ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ
ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ

30 ವರ್ಷಗಳ ಬಳಿಕ ಶ್ರೀನಗರ ಮತ ದಾಖಲೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ದಾಖಲೆಯ ಹಕ್ಕು ಚಲಾವಣೆ...

ಶ್ರೀನಗರ/ರಾಂಚಿ: ಜಮ್ಮು ಕಾಶ್ಮೀರದಲ್ಲಿ ಮತ್ತೆ ದಾಖಲೆಯ ಹಕ್ಕು ಚಲಾವಣೆ ನಡೆದಿದೆ. ಭಾನುವಾರ ನಡೆದ ಕಣಿವೆ ರಾಜ್ಯದಲ್ಲಿ 18 ಸ್ಥಾನಗಳಿಗೆ ನಡೆದ 4ನೇ ಹಂತದ ಮತದಾನದಲ್ಲಿ ಶೇ.49ರಷ್ಟು ಮತದಾನವಾಗಿದೆ.

2008ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಶೇ.4 ರಷ್ಟು ಹೆಚ್ಚಾಗಿದೆ. ವಿಶೇಷವೆಂದರೆ ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಕಳೆದ 30 ವರ್ಷಗಳಲ್ಲಿ ಗರಿಷ್ಠ ಮತದಾನವಾಗಿದೆ.

ಉಗ್ರರಿಂದ ಮತದಾನ ಬಹಿಷ್ಕಾರ ಕರೆ, ಪ್ರತ್ಯೇಕತಾವಾದಿ ನಾಯಕರ ಬೆದರಿಕೆಯಿಂದ ಜನರು ಹಕ್ಕು ಚಲಾವಣೆಯಿಂದ ದೂರ ಉಳಿದಿದ್ದರು. ಆದರೆ ಹಾಲಿ ದಿನಮಾನದಲ್ಲಿ ಜನರು ಇಂಥ ಬೆದರಿಕೆಗಳನ್ನು ತುಳಿದು ಹಾಕಿ ಧೈರ್ಯದಿಂದ ಮತ ಹಾಕಿದ್ದು ಗಮನಾರ್ಹ ಅಂಶ.

ಹೀಗಾಗಿ ಶ್ರೀನಗರದಲ್ಲಿ ಶೇ.28 ಹಕ್ಕು ಚಲಾವಣೆಯಾಗಿದೆ. ಉಳಿದೆಡೆ ಶಾಂತಿಯುತ ಮತದಾನವಾಗಿದ್ದರೆ ಅಮಿರಾಕಡಾಲ್ನಲ್ಲಿ ಬಿಜೆಪಿ ಅಭ್ಯರ್ಥಿ ಮತಗಟ್ಟೆ ಅಧಿಕಾರಿಗೆ ಕಪಾಳ ಮೋಕ್ಷ ಮಾಡಿದ್ದು ವಿವಾದಕ್ಕೆ ಗುರಿಯಾಗಿದೆ.

ಜಾಖಂಡಲ್ಲಿ ಶೇ.61

ಜಾರ್ಖಂಡ್ನಲ್ಲೂ ಉತ್ತಮ ಪ್ರಮಾಣದಲ್ಲಿ ಮತ ಚಲಾವಣೆಯಾಗಿದ್ದು, ಶೇ.61.61ರಷ್ಟು ಮತದಾನವಾಗಿದೆ. ನಾಲ್ಕನೇ ಹಂತದಲ್ಲಿ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಲು ಬಂದಿದ್ದರು. 2 ರಾಜ್ಯಗಳಲ್ಲಿ ಡಿ.20 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. 23 ರಂದು ಫಲಿತಾಂಶ ಪ್ರಕಟವಾಗಲಿದೆ. 

Related Stories

No stories found.

Advertisement

X
Kannada Prabha
www.kannadaprabha.com