ಜಾರ್ಖಂಡ್‌: ಇಸಿಸ್ ಟೀ-ಶರ್ಟ್ ಧರಿಸಿದ್ದ ಯುವಕರ ಬಂಧನ

ಇಸ್ಲಾಮಿಕ್ ಸ್ಟೇಟ್(ಇಸಿಸ್) ಟೀ-ಶರ್ಟ್ ಧರಿಸಿದ್ದ ಯುವಕರ ಬಂಧನ
ಇಸ್ಲಾಮಿಕ್ ಸ್ಟೇಟ್(ಇಸಿಸ್) ಟೀ-ಶರ್ಟ್ ಧರಿಸಿದ್ದ ಯುವಕರ ಬಂಧನ

ಧನ್‌ಬಾದ್: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಗುಂಪೊಂದು ಇಸ್ಲಾಮಿಕ್ ಸ್ಟೇಟ್(ಇಸಿಸ್) ಭಯೋತ್ಪಾದನೆ ಸಂಘಟನೆಯ ಧ್ವಜವನ್ನು ಹಾರಿಸಿದ್ದ ಪ್ರಕರಣ ಮಾಸುವ ಮುನ್ನವೇ ಧನ್‌ಬಾದ್‌ನಲ್ಲಿ ಯುವಕರ ಗುಂಪೊಂದು ಇಸಿಸ್ ಟೀ-ಶರ್ಟ್ ಧರಿಸಿರುವುದು ಆತಂಕಕ್ಕೀಡು ಮಾಡಿದೆ.

ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಯುವಕರ ಗುಂಪು ಇಸಿಸ್ ಹೆಸರಿನ ಮುದ್ರಿತ ಟೀ-ಶರ್ಟ್‌ನ್ನು ಧರಿಸಿ ರಾಜಾರೋಷವಾಗಿ ಓಡಾಡುತ್ತಿದ್ದರು. ಉಗ್ರ ಸಂಘಟನೆಯ ಟೀ-ಶರ್ಟ್ ಧರಿಸಿದ್ದ ಯುವಕರು ಸೇರಿದಂತೆ ಟೀ-ಶರ್ಟ್‌ನ್ನು ಪ್ರೀಂಟ್ ಮಾಡಿದ್ದ ಇಬ್ಬರು ಯುವಕರನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.

ಯುವಕರು ಧರಿಸಿದ್ದ ಟೀ-ಶರ್ಟ್ ಮೇಲೆ ಇಸಿಸ್ ಹಾಗೂ ಪಾಕಿಸ್ತಾನ ಎಂದು ಬರೆಯಾಗಿದ್ದು, ಪಾಕಿಸ್ತಾನದ ಧ್ವಜದ ಚಿಹ್ನೆಯನ್ನು ಮುದ್ರಿಸಲಾಗಿದೆ.

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಲ್ಲಿ ಉಗ್ರ ಸಂಘಟನೆಯ ಧ್ವಜಾ ಹಾರಿಸಿದ್ದರಿಂದ ಶ್ರೀನಗರದಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com