ಬಗೆಹರಿದ ಸ್ಪೈಸ್ ಜೆಟ್ ವಿವಾದ: ಮತ್ತೆ ಹಾರಾಟ

ಕಿಂಗ್‌ಫಿಷರ್ ಹಾದಿಯನ್ನೇ ಹಿಡಿದಿರುವ ಸ್ಪೈಸ್ ಜೆಟ್ ಬಿಕ್ಕಟ್ಟನ್ನು ಸದ್ಯಕ್ಕೆ ಕೊನೆಗೊಳಿಸಿಕೊಂಡಿದೆ...
ಸ್ಪೈಸ್ ಜೆಟ್
ಸ್ಪೈಸ್ ಜೆಟ್

ನವದೆಹಲಿ: ಕಿಂಗ್‌ಫಿಷರ್ ಹಾದಿಯನ್ನೇ ಹಿಡಿದಿರುವ ಸ್ಪೈಸ್ ಜೆಟ್ ಇಂಧನ ಪಾವತಿ ಬಿಕ್ಕಟ್ಟನ್ನು ಸದ್ಯಕ್ಕೆ ಕೊನೆಗೊಳಿಸಿಕೊಂಡಿದೆ. ಇಂಧನ ಪಾವತಿ ಬಿಕ್ಕಟ್ಟನ್ನು ಪುನ: ಪ್ರಾರಂಭಿಸಿದೆ.

ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆಯಿಂದ ಸ್ಪೈಸ್ ಜೆಟ್ ಹಾರಾಟ ನಿಲ್ಲಿಸಿತ್ತು. ಇದು ಪ್ರಯಾಣಿಕರಲ್ಲಿ ತೀವ್ರ ಗೊಂದಲವನ್ನುಂಟು ಮಾಡಿತ್ತು. ಭಾರತ್ ಪೆಟ್ರೋಲಿಯಂಗೆ ಕೊಡಬೇಕಾದ ಇಂಧನ ಬಾಕಿ ಹಣವನ್ನು ನೀಡದೇ ಇದ್ದರಿಂದ ಅದು ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಈ ಎರಡು ಕಂಪನಿಗಳ ಒಪ್ಪಂದದ ಪ್ರಕಾರ ಹಣ ಪಾವತಿಸಿ, ಇಂಧನ ಖರೀದಿಸಬೇಕು. ಆದರೆ, ಈಚೆಗೆ ಸಮರ್ಪಕವಾಗಿ ಹಣ ಪಾವತಿ ಮಾಡದ ಕಾರಣ ಕೋಪಗೊಂಡಿದ್ದ ಇಂಧನ ಕಂಪನಿ, ಪೂರೈಕೆಯನ್ನು ನಿಲ್ಲಿಸಿತ್ತು. ಇದರಿಂದಾಗಿ ಬುಧವಾರ 75 ವಿಮಾನಗಳ ಹಾರಾಟ ರದ್ದಾಗಿತ್ತು. ಬಿಕ್ಕಟ್ಟು ಬಗೆಹರಿದ ಬಳಿಕ ಸಂಜೆ 4 ಗಂಟೆಗೆ ಹಾರಾಟ ಆರಂಭಿಸಿತು.

ವಿಮಾನ ಹಾರಾಟ ವಿಳಂಬದಿಂದಾದ ತೊಂದರೆಗೆ ಸ್ಪೈಸ್ ಜೆಟ್‌ನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ  ಸಂಜೀವ್ ಕಪೂರ್ ಕ್ಷಮೆಯಾಚಿಸಿದ್ದಾರೆ. ಈ ನಡುವೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸಹ ಘಟನೆ ಬಗ್ಗೆ ಸ್ಪಷ್ಟೀಕರಣ ಕೇಳಿದೆ. ರೂ.14 ಕೋಟಿ ಬಾಕಿ ಮೊತ್ತವನ್ನು ಭಾರತ್ ಪೆಟ್ರೋಲಿಯಂಗೆ ಸ್ಪೈಸ್ ಜೆಟ್ ಪಾವತಿ ಮಾಡಬೇಕಿತ್ತು. ಆದರೆ, ಮಂಗಳವಾರವಷ್ಟೇ ನಾಗರಿಕ ವಿಮಾನಯಾನ ಖಾತೆ ಸಚಿವರು ಇಂಧನ ಕಂಪನಿ ಹಾಗೂ ವಿಮಾನ ನಿಲ್ದಾಣ ನಿರ್ವಾಹಕರಲ್ಲಿ ಇನ್ನೂ 15 ದಿನ ಸೌಲಭ್ಯವನ್ನು ಮುಂದುರೆಸಬೇಕು, ಯಾವುದೇ ಕಾರಣಕ್ಕೂ ಸೇವೆ ನಿಲ್ಲಿಸಬಾರದು ಎಂದು ಕೇಳಿಕೊಂಡಿದ್ದರು. ಜತೆಗೆ ಇಂಡಿಯನ್ ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳಿಗೆ ಇನ್ನೂ ರೂ.600 ಕೋಟಿ ಸಾಲವ ವಿಸ್ತರಣೆ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ವಿಮಾನ ಸಂಸ್ಥೆ ಬಜಾವ್ ಆಗಿದೆ. ಪ್ರತಿ ದಿನ ಭಾರತ್ ಪೆಟ್ರೋಲಿಯಂನಿಂದ ರೂ 5.5 ಕೋಟಿ ಮೌಲ್ಯದ ಇಂಧನ ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com