ಮೇಕೆದಾಟು ಬಳಿ 3 ಸಣ್ಣ ಅಣೆಕಟ್ಟೆ ನಿರ್ಮಾಣಕ್ಕೆ ತಮಿಳುನಾಡು ವಿರೋಧ

ಅಣೆಕಟ್ಟೆ ನಿರ್ಮಿಸದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಮಧ್ಯಂತರ ಅರ್ಜಿ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕಾವೇರಿ ನೀರು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಮೇಕೆದಾಟು ಬಳಿ 3 ಸಣ್ಣ ಅಣೆಕಟ್ಟೆ ನಿರ್ಮಿಸಲು ಮುಂದಾಗಿರುವ ಕರ್ನಾಟಕ ಸರ್ಕಾರದ ವಿರುದ್ದ ತಮಿಳುನಾಡು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಮೇಕೆದಾಟು ಬಳಿ ಹೊಸದಾಗಿ ಅಣೆಕಟ್ಟೆ ನಿರ್ಮಿಸದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಮಧ್ಯಂತರ ಅರ್ಜಿ ಸಲ್ಲಿಸಿದೆ.

ಅಣೆಕಟ್ಟುಗಳ ನಿರ್ಮಾಣದಿಂದ ಸರಾಗವಾಗಿ ನೀರು ಹರಿಯುವುದಿಲ್ಲ ಮತ್ತು ಕಾವೇರಿ ನ್ಯಾಯಾಧೀಕರಣ ತೀರ್ಪಿನಲ್ಲಿ ನೀಡಿರುವಷ್ಟು ನೀರು ತನಗೆ ದಕ್ಕುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಅಣೆಕಟ್ಟು ನಿರ್ಮಿಸುವ ಮುನ್ನ ಕಾರ್ನಟಕದ ನದಿ ಪಾತ್ರದ ಮೂರು ರಾಜ್ಯಗಳ ಅನುಮತಿ ಪಡೆಯಬೇಕು ಎಂದು ತಿಳಿಸಿದೆ.

ಪೋಲಾಗುವ ಮತ್ತು ಹೆಚ್ಚುರಿಯಾಗಿ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗಿದೆ. ಇಲ್ಲಿ ಅಣೆಕಟ್ಟು ನಿರ್ಮಿಸಿದರೆ 30-40 ಟಿಎಂಸಿ ನೀರನ್ನು ಸಂಗ್ರಹಿಸಿ ಸದ್ಭಳಕೆ ಮಾಡಿಕೊಳ್ಳುವ ಉದ್ದೇಶ ಕರ್ನಾಟಕ ಸರ್ಕಾರದ್ದು. ಆದರೆ, ಯೋಜನೆ ಇನ್ನೂ ಯೋಜನಾ ವರದಿ ಸಿದ್ಧಪಡಿಸುವ ಪ್ರಾಥಮಿಕ ಹಂತದಲ್ಲಿದೆ.

ಅಣೆಕಟ್ಟು ನಿರ್ಮಿಸಿ 30-40 ಟಿಎಂಸಿ ನೀರು ಸಂಗ್ರಹಿಸಿದರೆ, ಸಂಕಷ್ಟ ಕಾಲದಲ್ಲೂ ತಮಿಳುನಾಡಿಗೆ ತನ್ನ ಪಾಲಿನ ನೀರು ಹರಿಸಲು ಸಾಧ್ಯ ಎಂಬುದನ್ನು ಕರ್ನಾಟಕ ಸರ್ಕಾರ ಸ್ಪಷ್ಪ ಪಡಿಸಿದ್ದರೂ ತಮಿಳುನಾಡು ಕ್ಯಾತೆ ತೆಗೆದಿದೆ.

ಕರ್ನಾಟಕ ಗಡಿಯೊಳಗೆ ಅಣೆಕಟ್ಟೆ ನಿರ್ಮಿಸಲು ನದಿಪಾತ್ರದ ಇತರ ರಾಜ್ಯಗಳ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂಬುದು ಕರ್ನಾಟಕದ ವಾದ. ತಮಿಳುನಾಡಿಗೆ ನ್ಯಾಯಾಧೀಕರಣದ ತೀರ್ಪಿನಂತೆ 192 ಟಿಎಂಸಿ ನೀರು ಹರಿಸಿದ ನಂತರ, ಉಳಿದು ವ್ಯರ್ಥವಾಗಿ ಪೋಲಾಗುವ ಮತ್ತು ಹೆಚ್ಚುವರಿಯಾಗಿ ಹರಿದುಹೋಗುವ ನೀರಿನ ಸದ್ಭಳಕೆ ಮಾಡಿಕೊಳ್ಳುವ ಹಕ್ಕು ತನಗಿದೆ ಎಂದು ಕರ್ನಾಟಕ ಹಿಂದಿನಿದಲೂ ಪ್ರತಿಪಾದಿಸುತ್ತ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com