
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಕೆಫೆ ಮೇಲೆ ದಾಳಿ ಮಾಡಿರುವ ಉಗ್ರರು, 50 ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಗಿರಿಸಿಕೊಂಡಿದ್ದಾರೆ.
ಸೋಮವಾರ ಸಿಡ್ನಿಯ ಒಪೆರಾ ಹೌಸ್ ಕಟ್ಟಡದಲ್ಲಿರುವ ಕೆಫೆಯ ಮೇಲೆ ದಾಳಿ ಮಾಡಿರುವ ಶಸ್ತ್ರಸಜಿತ ಉಗ್ರರು, ಕೆಫೆಯಲ್ಲಿದ್ದ 50 ಮಂದಿಯನ್ನು ಒತ್ತೆಯಾಳಗಿರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಫೆಯಲ್ಲಿ ಇಬ್ಬರು ಉಗ್ರರು ಇದ್ದು, ಉಗ್ರರು ಐಎಸ್‌ಐಎಸ್ ಸಂಘಟನೆಗೆ ಸೇರಿದವರೆಂದು ಶಂಕಿಸಲಾಗಿದೆ.
ಕೆಫೆಯ ಕಿಟಕಿಯಲ್ಲಿ ಅರ್ಯಾಬಿಕ್ ಭಾಷೆಯಲ್ಲಿರುವ ಇಸ್ಲಾಂಮಿಕ್ ಬಾವುಟವನ್ನು ಹಾರಾಡಿಸಲಾಗುತ್ತಿದೆ. ಅಲ್ಲದೇ, ಉಗ್ರರು ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬೋಟ್ ಅವರೊಂದಿಗೆ ಮಾತನಾಡಲು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಫೆಯಲ್ಲಿ 7 ಸಿಬ್ಬಂದಿ ಸೇರಿ 50 ಮಂದಿ ಇದ್ದಾರೆ ಎಂದು ಕೆಫೆ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. 26/11 ಮುಂಬೈ ದಾಳಿ ಮಾದರಿಯಲ್ಲೇ ಈ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.
Advertisement