
ನವದೆಹಲಿ: ಶೋಕಿಗಾಗಿ ತಮ್ಮನ್ನು ತಾವು ಅಂತರ್ಜಾಲದಲ್ಲಿ ಮಾರಾಟ ಮಾಡಲು ಮುಂದಾಗುವ ನಟಿಯರು, ಮಾಡೆಲ್‌ಗಳು ಒಂದು ಕಡೆಯಾದರೆ, ಚಾಂದನಿ ರಾಜ್‌ಗೌರ್ ಮತ್ತೊಂದು ಕಡೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಯಸ್ಸಾದ ಪೋಷಕರು ಮತ್ತು ಕಡು ಬಡತನದಿಂದ ಕಂಗಾಲಾದ ಚಾಂದನಿ ಫೇಸ್‌ಬುಕ್‌ನಲ್ಲಿ ತನ್ನನ್ನೇ ತಾನು ಮಾರಿಕೊಳ್ಳಲು ಹೊರಟಿದ್ದಾಳೆ.
ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ವಡೋದರಾದ ಈಕೆಯ ತಾಯಿ ಬಹಳ ವರ್ಷಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ತಂದೆ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದು, ಹಾಸಿಗೆ ಹಿಡಿದಿದ್ದಾರೆ.
ಚಿಕಿತ್ಸೆ ಮತ್ತು ಔಷಧಿಯ ವೆಚ್ಚವನ್ನು ಭರಿಸಲು ಒದ್ದಾಡುತ್ತಿರುವ ಚಾಂದನಿಗೆ ಈ ತನಕ ನೆರವಿನ ಹೆಸರಿನಲ್ಲಿ ಅನೇಕರು ಮೋಸ ಮಾಡಿದ್ದರಂತೆ. ಗುಜರಾತ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಲೀಲಾಬೇನ್ ಅಂಕೋ ಲಿಯಾ, ಚಾಂದನಿ ಪೋಷಕರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲುವುದಾಗಿ ಭರವಸೆ ನೀಡಿದ್ದಾರೆ.
Advertisement