ಚೀನಾಗೆ ಹೆದರಿದ ಪೋಪ್

ಚೀನಾದ ಅಟಾಟೋಪಕ್ಕೆ ಪೋಪ್ ಫ್ರಾನ್ಸಿಸ್ ಕೂಡಾ ಹೆದರಿದ್ದಾರೆ. ಚೀನಾ ಎಲ್ಲಿ ...
ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್

ಲಂಡನ್: ಚೀನಾದ ಅಟಾಟೋಪಕ್ಕೆ ಪೋಪ್ ಫ್ರಾನ್ಸಿಸ್ ಕೂಡಾ ಹೆದರಿದ್ದಾರೆ. ಚೀನಾ ಎಲ್ಲಿ ಕೆಂಗಣ್ಣು ಬೀರುವುದೋ ಎಂಬ ಭಯದಿಂದ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಲು ಪೋಪ್ ನಿರಾಕರಿಸಿದ್ದಾರೆ.

ಚೀನಾ ಎಲ್ಲಿ ಕೆಂಗಣ್ಣು ಬೀರುವುದೋ ಎಂಬ ಭಯದಿಂದ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಲು ಪೋಪ್ ನಿರಾಕರಿಸಿದ್ದಾರೆ.

ರೋಮ್‌ನಲ್ಲಿ ನೋಬೆಲ್ ಶಾಂತಿ ಪುರಸ್ಕೃತರ ಕಾರ್ಯಕ್ರಮ ಆರಂಭವಾಗಿದೆ. ಆದರೆ ಇಲ್ಲಿ 1989ರ ನೊಬೆಲ್ ಪುರಸ್ಕೃತ ದಲೈಲಾಮಾ ಅವರನ್ನು ಭೇಟಿಯಾಗಲು ಆಗುವುದಿಲ್ಲ ಎಂದು ಪೋಪ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ವ್ಯಾಟಿಕನ್ ವಕ್ತಾರರು ಪೋಪ್ ಫ್ರಾನ್ಸಿಸ್ ಅವರಿಗೆ ದಲೈಲಾಮಾ ಬಗ್ಗೆ ಭಾರಿ ಗೌರವವಿದೆ. ಆದರೆ ಪೋಪ್ ಈ ಬಾರಿ ಯಾವೊಬ್ಬ ನೊಬೆಲ್ ಪುರಸ್ಕ್ಛತರನ್ನೂ ಭೇಟಿಯಾಗುತ್ತಿಲ್ಲ. ಬದಲಿಗೆ ಸಮಾವೇಳಕ್ಕೆ ವಿಡಿಯೋ ಸಂದೇಶವನ್ನು ಕಳುಹಿಸುತ್ತಾರೆ ಎಂದಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಇದೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಅಲ್ಲಿನ ಸರ್ಕಾರವೂ ಚೀನಾಗೆ ಹೆದರಿ ದಲೈಲಾಮಾರಿಗೆ ವೀಸಾ ನಿರಾಕರಿಸಿತ್ತು. ಇದರಿಂದ ಬೇಸತ್ತ ನೊಬೆಲ್ ಪುರಸ್ಕೃತರ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com