ವರ್ಷಾಂತ್ಯ ರಿವ್ಯೂ: ಕ್ಷಮೆಯಾಚಿಸಿದ ಫೇಸ್‌ಬುಕ್

ಫೇಸ್‌ಬುಕ್‌ನ ವರ್ಷಾಂತ್ಯದ ನೆನಪುಗಳನ್ನು ಮೆಲುಕು ಹಾಕುವ ಹೊಸ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಫೇಸ್‌ಬುಕ್‌ನ ವರ್ಷಾಂತ್ಯದ ನೆನಪುಗಳನ್ನು ಮೆಲುಕು ಹಾಕುವ ಹೊಸ ಅಪ್ಲಿಕೇಶನ್‌ಗೆ ಬಳಕೆದಾರರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಫೇಸ್‌ಬುಕ್ ಸಂಸ್ಥೆ ಕ್ಷಮೆಯಾಚಿಸಿದೆ.

ಹೊಸ ವರ್ಷಕ್ಕೆ ಕೆಲವು ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಫೇಸ್‌ಬುಕ್, ತನ್ನ ಬಳಕೆದಾರರ ಖಾತೆಯಲ್ಲಿರುವ ಕೆಲ ಫೋಟೋಗಳನ್ನು ಬಳಸಿಕೊಂಡು Year End Review ಅಪ್ಲಿಕೇಶನ್ ಒಂದನ್ನು ಪರಿಚಯಿಸಿತ್ತು. ಈ ಅಪ್ಲಿಕೇಶನ್‌ನ್ನು ಕ್ಲಿಕ್ಕಿಸಿದರೆ ಬಳಕೆದಾರರ 2014 ರ ಫೇಸ್‌ಬುಕ್ ಚಟುವಟಿಕೆಗಳು ತೆರೆದುಕೊಳ್ಳುತ್ತಿತ್ತು. ಫೇಸ್‌ಬುಕ್‌ನ ಈ ಕಾರ್ಯಕ್ಕೆ ಬಳಕೆದಾರರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ಹೊಸ ವರ್ಷಕ್ಕೆ ಒಳ್ಳೆಯ ನೆನಪುಗಳನ್ನು ಮೆಲುಕು ಹಾಕುವ ಪ್ರಯತ್ನ ಮಾಡಬೇಕೇ ವಿನಃ ಮನಸ್ಸಿಗೆ ಘಾಸಿಯಾಗುವ ಪ್ರಯತ್ನವಾಗಬಾರದು.

ವರ್ಷಾಂತ್ಯದವರೆಗಿನ ಕ್ಷಣಗಳನ್ನು ಮೆಲುಕು ಹಾಕುವುದು ಒಳ್ಳೆಯದೇ ಆದರೆ ಕೆಲವು ಕ್ಷಣಗಳು ಮನಸ್ಸಿಗೆ ಘಾಸಿ ಉಂಟು ಮಾಡುತ್ತವೆ. ಇಷ್ಟವಾಗದ ಕ್ಷಣಗಳು ಫೋಟೋಗಳು ಕಣ್ಣ ಮುಂದೆ ಬಂದಾಗ ಹೊಸ ವರ್ಷದ ಸಂಭ್ರಮ ದುಃಖದ ವಾತಾವರಣ ಸೃಷ್ಟಿಸುತ್ತವೆ. ಅದು ವಿಚ್ಛೇದನ ಘಟನೆಯಾಗಿರಬಹುದು ಅಥವಾ ಕುಟುಂಬಸ್ಥರ ಸಾವಿನ ಸುದ್ದಿಯಿರಬಹುದು. ಹೊಸ ವರ್ಷಕ್ಕೆ ಸಂತೋಷದ ಕ್ಷಣಗಳನ್ನು ನೆನಪಿಸುವ ಪ್ರಯತ್ನ ನಡೆಯಬೇಕೇ ವಿನಃ ನೋವನ್ನು ಕೆದಕಿ ಘಾಸಿ ಉಂಟು ಮಾಡುವ ಪ್ರಯತ್ನಗಳಾಗಬಾರದು ಎಂದು ಫೇಸ್‌ಬುಕ್ ಬಳಕೆದಾರರು ಫೇಸ್‌ಬುಕ್ ಸಂಸ್ಥೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.

ಬಳಕೆದಾರರಿಂದ ತೀವ್ರವಾದ ಆಕ್ಷೇಪ ಹಿನ್ನೆಲೆಯಲ್ಲಿ ಫೇಸ್‌ಬುಕ್ ಸಂಸ್ಥೆಯು ಎಲ್ಲರನ್ನೂ ಸಂತೋಷ ಪಡಿಸುವ ಉದ್ದೇಶದಿಂದ ಫೇಸ್‌ಬುಕ್ ಅಪ್ಲಿಕೇಶನ್ ಒಂದನ್ನು ಪರಿಚಯಿಸಿತ್ತೇ ವಿನಃ ಮನಸ್ಸಿಗೆ ಘಾಸಿಗೊಳಿಸುವ ಉದ್ದೇಶ ಆಗಿರಲಿಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಫೇಸ್‌ಬುಕ್ ನಿರ್ವಾಹಕ ಜೊನಾಥನ್ ಘೆಲ್ಲರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com