

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಭಾರೀ ಪ್ರಮಾಣದಲ್ಲಿ ರಕ್ತಪಾತಕ್ಕೆ ಪಾಕಿಸ್ತಾನ ಸದ್ದಿಲ್ಲದೇ ಯೋಜನೆ ರೂಪಿಸುತ್ತಿದ್ದು, ಚೀನಾ ಇದಕ್ಕೆ ಸಹಕಾರ ನೀಡುತ್ತಿದೆ.
ಭಾರತದ ಗಡಿ ಭಾಗದಲ್ಲಿ ಚೀನಾದ ಸೇನಾ ಪಡೆ ಪಾಕಿಸ್ತಾನದ ಸೈನಿಕರಿಗೆ ತರಬೇತಿ ನೀಡುತ್ತಿದೆ ಎಂದು ಬಿಎಸ್‌ಎಫ್ ಗುಪ್ತಚರ ವಿಭಾಗ ಮಾಹಿತಿ ನೀಡಿದೆ.
ಕಣಿವೆಯಲ್ಲಿ ನಿಯೋಜಿಸಲ್ಪಟ್ಟಿರುವ ಯೋಧರು ಶಸ್ತ್ರಾಸ್ತ್ರಗಳನ್ನು ಯಾವ ರೀತಿ ಬಳಸಬೇಕು ಎನ್ನುವ ಕುರಿತು ಚೀನಾ ಸೈನಿಕರು ಗಡಿವರೆಗೆ ಬಂದು ಪಾಕ್ ಸೇನೆಗೆ ತರಬೇತಿ ನೀಡುತ್ತಿದ್ದಾರೆ.
ಪ್ರಮುಖ ನೆಲೆಗಳಲ್ಲಿ ಮರೆಯಲ್ಲಿ ನಿಂತು ಗುಂಡು ಹಾರಿಸುವವರು ಮತ್ತು ಶಾರ್ಪ್ ಶೂಟರ್‌ಗಳನ್ನು ನಿಯೋಜಿಸುವ ತಂತ್ರಗಾರಿಕೆ ಕೂಡ ಪಾಕ್ ಸೇನೆ ಮತ್ತು ರೇಂಜರ್‌ಗಳ ನಡುವಿನ ದೂರವಾಣಿ ಕದ್ದಾಲಿಕೆಯಿಂದ ಬಹಿರಂಗವಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಭಾರೀ ಪ್ರಮಾಣದಲ್ಲಿ ರಕ್ತಪಾತಕ್ಕೆ ಪಾಕ್ ಸದ್ದಿಲ್ಲದೇ ಯೋಜನೆ ರೂಪಿಸುತ್ತಿದ್ದು, ಚೀನಾ ಇದಕ್ಕೆ ಸಹಕಾರ ನೀಡುತ್ತಿದೆ. ಪಾಕ್ ಸೇನೆ ಬೃಹತ್ ಕಾರ್ಯತಂತ್ರಕ್ಕೆ ಚೀನಾ ಸಾಥ್ ನೀಡಿದ್ದು, ಭಾರತೀಯ ಯೋಧರನ್ನು ಹತ್ತಿಕ್ಕುವ ಹುನ್ನಾರ ನಡೆಸಲಾಗುತ್ತಿದೆ.