ರಾಜಕೀಯ ದ್ವೇಷದಿಂದ ಅಂಬಿ ವಿರೋಧಿಗಳಿಂದಲೇ ಕುಕೃತ್ಯ

ರಾಜಕೀಯ ದ್ವೇಷದಿಂದ ಸಚಿವ ಅಂಬರೀಷ್ ವಿರೋಧಿಗಳು...
ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ
ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ
Updated on

ಬೆಂಗಳೂರು: ರಾಜಕೀಯ ದ್ವೇಷದಿಂದ ಸಚಿವ ಅಂಬರೀಷ್ ವಿರೋಧಿಗಳು ನಮ್ಮ ಮಗಳೊಂದಿಗಿನ ಅಂಬರೀಷ್ ಚಿತ್ರವನ್ನು ಮಾಧ್ಯಮಕ್ಕೆ ನೀಡಿದ್ದಲ್ಲದೇ, ಅವರಿಬ್ಬರ ಸಂಬಂಧಕ್ಕೆ ಕೆಟ್ಟ ಅರ್ಥ ಬರುವ ರೀತಿಯಲ್ಲಿ ವರದಿ ನೀಡಿ ನಮ್ಮ ಕುಟುಂಬವನ್ನು ಮುಜುಗರಕ್ಕೀಡು ಮಾಡಿದ್ದಾರೆ ಎಂದು ತಾರಾ ದಂಪತಿ ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದ್ದ ಚಿತ್ರಗಳನ್ನು ನಾಲ್ಕು ತಿಂಗಳ ಹಿಂದೆ ಅಂಬರೀಷ್ ಮತ್ತು ತಮ್ಮ ಕುಟುಂಬ ಹಮ್ಮಿಕೊಂಡಿದ್ದ ಔತಣ ಕೂಟದಲ್ಲಿ ಸೆರೆಹಿಡಿಯಲಾಗಿತ್ತು. ಅದನ್ನು ಫೇಸ್‌ಬುಕ್‌ಗೆ ಹಾಕಲಾಗಿತ್ತು. ಆದರೆ ಈಗ ಬೆಳಗಾವಿ ಅಧಿವೇಶನದ ಸಮಯದಲ್ಲಿ ಅಂಬರೀಷ್ ವಿರೋಧಿಗಳು ಮಾಧ್ಯಮಗಳಿಗೆ ನೀಡಿದ್ದಾರೆ. ಸುಳ್ಳು ವರದಿಯನ್ನು ಬಿತ್ತರಿಸಲಾಗಿದೆ ಎಂದು ಜೈ ಜಗದೀಶ್ ಆರೋಪಿಸಿದ್ದಾರೆ.

ಅಂಬರೀಷ್ ಹಾಗೂ ನಮ್ಮ ಪರಿಚಯ 40 ವರ್ಷಗಳದ್ದು. ವೈಭವಿ ಅವರ ಮಗಳಿದ್ದಂತೆ. ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೆ ಅವರ ಎಂದು ನಿಂತು ಬಗೆಹರಿಸಿಕೊಳ್ಳಬೇಕು. ಅದರ ಬದಲು ನನ್ನ ಮಗಳ ಬಗ್ಗೆ ಈ ರೀತಿಯಾಗಿ ಆಪಾದನೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ವೈಭವಿ ಈಗಾಗಲೇ 'ಈ ಬಂಧನ' ಸೇರಿದಂತೆ ಎರಡು ಚಿತ್ರಗಳಲ್ಲಿ ನಟಿಸಿದ್ದಾಳೆ. ಅಂಬರೀಷ್ ಆಕೆಗೆ ಮಾತ್ರವಲ್ಲಸ ನಮಗೂ ಕುಟುಂಬದವರೇ ಆಗಿದ್ದಾರೆ ಎಂದು ಅವರು ಹೇಳಿದ್ದಾರೆ.
 
ಇದಕ್ಕೂ ಮುನ್ನ ವಿಜಯಲಕ್ಷ್ಮಿ ಸಹೋದರ ಮತ್ತು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ನಮ್ಮ ತಾಯಿಗೆ ಅಂಬರೀಷ್ 5ನೇ ಮಗನಿದ್ದಂತೆ. ನಮ್ಮದು 40 ವರ್ಷದ ಬಾಂಧವ್ಯ. ನಮ್ಮ ಕುಟಂಬ ಕಳೆದ 70 ವರ್ಷಗಳಿಂದ ಚಿತ್ರರಂಗದಲ್ಲಿದ್ದು ಎಂದೂ ಇಂತಹ ಕಹಿ ಘಟನೆಯನ್ನು ನೋಡಿರಲಿಲ್ಲ ಎಂದರು.

ಇದೀಗ ಈ ಘಟನೆ ನಮ್ಮ ಕುಟುಂಬವನ್ನು ಘಾಸಿಗೊಳಿಸಿದೆ. ವೈಭವಿ ಕಾಲೇಜಿಗೆ ಹೋಗುತ್ತಿರುವ ಹುಡುಗಿ. ಸಮಾಜದಲ್ಲಿ ತಲೆಯೆತ್ತಿ ನಡೆಯಲು ಸಾಧ್ಯವಿಲ್ಲದ ರೀತಿಯಲ್ಲಿ ಮಾಧ್ಯಮದಲ್ಲಿ ಬಿಂಬಿತವಾಗಿದ್ದಾಳೆ. ಆದ್ದರಿಂದ ಮಾಧ್ಯಮದವರು ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು ಎಂದು ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com