ತಾಯಿ ರಕ್ಷಣೆಗಾಗಿ ಆತ್ಮಾಹುತಿ ಬಾಂಬರ್ ಆದ ಬಾಲಕ

ಜಾಕಿಚಾನ್ ಸಿನಿಮಾದ ಅಭಿಮಾನಿ, ಕಾಲೇಜಿಗೆ ಓದಿ ಡಾಕ್ಟರ್ ಆಗಬೇಕು ಎಂಬ ಕನಸು...
ಉಸೈದ್ ಬರ್ಹೋನ್
ಉಸೈದ್ ಬರ್ಹೋನ್

ಬಾಗ್ದಾದ್: ಜಾಕಿಚಾನ್ ಸಿನಿಮಾದ ಅಭಿಮಾನಿ, ಕಾಲೇಜಿಗೆ ಓದಿ ಡಾಕ್ಟರ್ ಆಗಬೇಕು ಎಂಬ ಕನಸು ಹೊತ್ತಿದ್ದ ಬಾಲಕ, ತಾಯಿಯ ರಕ್ಷಣೆಗಾಗಿ ಆತ್ಮಾಹುತಿ ಬಾಂಬರ್ ಆಗಿರುವ ಘಟನೆ ಬಾಗ್ದಾದ್‌ನಲ್ಲಿ ನಡೆದಿದೆ.

ಕೇವಲ 14 ವರ್ಷದ ಬಾಲಕನೊಬ್ಬ ತಾಯಿಗಾಗಿ ಆತ್ಮಾಹುತಿ ಬಾಂಬರ್ ಆದ. ಆ ಬಾಲಕನ ಹೆಸರು ಉಸೈದ್ ಬರ್ಹೋನ್. ಜಾಕಿಚಾನ್ ಸಿನಿಮಾ ಎಂದರೆ ಬಲು ಇಷ್ಟ. ಕಾಲೇಜಿಗೆ ಹೋಗಿ ಡಾಕ್ಟರ್ ಆಗಬೇಕು ಎಂಬ ಕನಸು ಕಟ್ಟಿದ್ದನು. ಆದರೆ, ಈತನ ಕನಸಿಗೆ ನೀರೆರಚಿದಂತೆ, ಇಸ್ಲಾಮಿಕ್ ಉಗ್ರ ಸಂಘಟನೆ ಆತನನ್ನು ಆತ್ಮಹುತಿ ಬಾಂಬರನ್ನಾಗಿ ಮಾಡಿತು.

ಇತ್ತೀಚೆಗೆ ಒಂದು ದಿನ ಸಂಜೆ ಬಾಗ್ದಾದಿನ ಶಿಯಾ ಪಂಗಡದ ಮಸೀದಿಯೊಂದರ ಗೇಟ್ ಬಳಿ ಪ್ರತ್ಯಕ್ಷವಾದ ಈ ಬಾಲಕ ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಕರೆದು ಅವರೆದುರು ತನ್ನ ಜಾಕೆಟ್ ತೆರೆದು ನೋಡಿ ನಾನೊಬ್ಬ ಆತ್ಮಾಹುತಿ ಬಾಂಬರ್ ಎಂದಿದ್ದಾನೆ.

ನೋಡಿ, ನನ್ನ ದೇಹದ ತುಂಬಾ ಬಾಂಬ್‌ಗಳನ್ನು ಫಿಕ್ಸ್ ಮಾಡಲಾಗಿದೆ. ಇಸಿಸ್ ಉಗ್ರರು ನನ್ನ ಬ್ರೈನ್ ವಾಷ್ ಮಾಡಿ ಉಗ್ರ ಸಂಘಟನೆಗೆ ಸೇರಿಸಿಕೊಂಡು ನನ್ನನ್ನು ಮಾನವ ಬಾಂಬರ್ ಆಗಿ ಪರಿವರ್ತಿಸಿದ್ದಾರೆ. ಮಸೀದಿ ಸ್ಫೋಟಕ್ಕೆಂದು ನನ್ನನ್ನು ಕಳುಹಿಸಲಾಗಿದೆ. ಆದರೆ ನನಗೆ ಹಿಂಸಾಚಾರ ಬೇಕಿಲ್ಲ. ಅದಕ್ಕಾಗಿ ನಿಮ್ಮೆದುರು ಈ ವಿಷಯ ತಿಳಿಸಿದ್ದೇನೆ. ಸುನ್ನಿ ಉಗ್ರರು ನನ್ನನ್ನು ಈ ರೀತಿ ಪ್ರಚೋದಿಸಿ ಕಳಿಸಿದ್ದಾರೆ. ನಾನು ಕೂಡ ಮೊದಲ ಅವರ ಮಾತನ್ನು ನಂಬಿದೆ. ಏಕೆಂದರೆ ನನಗೆ ಇಸ್ಲಾಂ ಧರ್ಮದ ಬಗ್ಗೆ ಗೌರವವಿದೆ.

