
ನವದೆಹಲಿ: ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಘೋಷಿಸಿರುವ ಅಲ್‌ಖೈದಾ ಕಂಪ್ಯೂಟರ್ ಹಾಗೂ ಏರೋನಾಟಿಕ್ಸ್‌ನಲ್ಲಿ ತರಬೇತಿ ಪಡೆದಿರುವ ಭಾರತೀಯ ಯುವಕರನ್ನು ತನ್ನ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ನಿಷೇಧಿತ ಸಿಮಿಯ ನೆರವು ಪಡೆಯಲು ಸಂಚು ರೂಪಿಸಿದೆ.
ಹೀಗೆಂದು ಬೆಂಗಳೂರು, ದೆಹಲಿ, ಕೋಲ್ಕತಾ, ಮುಂಬೈ ಸೇರಿದಂತೆ ಪ್ರಮುಖ ನಗರಗಳ ಪೊಲೀಸರಿಗೆ ಕೇಂದ್ರ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಅಲ್‌ಖೈದಾವು ಕೇವಲ ಆಕ್ರಮಣಕಾರಿ ಯುವಕರ ಮೇಲೆ ಮಾತ್ರವಲ್ಲದೆ, ಕಂಪ್ಯೂಟರ್ ಮತ್ತು ವಿಮಾನಗಳ ಬಗ್ಗೆ ತಿಳುವಳಿಕೆ ಇರುವವರ ಮೇಲೂ ಕಣ್ಣಿಟ್ಟಿದೆ. ಇದಕ್ಕಾಗಿ ಇಂಡಿಯನ್ ಮುಜಾಹಿದೀನ್‌ನ ಸಹಸ್ಥಾಪಕರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ್‌ರನ್ನು ಸಂಪರ್ಕಿಸಿರುವ ಅಲ್‌ಖೈದಾ, ಸಿಮಿ ಸ್ಲೀಪರ್ ಸೆಲ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಏಕೆಂದರೆ, ಐಎಂ ಈ ಹಿಂದೆ ಸಿವಿಯೊಂದಿಗೆ ಕೈಜೋಡಿಸಿ ಉಗ್ರ ಕೃತ್ಯಗಳನ್ನು ನಡೆಸಿತ್ತು.
ಈ ವಿಚಾರವು ಇಂಡಿಯನ್ ಮುಜಾಹಿದೀನ್ ಮತ್ತು ಅಲ್‌ಖೈದಾ ನಡುವೆ ನಂಟು ಬೆಳೆಯುತ್ತಿದೆಯೇ ಎಂಬ ಅನುಮಾನವನ್ನು ನಿಜವಾಗಿಸಿದೆ.
Advertisement