ದೆಹಲಿಯಲ್ಲಿ 'ಮರ್ಯಾದಾ ಹತ್ಯೆ': ಮಗಳನ್ನೇ ಕೊಂದ ಪೋಷಕರು

ಭಾವನಾ ಯಾದವ್ ಅಭಿಷೇಕ್  ಮದುವೆ ಚಿತ್ರ
ಭಾವನಾ ಯಾದವ್ ಅಭಿಷೇಕ್ ಮದುವೆ ಚಿತ್ರ
Updated on: 

ನವದೆಹಲಿ: ಅನ್ಯ ಜಾತಿಯ ಯುವಕನನ್ನು ಮದುವೆಯಾದ ಕಾರಣಕ್ಕಾಗಿ ಪೋಷಕರು ಮಗಳನ್ನೇ ಮರ್ಯಾದಾ ಹತ್ಯೆ ನಡೆಸಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿ ವಿವಿಯ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ 21 ವರ್ಷದ ಭಾವನಾ ಯಾದವ್, ಅನ್ಯ ಜಾತಿಯವನಾದ ಅಭಿಷೇಕ್ ಎಂಬ ಯುವಕನನ್ನು ನವೆಂಬರ್ 12ರಂದು ವಿವಾಹವಾಗಿದ್ದಳು. ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಯುವಕನು ಕೆಳ ಜಾತಿಗೆ ಸೇರಿದ್ದರಿಂದ ಪೋಷಕರು ಮದುವೆಯಾಗಬಾರದೆಂದು ಎಚ್ಚರಿಕೆ ನೀಡಿದ್ದರು.

ಷೋಷಕರ ವಿರೋಧದ ನಡುವೆಯೂ ಅಭಿಷೇಕ್ ಹಾಗೂ ಭಾವನಾ ಯಾದವ್ ನವದೆಹಲಿಯಲ್ಲಿ ಆರ್ಯ ಸಮಾಜದ ಸಂಪ್ರದಾಯದಂತೆ ಮದುವೆಯಾಗಿದ್ದರು. ತಮ್ಮ ಮಗಳೇ ಕುಟುಂಬದ ಮಾರ್ಯಾದೆ ಹಾಳು ಮಾಡಿದಳೆಂಬ ಏಕೈಕ ಕಾರಣಕ್ಕಾಗಿ ಭಾವನಾ ಯಾವ್ ಷೋಷಕರಾದ ಜಗಮೋಹನ್ ಹಾಗೂ ಸಾವಿತ್ರಿ ಮತ್ತಿತ್ತರರು ಸೇರಿಕೊಂಡು ಮನೆಯಲ್ಲಿ ಹತ್ಯೆ ಮಾಡಿದ್ದರು.

ಜಗಮೋಹನ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ದೆಹಲಿ ಸ್ಥಳೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ತಮ್ಮ ಮಗಳು ಅನಾರೋಗ್ಯದಿಂದ ಮೃತಪಟ್ಟಿದ್ದಳೆಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ದೆಹಲಿಯಲ್ಲಿ ಭಾವನಾ ಯಾದವ್‌ಳ ಅಂತ್ಯ ಕ್ರಿಯೆಯನ್ನು ಗೌಪ್ಯವಾಗಿ ಮಾಡಲಾಗಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯರು ಯಾರಿಗೂ ತಿಳಿಯದಂತೆ ಪೊಲೀಸ ರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಜಗ್‌ಮೋಹನ್ ಮತ್ತು ಸಾವಿತ್ರಿ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ನಮ್ಮ ಕುಟುಂಬದ ಮರ್ಯಾದೆ ಹಾಳಾಗುತ್ತದೆ. ಯಾವುದೇ ಕಾರಣಕ್ಕೂ ತಮ್ಮ ಪುತ್ರಿಯನ್ನು ಮದುವೆಯಾಗಬಾರದೆಂದು ಅಭಿಷೇಕ್‌ಗೆ ಬೆದರಿಕೆ ಹಾಕಿದ್ದರು. ಅಭಿಷೇಕ್ ಮೂಲತಃ ಪಂಜಾಬಿಯಾಗಿದ್ದು ಭಾವನಾ ಯಾದವ್ ರಾಜಸ್ಥಾನದವರು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com