ಡ್ರಗ್ಸ್ ಹಾಗೂ ಹವಾಲ ಪ್ರಕರಣ: ಸಚಿವ ಬಿಕ್ರಂ ಸಿಂಗ್‌ಗೆ ಇಡಿ ಸಮನ್ಸ್

ಬಿಕ್ರಂ ಸಿಂಗ್ ಮಂಜೀತಿಯಾ
ಬಿಕ್ರಂ ಸಿಂಗ್ ಮಂಜೀತಿಯಾ

ಚಂಡೀಗಡ: ಡ್ರಗ್ಸ್ ಮುಕ್ತ ಸಮಾಜ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹವಣಿಸುತ್ತಿದ್ದರೆ. ಪಂಜಾಬ್‌ನಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳದ ಸಚಿವರೊಬ್ಬರು ಮಾದಕ ವಸ್ತು ಜಾಲ ಮತ್ತು ಹವಾಲ ಹಣ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದು, ಎನ್‌ಡಿಎ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.

ಕೇಂದ್ರ ಸಚಿವ ಹರಿಸಿಮ್ರತ್ ಕೌರ್ ಬಾದಲ್ ಅವರ ಕಿರಿಯ ಸಹೋದರನಾಗಿರುವ ಪಂಜಾಬ್‌ನ ಕಂದಾಯ ಸಚಿವ ಬಿಕ್ರಂ ಸಿಂಗ್ ಮಂಜೀತಿಯಾ ಅವರಿಗೆ ಮಾದಕ ವಸ್ತು ಜಾಲ ಮತ್ತು ಹವಾಲ ಹಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರಿಗೆ ಜಾರಿ ನಿರ್ದೇಶನಾಯಲ ಸಮನ್ಸ್ ಜಾರಿ ಮಾಡಿದ್ದು, ಶೀಘ್ರ ವಿಚಾರಣೆಗೊಳಪಡಿಸಲಿದೆ.

6 ಸಾವಿರ ಕೋಟಿ ರು. ಮೌಲ್ಯದ ಮಾದಕ ವಸ್ತು ಜಾಲ ಮತ್ತು ಹವಾಲ ಪ್ರಕರಣಗಳ ವಿಚಾರಣೆಗೆ ಬಿಕ್ರಂ ಸಿಂಗ್ ಮಂಜೀತಿಯಾ ಅವರು ಜಾರಿ ನಿರ್ದೇಶನಾಲಯ ಮುಂದೆ ಹಾಜರಾಗಬೇಕಿದ್ದು. ವಿಚಾರಣೆ 26ರಂದು ನಡೆಯಲಿದೆ ಎನ್ನಲಾಗಿದೆ.

ಪಂಜಾಬ್ ಪೊಲೀಸರು 2013ರಲ್ಲಿ ಮಾಜಿ ಪೊಲೀಸ್ ಜಗದೀಶ್ ಸಿಂಗ್ ಬೋಲಾ ಅವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಬೋಲಾ ಬಿಂಕ್ರ ಸಿಂಗ್‌ರ ಹೆಸರನ್ನು ಬಯಲು ಮಾಡಿದ್ದು ಬಹುಕೋಟಿ ಮಾದಕ ವಸ್ತು ಪ್ರಕರಣವನ್ನು ಬಯಲಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com