ಕಿಸ್ ಆಫ್ ಲವ್ ಅನೈತಿಕ: ಕೇರಳ ಹೈಕೋರ್ಟ್

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕಿಸ್ ಆಫ್ ಲವ್ ಪ್ರತಿಭಟನೆ...
ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್

ಕೊಚ್ಚಿ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕಿಸ್ ಆಫ್ ಲವ್ ಪ್ರತಿಭಟನೆ ಅನೈತಿಕ ಎಂದು ಕೇರಳ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ನೈತಿಕ ಪೊಲೀಸ್‌ಗಿರಿ ವಿರೋಧಿಸಿ ಕೇರಳದ ಕೋಝಿಕ್ಕೋಡ್‌ನಲ್ಲಿ ಕಳೆದ ಡಿ.7ರಂದು ನಡೆದಿದ್ದ ಕಿಸ್ ಇನ್ ದಿ ಸ್ಟ್ರೀಟ್ ಪ್ರತಿಭಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್ ಕಿಸ್ ಆಫ್ ಲವ್ ಅನೈತಿಕ ಎಂದು ಹೇಳಿದೆ. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ಕಮಲ್ ಪಾಶ ಅವರು 'ಕಿಸ್ ಆಫ್ ಲವ್ ಅನೈತಿಕವಾದದ್ದು. ಆದರೂ ಇಂತಹ ಘಟನೆಗಳಿಗೆ ರಾಜಕೀಯ ಯುವ ಸಂಘಟಕರ ಪಕ್ಷಗಳು ಸಾತ್ ನೀಡುತ್ತಿರುವುದು ದೇಶದ ದುರದೃಷ್ಟಕರ ಸಂಗತಿ' ಎಂದು ಹೇಳಿದ್ದಾರೆ.

ಕಿಸ್ ಆಫ್ ಲವ್‌ಗೆ ಅನೇಕ ವಿರೋಧಗಳು ವ್ಯಕ್ತವಾಗಿದ್ದರೂ ಫೇಸ್‌ಬುಕ್‌ನ ಹೊಸ ಸಮೂಹವೊಂದು ಕೇರಳದ ಕೋಝಿಕ್ಕೋಡ್‌ನ ಮೊಫಿಸಿಸ್ ಬಸ್ ನಿಲ್ದಾಣದಲ್ಲಿ 'ಕಿಸ್ ಇನ್ ದಿ ಸ್ಟ್ರೀಟ್‌' ಎಂಬ ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದ ಹನುಮಾನ್ ಸೇನಾ ಕಾರ್ಯಕರ್ತರು ಹಾಗೂ ಯುವ ಮೊರ್ಚಾ ಕಾರ್ಯಕರ್ತರು ಪ್ರತಿಭಟನೆ ವೇಳೆ ಹಲ್ಲೆ ಮಾಡಿದ್ದರು. ಈ ಘಟನೆ ಹಿಂಸೆಗೆ ತಿರುಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಲಾಟಿ ಚಾರ್ಜ್ ಮಾಡಿದ್ದರು. ಅಲ್ಲದೆ, ಭಾರತೀಯ ಜನತಾ ಪಕ್ಷದ ಐವರು ಕಾರ್ಯಕರ್ತರನ್ನು ಬಂಧಿಸಿದ್ದರು.

ಪ್ರಕರಣದಲ್ಲಿ ಬಂಧಿತರಾಗಿದ್ದ 5 ಮಂದಿಯ ಜಾಮೀನು ಅರ್ಜಿ ಕುರಿತಂತೆ ನಿನ್ನೆ ಕೇರಳ ಹೈ ಕೋರ್ಟ್ ನ್ಯಾಯಧೀಶ ಬಿ.ಕಮಲ್ ಪಾಷ ನೇತೃತ್ವದಲ್ಲಿ ವಿಚಾರಣೆ ಆರಂಭಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com