ದಾವೂದ್ ನನ್ನು ಭಾರತಕ್ಕೆ ಒಪ್ಪಿಸಿ: ಕಿರಣ್ ರಿಜುಜು

ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡಲೇ ಭಾರತಕ್ಕೆ ಒಪ್ಪಿಸಿ ಎಂದು ಕೇಂದ್ರ ಸಚಿವ ಕಿರಣ್ ರಿಜುಜು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಲಖನೌನಲ್ಲಿ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜುಜು (ಸಂಗ್ರಹ ಚಿತ್ರ)
ಲಖನೌನಲ್ಲಿ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜುಜು (ಸಂಗ್ರಹ ಚಿತ್ರ)

ಲಖನೌ: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡಲೇ ಭಾರತಕ್ಕೆ ಒಪ್ಪಿಸಿ ಎಂದು ಕೇಂದ್ರ ಸಚಿವ ಕಿರಣ್ ರಿಜುಜು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಭೂಗತ ಪಾತಕಿ ಮತ್ತು 1993 ಮುಂಬೈ ಸರಣಿ ಸ್ಫೋಟ ರೂವಾರಿ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇರುವ ಕುರಿತು ಬಲವಾದ ಸಾಕ್ಷ್ಯಾಧಾರ ದೊರೆತ ಹಿನ್ನಲೆಯಲ್ಲಿ ಇಂದು ಲಖನೌನಲ್ಲಿ ಮಾತನಾಡಿದ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜುಜು ಅವರು, 'ಭಾಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇರುವ ಕುರಿತು ನಾವು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದೇವೆ. ಪಾಕಿಸ್ತಾನ  ಸರ್ಕಾರ ಕನಿಷ್ಟ ಪಕ್ಷ ಈಗಲಾದರೂ ಭಯೋತ್ಪಾದನೆ ವಿರುದ್ಧ ಹೋರಾಡ ಬಯಸಿದರೆ, ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ಹೇಳಿದರು.

ಪೇಶಾವರದಲ್ಲಿ ನಡೆದ ಭೀಕರ ಭಯೋತ್ಪದಕ ದಾಳಿ ನಂತರ ಪಾಕಿಸ್ತಾನ ತಾನು ಉಗ್ರರ ವಿರುದ್ಧ ಕಠಿಣ ನಿಲುವು ತಾಳಿದ್ದೇನೆ ಎಂದು ವಿಶ್ವಕ್ಕೆ ಹೇಳುತ್ತಿದೆ. ಆದರೆ ಅದು ನಿಜಕ್ಕೂ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಒಪ್ಪಿಸಲಿ ಹಾಗೂ ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಕೈ ಜೋಡಿಸಲಿ. ಅಂತೆಯೇ ದಾವೂದ್ ಕರಾಚಿಯಲ್ಲೇ ಇರುವ ಕುರಿತು ಪ್ರಬಲ ಸಾಕ್ಷಿ ದೊರೆತಿದ್ದು, ಈ ಸಂಬಂಧ ಪಾಕಿಸ್ತಾನ ಪ್ರತಿಕ್ರಿಯಿಸಬೇಕು ಎಂದು ಪರೋಕ್ಷ ಸವಾಲೆಸೆದರು.

ಇನ್ನು ಇದೇ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಈ ಸಂಬಂಧ ಪಾಕಿಸ್ತಾನದೊಂದಿಗೆ ಭಾರತ ಮಾತುಕತೆ ನಡೆಸುತ್ತಿದ್ದು, ಮುಂದೇನಾಗಬಹುದು ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com