
ನವದೆಹಲಿ: ಭಾರತದಲ್ಲಿ ಉಗ್ರವಾದ ಚಟುವಟಿಕೆಗಳು ಹೆಚ್ಚಳವಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಇನ್ಸ್‌ಟಿಟ್ಯೂಟ್ ಆಫ್ ಎಕನಾಮಿಕ್ಸ್ ಎಂಡ್ ಪೀಸ್ ನೀಡಿದ್ದ ಗ್ಲೋಬಲ್ ಟೆರರಿಸಮ್ ಇಂಡೆಕ್ಸ್ ನಡೆಸಿದ ಸಮೀಕ್ಷೆ ಪ್ರಕಾರ 2012-2013 ಅವಧಿಯಲ್ಲಿ ಭಯೋತ್ಪಾದನಾ ಚಟುವಟಿಕೆ ಶೇ. 70ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಉಗ್ರರು, ನಕ್ಲಲರ ದಾಳಿಗೆ 238 ರಿಂದ 404 ಜನ ಮೃತರಾಗಿದ್ದಾರೆ.
ವರದಿಯಲ್ಲಿ ಭಾರತದಲ್ಲಿ 43 ಉಗ್ರವಾದಿ ಗುಂಪುಗಳಿದ್ದು ಮೂರು ವಿಧವಾಗಿ ವಿಂಗಡಿಸಲಾಗಿದ್ದು, ಇಸ್ಲಾಮಿಕ್ ಉಗ್ರವಾದ, ಪ್ರತ್ಯೇಕವಾದಿ ಉಗ್ರವಾದ ಮತ್ತು ನಕ್ಲಲರ ಚಟುವಟಿಕೆಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement