
ನೆರೆಯ ರಾಷ್ಟ್ರಗಳಿಗೆ 18 ಸಾವಿರ ಕೋಟಿ ನೆರವು ನೀಡುವ ಆಮಿಷ ಒಡ್ಡಿದ ಚೀನಾ ಸರ್ಕಾರ
ಬ್ಯಾಂಕಾಕ್: ಏಷ್ಯಾದ ಮೇಲೆ ಪ್ರಭುತ್ವ ಸಾಧಿಸಲು ಚೀನಾ ಈಗ ನೆರೆಹೊರೆಯ ದೇಶಗಳಿಗೆ ಹಣದ ಆಮಿಷ ನೀಡುವ ತಂತ್ರ ಅನುಸರಿಸುತ್ತಿದೆ.
ಕಾಂಬೋಡಿಯಾ, ವಿಯಾಟ್ನಾಂ, ಮ್ಯಾನ್ಮಾರ್ , ಥಾಯ್‌ಲ್ಯಾಂಡ್ ಮತ್ತು ಲಾವೋಸ್‌ನಲ್ಲಿ ಮೂಲ ಸೌಲಭ್ಯ, ಉತ್ಪಾದನೆ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಹೆಸರಿನಲ್ಲಿ 18 ಸಾವಿರ ಕೋಟಿ ನೆರವು ನೀಡಲಾಗುತ್ತಿದೆ.
ನಾವು ಈ 5 ರಾಷ್ಚ್ರಗಳ ಜತೆ ಬಾಂಧವ್ಯವೃದ್ಧಿಗಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ. ಜತೆಗೆ, ಈ ದೇಶಗಳ ಜತೆಗಿನ ಸಮಗ್ರ ಪಾಲುದಾರಿಕೆಯನ್ನು ಕೆಲಸ ಹೊಸ ಮಜಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದು ಬ್ಯಾಂಕಾಕ್‌ನಲ್ಲಿ ನಡೆದ ಆರ್ಥಿಕ ಸಹಕಾರ ಸಮ್ಮೇಳನದಲ್ಲಿ ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಹೇಳಿದ್ದಾರೆ.
ಅದರಂತೆ ಪ್ರಾದೇಶಿಕ ಸಾರಿಗೆ ಮಾರ್ಗಗಳ ಮೂಲಕ ಚೀನಾ ಈ ದೇಶಗಳಲ್ಲಿ ಟೆಲಿಕಮ್ಯುನಿಷೇನ್, ವಿದ್ಯುತ್, ಉಕ್ಕು, ಸಿಮೆಂಟ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಸೌಕರ್ಯಗಳ ರಫ್ತಿಗೂ ಚೀನಾ ಉದ್ದೇಶಿಸಿದೆ. ಇದಕ್ಕಾಗಿ ಆ ದೇಶಗಳಿಗೆ ವಿಶೇಷ ಸಾಲ ನೀಡಲಿದೆ. ಥಾಯ್‌ಲ್ಯಾಂಡ್‌ನಲ್ಲಿ 867 ಕಿ.ಮೀ. ಉದ್ದ ರೈಲು ಮಾರ್ಗ ನಿರ್ಮಾಣ, ಥಾಯ್‌ಲ್ಯಾಂಡ್‌ನಿಂದ 2 ದಶಲಕ್ಷ ಟನ್ ಅಕ್ಕಿ ಖರೀದಿಸಲೂ ಚೀನಾ ನಿರ್ಧರಿಸಿದೆ. ಚೀನಾ-ಆಸಿಯಾನ್ ಸಹಕಾರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲಿ ಹೇಳಿದ್ದಾರೆ.
Advertisement