ಸಿಡ್ನಿಯಲ್ಲಿ ಭಾರತೀಯರ ಬಗ್ಗೆ ಬ್ರೆಟ್‌ಲೀ ಹೇಳಿದ್ದೇನು?

ಆಸ್ಟೇಲಿಯಾದ ಕ್ರಿಕೆಟಿಗ ಬ್ರೆಟ್‌ಲೀ ಸಿಡ್ನಿಯಲ್ಲಿ ಭಾರತದ ಬಗೆಗಿನ ತಮ್ಮ ಮನದಾಳದ ಪ್ರೀತಿಯನ್ನು ಹೊರಹಾಕಿದ್ದು, ಭಾರತ ನನ್ನ ನೆಚ್ಚಿನ ದೇಶ ಎಂದು ಹೇಳಿದ್ದಾರೆ.
ಸಿಡ್ನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಭಾರತೀಯರನ್ನು ಉದ್ದೇಶಿಸಿ ಕ್ರಿಕೆಟಿಗ ಬ್ರೆಟ್ ಲೀ ಮಾತನಾಡಿದರು.
ಸಿಡ್ನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ಭಾರತೀಯರನ್ನು ಉದ್ದೇಶಿಸಿ ಕ್ರಿಕೆಟಿಗ ಬ್ರೆಟ್ ಲೀ ಮಾತನಾಡಿದರು.
Updated on

ಸಿಡ್ನಿ: ಆಸ್ಟೇಲಿಯಾದ ಕ್ರಿಕೆಟಿಗ ಬ್ರೆಟ್‌ಲೀ ಸಿಡ್ನಿಯಲ್ಲಿ ಭಾರತದ ಬಗೆಗಿನ ತಮ್ಮ ಮನದಾಳದ ಪ್ರೀತಿಯನ್ನು ಹೊರಹಾಕಿದ್ದು, ಭಾರತ ನನ್ನ ನೆಚ್ಚಿನ ದೇಶ ಎಂದು ಹೇಳಿದ್ದಾರೆ.

ಸಿಡ್ನಿಯಲ್ಲಿರುವ ಅಲ್ಫೋನ್ಸ್ ಅರೆನಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಬ್ರೆಟ್ ಲೀ, ಭಾರತ ಮತ್ತು ಭಾರತೀಯರೊಂದಿಗೆ ತಮಗಿರುವ ಬಂಧವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ತಮ್ಮ ಪ್ರಭಾವಿ ಬೌಲಿಂಗ್ ಮೂಲಕ ಭಾರತೀಯ ಕ್ರಿಕೆಟಿಗರ ಮೇಲೆ ಎರಗುತ್ತಿದ್ದ ಬ್ರೆಟ್ ಲೀ, ಕಾರ್ಯಕ್ರಮದಲ್ಲಿ ಹೇಳಿದ್ದೇನು..?

'ಮೊದಲಿಗೆ ನನ್ನ ಆಸ್ಟ್ರೇಲಿಯಾಗೆ ಆಗಮಿಸಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರಿಗೆ ಸ್ವಾಗತ. 1994ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಆಡಲು ಭಾರತಕ್ಕೆ ಆಗಮಿಸಿದ್ದೆನು. ಅಂದಿನಿಂದ ಸುಮಾರು 20 ವರ್ಷಗಳ ಅವಧಿಯಲ್ಲಿ ನಾನು 18 ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ನಾನು ಹಲವು ದೇಶಗಳನ್ನು ಸುತ್ತಿ ಕ್ರಿಕೆಟ್ ಆಡಿದ್ದೇನೆ. ಆದರೆ ಭಾರತದಲ್ಲಿ ಸಾಕಷ್ಟು ಸುಂದರ ಅನುಭವವಗಳನ್ನು ಪಡೆದಿದ್ದೇನೆ. ಭಾರತ ಸುಂದರವಾದ ದೇಶವಾಗಿದ್ದು, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ದೇಶವಾಗಿದೆ. ಅಲ್ಲಿ ಜನ ಕೂಡ ತುಂಬಾ ಒಳ್ಳೆಯವರಾಗಿದ್ದು, ಭಾರತೀಯರು ಸ್ನೇಹಜೀವಿಗಳು ಎಂದು ಲೀ ಹೇಳಿದ್ದಾರೆ.

ಸಿನಿಮಾ ಪಯಣದತ್ತ ಲೀ
ಇನ್ನು ಕ್ರಿಕೆಟಿಗ ಬ್ರೆಟ್ ಲೀ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಸಿಡ್ನಿ ಕಾರ್ಯಕ್ರಮದಲ್ಲಿ ತಮ್ಮ ನೂತನ ಚಿತ್ರದ ಕುರಿತು ಮಾತನಾಡಿದ ಅವರು, ಸಿನಿಮಾ ಚಿತ್ರೀಕರಣಕ್ಕೂ ಕ್ರಿಕೆಟ್‌ಗೂ ಅಜಗಜಾಂತರ ವ್ಯತ್ಯಸವಿದೆ ಎಂದು ಹೇಳಿದರು. 'ಚಿತ್ರೀಕರಣದ ಅನುಭವವೇ ಒಂದು ರೀತಿಯಲ್ಲಿ ವಿಶೇಷವಾಗಿದ್ದು, ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದಕ್ಕೂ ಚಿತ್ರದಲ್ಲಿ ನಟಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಇನ್ನು ಕೇವಲ 16ರಿಂದ 17 ದಿನಗಳ ಚಿತ್ರೀಕರಣ ಬಾಕಿ ಇದ್ದು, 2015ರ ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಬ್ರೆಟ್‌ಲೀ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com