ರೈಲು ಡಿಕ್ಕಿ: 5 ರೈಲ್ವೆ ಸಿಬ್ಬಂದಿ ದಾರುಣ ಸಾವು

ಈ ಪ್ರಕರಣ ಸಂಬಂಧ ಇಲಾಖೆವತಿಯಿಂದ ತನಿಖೆಗೆ ಆದೇಶ ಹೊರಡಿಸಲಾಗಿದೆ...
ರೈಲು ಹಳಿ ಪರಿಶೀಲನೆ ಮಾಡುತ್ತಿದ್ದ ಇನ್ಸ್‌ಪೆಕ್ಟರ್ ಸೇರಿ 5 ಮಂದಿ ಸಾವು
ರೈಲು ಹಳಿ ಪರಿಶೀಲನೆ ಮಾಡುತ್ತಿದ್ದ ಇನ್ಸ್‌ಪೆಕ್ಟರ್ ಸೇರಿ 5 ಮಂದಿ ಸಾವು

ಪಾಟ್ನ: ರೈಲು ಹಳಿ ನಿರ್ವಹಣಾ ಕಾಮಗಾರಿಯಲ್ಲಿ ತೊಡಗಿದ್ದ ಸಿಬ್ಬಂದಿಗಳ ಮೈಲೆ ರೈಲು ಹರಿದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಿಹಾರದ ರೋಟಸ್ ತಾಲೂಕಿನಲ್ಲಿರುವ ಕಮ್ಹಾವ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.

ಇಂದು ಮಧ್ಯಾಹ್ನ ಸುಮಾರು 12.30 ರಂದು ರೈಲು ಸಿಬ್ಬಂದಿ, ರೈಲು ಹಳಿ ನಿರ್ವಹಣಾ ಕಾಮಗಾರಿಯಲ್ಲಿ ತೊಡಗಿದ್ದರು. ಆ ವೇಳೆಯಲ್ಲಿ ಅಜ್ಮೀರ್-ಸಾಲ್ದಾ ಎಕ್ಸ್‌ಪ್ರೆಸ್ ಆ ಮಾರ್ಗವಾಗಿ ರಭಸವಾಗಿ ಆಗಮಿಸುತ್ತಿತ್ತು. ದಟ್ಟವಾದ ಮಂಜು ಕವಿದ ವಾತಾವರಣವಿದ್ದ ಕಾರಣ ರೈಲು ಬರುತ್ತಿರುವುದನ್ನು ಸಿಬ್ಬಂದಿಯಿಂದ ಗಮನಿಸಲು ಸಾಧ್ಯವಾಗಲಿಲ್ಲ.

ಮಿಂಚಿನ ವೇಗದಲ್ಲಿ ಬಂದ ಎಕ್ಸ್‌ಪ್ರೆಸ್ ರೈಲು, ರೈಲು ಹಳಿ ಕಾಮಗಾರಿಯಲ್ಲಿ ತೊಡಗಿದ್ದ ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದು,  ರೈಲು ಹಳಿ ಪರಿಶೀಲನೆ ಮಾಡುತ್ತಿದ್ದ ಇನ್ಸ್‌ಪೆಕ್ಟರ್ ಸೇರಿದಂತೆ 5 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಮೊದಲೆ ಆ ಎಕ್ಸ್‌ಪ್ರೆಸ್ ರೈಲು 6 ಗಂಟೆಗಳ ಕಾಲ ತಡವಾಗಿ ಬಂದಿದ್ದರಿಂದ, ಆ ಮಾರ್ಗದಲ್ಲಿ ಬೇರೆ ಯಾವ ರೈಲು ಬರುವುದಿಲ್ಲ ಎಂದು, ಸಿಬ್ಬಂದಿ ತಮ್ಮ ಕಾರ್ಯದಲ್ಲಿ ತೊಡಗಿದ್ದು, ಈ ದಾರುಣ ಘಟನೆ ಸಂಭವಿಸಿದೆ.

ಈ ಪ್ರಕರಣ ಸಂಬಂಧ ಇಲಾಖೆವತಿಯಿಂದ ತನಿಖೆಗೆ ಆದೇಶ ಹೊರಡಿಸಲಾದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com