ನಕಲಿ 'ವರ'ರಿಗೆ ಇನ್ನು ಗೇಟ್ ಪಾಸ್?

ವಿವಾಹವಾಗಿದ್ದರೂ ಸಿಂಗಲ್ ಎಂದು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿವಾಹವಾಗಿದ್ದರೂ ಸಿಂಗಲ್ ಎಂದು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದೀರಾ? ಸುಳ್ಳು ಪ್ರೋಪೈಲ್ ಹಾಕಿ ಹೆಣ್ಣುಮಕ್ಕಳನ್ನು ವಂಚಿಸಿದ್ದೀರಾ? ಹಾಗಿದ್ದರೆ ಎಚ್ಚರ. ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ!

ಇನ್ನು ವೆಬ್‌ಸೈಟ್‌ಗಳು ಸುಳ್ಳು ಹೇಳಿ ವಂಚಿಸುವವರನ್ನು ಒದ್ದೋಡಿಸುವ ಕಾರ್ಯ ಮಾಡಲಿದೆ. ಆನ್‌ಲೈನ್‌ನಲ್ಲಿ ವರನನ್ನು ಹುಡುಕುವ ವೇಳೆ ಆಗುತ್ತಿರುವ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿದ್ದಾರೆ.

ಭಾರತ್ ಮ್ಯಾಟ್ರಿಮನಿ, ಜೀವನ್‌ಸಾಥಿ.ಕಾಂನಂತಹ ವೆಬ್‌ಸೈಟ್‌ಗಳ ಪ್ರತಿನಿಧಿಗಳೊಂದಿಗೆ ಮನೇಕಾ ಸಭೆ ನಡೆಸಿದ್ದಾರೆ. ವೆಬ್‌ಸೈಟ್‌ಗಳಲ್ಲಿ ಭದ್ರತಾ ಅಂಶಗಳನ್ನು ಸೇರಿಸುವಂತೆ ಹಾಗೂ ನೋಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಕಡ್ಡಾಯ ಎಂಬ ನಿಯಮ ಜಾರಿ ಗೊಳಿಸುವಂತೆ ಅವರು ಸಲಹೆ ನೀಡಿದ್ದಾರೆ.

ವಾರದ ಗಡುವು
ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ವ್ಯಕ್ತಿಯ ಗುರುತನ್ನು ಸುಲಭವಾಗಿ ಪತ್ತೆಹಚ್ಚಬಹುದು. ಹೀಗಾಗಿ ನಾನು ಈ ಸಲಹೆ ನೀಡಿದ್ದೇನೆ ಎಂದಿದ್ದಾರೆ ಮನೇಕಾ, ಈಗಿರುವ ನಿಯಮದಂತೆ, ವಿವಾಹ ವೆಬ್‌ಸೈಟ್‌ಗಳಿಗೆ ನೋಂದಣಿ ಮಾಡಿಕೊಳ್ಳಲು ಕೇವಲ ಮೊಬೈಲ್ ಸಂಖ್ಯೆ ಇದ್ದರೆ ಸಾಕು. ಮೊಬೈಲ್ ಸಂಖ್ಯೆಯನ್ನು ವೆಬ್‌ಪೋರ್ಟಲ್‌ನವರೇ ಪರಿಶೀಲನೆ ನಡೆಸುತ್ತಾರೆ. ಆದರೆ ಇದರಿಂದ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆಯೇ ಎಂಬುದು ಗೊತ್ತಾಗುವುದಿಲ್ಲ. ಹಾಗಾಗಿ ಪ್ರೊಪೈಲ್ ಹಾಕುವ ವ್ಯಕ್ತಿಗಳ ಆನ್‌ಲೈನ್ ಚಟುವಟಿಕೆಗಳನ್ನು ತಿಳಿದುಕೊಳ್ಳಲು ಪರಿಣಾಮಕಾರಿ ತಂತ್ರ ರೂಪಿಸುವಂತೆ ವೆಬ್‌ಸೈಟ್‌ಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ವೆಬ್‌ಸೈಟ್‌ಗಳಿಗೆ ಒಂದು ವಾರದ ಗಡುವು ನೀಡಲಾಗಿದೆ ಎಂದೂ ಮನೇಕಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com