

ಅಹಮದಾಬಾದ್: ಪೊಲೀಸ್ ಡ್ರಿಲ್ ವೇಳೆ ಭಯೋತ್ಪಾದಕ ವೇಷಧಾರಿಗೆ ಮುಸ್ಲಿಂ ವೇಷಭೂಷಣ ತೊಡಿಸುವ ಮೂಲಕ ಗುಜರಾತ್ ಪೊಲೀಸರು ವಿವಾದಕ್ಕೀಡಾಗಿದ್ದಾರೆ.
ಭಯೋತ್ಪಾದನಾ ದಾಳಿಯನ್ನು ಎದುರಿಸುವ ಕುರಿತು ಗುಜರಾತ್ ಪೊಲೀಸರು ಕೈಗೊಂಡಿದ್ದ ಪೊಲೀಸ್ ಡ್ರಿಲ್ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸೂರತ್‌ನಲ್ಲಿ ಡ್ರಿಲ್ ವೇಳೆ ಭಯೋತ್ಪಾದಕ ವೇಷಧಾರಿಗೆ ಮುಸ್ಲಿಂ ಟೋಪಿ ತೊಡಿಸಲಾಗಿದೆ. ಆ ಮೂಲಕ ಭಯೋತ್ಪಾದಕರು ಮುಸ್ಲಿಮರು ಎನ್ನುವ ಸಂದೇಶ ಸಾರುವಂತಿದೆ ಎಂದು ಧಾರ್ಮಿಕ ಮುಖಂಡರು ಆರೋಪಿಸಿದ್ದಾರೆ.
ಇನ್ನು ಸೂರತ್ ಪೊಲೀಸರ ಈ ಡ್ರಿಲ್ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಪೊಲೀಸರ ಈ ನಿರ್ಲಕ್ಷತನಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.