ಹುಡುಗಿಯರು ಅಡ್ಡದಾರಿ ಹಿಡಿಯಲು ಮೊಬೈಲ್, ಜೀನ್ಸ್ ಕಾರಣವಂತೆ..!

ಹುಡುಗಿಯರು ಅಡ್ಡದಾರಿ ಹಿಡಿಯಲು ಜೀನ್ಸ್ ಮತ್ತು ಮೊಬೈಲ್...
ಅಡ್ಡದಾರಿ ಹಿಡಿಯಲು ಮೊಬೈಲ್, ಜೀನ್ಸ್ ಕಾರಣವಂತೆ!
ಅಡ್ಡದಾರಿ ಹಿಡಿಯಲು ಮೊಬೈಲ್, ಜೀನ್ಸ್ ಕಾರಣವಂತೆ!

ಗೋಪಾಲ್‌ಗಂಜ್: ಹುಡುಗಿಯರು ಅಡ್ಡದಾರಿ ಹಿಡಿಯಲು ಜೀನ್ಸ್ ಮತ್ತು ಮೊಬೈಲ್ ಬಳಕೆಯೇ ಕಾರಣವೆಂದು ಬಿಹಾರದ ಗ್ರಾಮಪಂಚಾಯಿತಿಯೊಂದು ಹೇಳಿದೆ.

ಬಿಹಾರದ ಹತುವಾ ಗ್ರಾಮದ ಸಿಂಘ ಪಂಚಾಯಿತಿ ಸದಸ್ಯರು ಯುವತಿಯರು ಅಡ್ಡದಾರಿ ಹಿಡಿಯಲು ಜೀನ್ಸ್ ಬಟ್ಟೆಗಳು ಮತ್ತು ಮೊಬೈಲ್ ಫೋನೇ ಕಾರಣ ಎಂದು ಆರೋಪಿಸಿ ಗ್ರಾಮದಲ್ಲಿ ಹೆಣ್ಣುಮಕ್ಕಳು ಮೊಬೈಲ್ ಫೋನ್ ಬಳಕೆ ಮತ್ತು ಜೀನ್ಸ್ ಬಟ್ಟೆಗಳನ್ನು ತೊಡದಂತೆ ನಿಷೇಧ ಹೇರಿದೆ.

ಈ ಕುರಿತು ಇಂದು ಗ್ರಾಮದಲ್ಲಿ ಸಭೆ ಸೇರಿದ ಹಿರಿಯರು ಪಂಚಾಯತ್ ಸದಸ್ಯರಾದ ಮುಖಿಯ ಕೃಷ್ಣ ಚೌಧರಿ, ವಿನಯ್ ಕುಮಾರ್ ಶ್ರೀವಾತ್ಸವ್ ಸೇರಿದಂತೆ ಹತುವಾ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಜಿತೇಂದ್ರ ಕುಮಾರ್ ಅವರು ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೇ, ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಮಾತ್ರ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

2015 ಜನವರಿ 1ರಿಂದ ನಿಷೇಧ ಜಾರಿಗೆ ಬರಲಿದ್ದು, ಈಗಾಗಲೇ ಗ್ರಾಮದಲ್ಲಿನ ಹುಡುಗಿಯರಿಗೆ ಹಾಗೂ ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಗ್ರಾಮದಲ್ಲಿ ಜೀನ್ಸ್ ಹಾಗೂ ಮೊಬೈಲ್ ಖರೀದಿಸದಂತೆ ವಿನಂತಿಸಿ ಕೊಳ್ಳಲಾಗಿದೆ. ಒಂದು ವೇಳೆ ಹುಡುಗಿಯರು ಅಥವಾ ಮಹಿಳೆಯರು ನಿಷೇಧವನ್ನು ಪಾಲಿಸದೇ ಹೋದರೆ ಗ್ರಾಮದಲ್ಲಿ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಶಿಕ್ಷೆ ನೀಡಲಾಗುವುದು ಎಂದು ಗ್ರಾಮದ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com