧ್ಯವಾಗದೆ ವಿಲ್‌ಚೇರ್ ಮೂಲಕವೇ ಓಡಾಡುವ ಕರುಣಾನಿಧಿ ಅವರು ಸಿಎಂ ಪನ್ನೀರ್ ಸೆಲ್ವಂ ಸವಾಲಿನಂತೆ ಇಂದು ಕಲಾಪಕ್ಕೆ ಹಾಜರಾದರು. ಆದರೆ ಅವರಿಗೆ ಕುಳಿತುಕೊಳ್ಳಲು ಸರಿಯಾದ ಜಾಗದ ವ್ಯವಸ್ಥೆ ಆಗದೇ ಇರುವುದರಿಂದ ಸಿಟ್ಟಿನಿಂದ ವಿಧಾನಸಭೆಯನ್ನು ತೊರೆದಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಶಾಸಕನಾಗಿ 50 ವರ್ಷ ಕಾಲ ಜನರ ಸೇವೆ ಮಾಡಿದ್ದೇನೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾನು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.
90 ವರ್ಷ ಹರೆಯ ಹಿರಿಯ ರಾಜಕಾರಣಿ ಕರುಣಾನಿಧಿ ಬೆನ್ನು ಮೂಲೆ ಶಸ್ತ್ರ ಚಿಕಿತ್ಸೆ ಬಳಿಕ ನಡೆದಾಡುವ ಸಾಮಥ್ಯ ಕಳೆದುಕೊಂಡಿರುವುದರಿಂದ ವಿದ್ಯುತ್ ಚಾಲಿತ ವಿಲ್‌ಚೇರನ್ನು 2009ರಿಂದ ಬಳಸುತ್ತಿದ್ದಾರೆ.
Advertisement