ಆತನ ಮಾತು ಮತ್ತು ಆತನ ಧೈರ್ಯಕ್ಕೆ ಬೆಚ್ಚಿಬಿದ್ದ ಸಿಬ್ಬಂದಿ, ನಿನ್ಯಾಕೆ ಆತ್ಮಾಹುತಿ ಬಾಂಬರ್ ಆದೆ ಎಂದು ಪ್ರಶ್ನಿಸಿದ್ದಕೆ, ಆತ ಹೇಳಿದ್ದು ಮನಕಲಕುವ ಸಂಗತಿ. ನಾನು ಆತ್ಮಾಹುತಿ ಬಾಂಬರ್ ಆಗಲು ಒಪ್ಪದಿದ್ದರೆ ಸುನ್ನಿ ಉಗ್ರರು ನನ್ನ ತಾಯಿಯನ್ನು ಅತ್ಯಾಚಾರವೆಸಗುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಶಿಯಾ ಮುಸ್ಲಿಮರು ಧರ್ಮ ಬಾಹಿರರು. ಅವರನ್ನು ನಾವು ಕೊಲ್ಲಲೇಬೇಕು ಎಂದು ಇಸಿಸ್ ಉಗ್ರರು ಹೇಳಿದರು. ಆದರೆ, ನನಗೆ ಹಿಂಸಾಚಾರ ಇಷ್ಟವಿಲ್ಲ. ನಾನು ಹೇಗಾದರೂ ತಪ್ಪಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿಯೇ ನಾನು ಆತ್ಮಾಹುತಿ ಬಾಂಬರ್ ಆಗಲು ಒಪ್ಪಿದೆ. ಇಸಿಸ್ ಉಗ್ರರು ನನ್ನ ದೇಹಕ್ಕೆ ಬಾಂಬ್ ಕಟ್ಟಿ ಶಿಯಾ ಮಸೀದಿ ಸ್ಫೋಟಿಸಲು ಕಳುಹಿಸಿದ್ದರು ಎಂದು ತಿಳಿಸಿದ್ದಾನೆ.

ಬೆಳಗಿನ ಜಾವ ನಿದ್ದೆಯಲ್ಲಿದ್ದಾಗ ಸಂಘಟನೆಯ ಹಿರಿಯ ಕಾರ್ಯಕರ್ತರು ಎದ್ದೇಳು ಬೇಗ ಎಂದು ಎಬ್ಬಿಸಿ, ಬಾಂಬ್ ಇರಿಸಿರುವ ಜಾಕೆಟ್ ತೊಟ್ಟುಕೊ ಎಂದು ಹೇಳಿ ಶಿಯಾ ಮಸೀದಿಗೆ ಹೋಗು. ಅಲ್ಲಿ ಜನ ಬರುತ್ತಾರೆ. ನೀನು ಸ್ಫೋಟಿಸಿಕೋ ಎಂದು ಆದೇಶಿಸಿದ್ದರು.

ತಕ್ಷಣ ಆ ಬಾಲಕನನ್ನು ರಕ್ಷಿಸಿದ ಸಿಬ್ಬಂದಿ ವಿಚಾರಣೆ ಕೈಗೊಂಡಿದ್ದಾರೆ. ಅನೇಕ ಜೀವಗಳನ್ನು ಉಳಿಸಿದ ಈ ಬಾಲಕನನ್ನು ಅಲ್ಲಿನ ಪೊಲೀಸರು ಪೂರ್ಣ ಭದ್ರತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com