ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,ಗೌವ್ಹಾಟಿ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,ಗೌವ್ಹಾಟಿ

ಅತ್ಯಾಚಾರ ಪ್ರಕರಣ: ಐಐಟಿ ಡೀನ್ ಬಂಧನ

ಸಹಾಯಕ ಸಿಬ್ಬಂದಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ...

ಗೌವ್ಹಾಟಿ: ಸಹಾಯಕ ಸಿಬ್ಬಂದಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಡೀನ್, ಪ್ರೋಫೆಸರ್ ಅಲೋಕ್ ಕುಮಾರ್ ಗೋಶಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಗೌವ್ಹಾಟಿಯಲ್ಲಿರುವ ಐಐಟಿಯ ಡೀನ್ ಅಲೋಕ್ ಕುಮಾರ್ ಗೋಶಲ್ ಸಹಾಯಕ ಸಿಬ್ಬಂದಿಗೆ ಕಳೆದ ಒಂದು ತಿಂಗಳಿನಿಂದ ಲೈಂಗಿಕ ಕಿರುಕಳ ನೀಡಿದ್ದು, 12 ದಿನಗಳ ಹಿಂದೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಈ ಸಂಬಂಧ ಸಹಾಯಕ ಮಹಿಳಾ ಸಿಬ್ಬಂದಿ, ಅಲೋಕ್ ಕುಮಾರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಗುಪ್ತವಾಗಿ ಅಲೋಕ್ ಕುಮಾರ್ ಅವರನ್ನು ಹಿಂಬಾಲಿಸಿದಾಗ, ಅತ್ಯಾಚಾರವೆಸಗಿರುವ ಸಂಬಂಧ ಕೆಲವು ದಾಖಲೆಗಳು ದೊರೆತಿವೆ.

ಈ ಹಿನ್ನಲೆಯಲ್ಲಿ ಅಲೋಕ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com