ಪಿಕೆ ಸಿನಿಮಾ: ಬಹಿಷ್ಕಾರ ಹಾಕಿ

ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ...
ಪಿಕೆ ಸಿನಿಮಾ
ಪಿಕೆ ಸಿನಿಮಾ

ನವದೆಹಲಿ: ನಿರ್ಮಾಪಕರ ರಾಜ್‌ಕುಮಾರ್ ಹಿರಾನಿ ನಿರ್ಮಾಣದ ಪಿಕೆ ಸಿನಿಮಾ ಈ ಹಿಂದೂ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ.

ಅಮೀರ್ ಖಾನ್ ಅಭಿನಯದ ಈ ಸಿನಿಮಾದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಯೋಗ ಗುರು ರಾಮ್‌ದೇವ್ ಆರೋಪಿಸಿದ್ದಾರೆ.

ಹೀಗಾಗಿ ಸಿನಿಮಾವನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡವರನ್ನೆಲ್ಲ ಸಮಾಜದಿಂದ ಬಹಿಷ್ಕರಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಇದೇ ವೇಳೆ ವಾರಾಂತ್ಯಕ್ಕೆ ವಿಶ್ವಾದ್ಯಂತ ಪಿಕೆ ಸಿನಿಮಾದ ಗಳಿಕೆ ರೂ.214 ಕೋಟಿ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com