ವಿವಿ ತಿರಸ್ಕಾರ ಪತ್ರಕ್ಕೇ ವಿದ್ಯಾರ್ಥಿನಿ ತಿರಸ್ಕಾರ

ಅರ್ಹರಿಲ್ಲದ ವಿದ್ಯಾರ್ಥಿಗಳ ಪ್ರವೇಶ ಅರ್ಜಿಯನ್ನು ವಿಶ್ವವಿದ್ಯಾಲಯಗಳು ತಿರಸ್ಕರಿಸಿ ಪತ್ರ ಬರೆಯುವುದು ಸಾಮಾನ್ಯ. ಇತ್ತೀಚಿನ ವರ್ಷಗಳಲ್ಲಿ...
ಶಿಯೋಭಾನ್ ಓಡೆಲ್ ಪತ್ರ
ಶಿಯೋಭಾನ್ ಓಡೆಲ್ ಪತ್ರ

ನಾರ್ಥ್ ಕೆರೋಲಿನಾ(ಅಮೆರಿಕ): ಅರ್ಹರಿಲ್ಲದ ವಿದ್ಯಾರ್ಥಿಗಳ ಪ್ರವೇಶ ಅರ್ಜಿಯನ್ನು ವಿಶ್ವವಿದ್ಯಾಲಯಗಳು ತಿರಸ್ಕರಿಸಿ ಪತ್ರ ಬರೆಯುವುದು ಸಾಮಾನ್ಯ. ಇತ್ತೀಚಿನ ವರ್ಷಗಳಲ್ಲಿ
ಆ ಪದ್ಧತಿ ಯೂ ಇಲ್ಲವಾಗಿದೆ. ಅಮೆರಿಕದಲ್ಲಿ ವಿದ್ಯಾರ್ಥಿನಿ ವಿಶ್ವವಿದ್ಯಾಲಯದ ತಿರಸ್ಕೃತ ಪತ್ರವನ್ನೇ ತಿರಸ್ಕರಿಸಿ, ಅದರ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಟಂಬ್ಲರ್‍ನಲ್ಲಿ ಅಪ್‍ಲೋಡ್ ಮಾಡಿದ್ದಾಳೆ. ಇದಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ಬರತೊಡಗಿದ್ದು, ಈಗ ವಿವಿಗೆ ಮುಜುಗರವನ್ನುಂಟು ಮಾಡಿದೆ. ಶಿಯೋಭಾನ್ ಓಡೆಲ್ ಎಂಬ ವಿದ್ಯಾರ್ಥಿನಿ ಡ್ಯೂಕ್ ವಿವಿಗೆ ಅರ್ಜಿ ಸಲ್ಲಿಸಿದ್ದಳು. ಅದಕ್ಕೆ ವಿವಿ ನಿಮ್ಮನ್ನು ಸೇರಿಸಿಕೊಳ್ಳುವಷ್ಟು ಸ್ಥಾನವಿಲ್ಲ ಎಂದು ಮಾರೋಲೆ ಬರೆದಿತ್ತು. ಇದರಿಂದ ರೊಚ್ಚಿಗೆದ್ದ ಶಿಯೋಭಾನ್ `ನಿಮ್ಮ ತಿರಸ್ಕೃತ ಪತ್ರವನ್ನು ನಾನೂ ತಿರಸ್ಕರಿಸಿದ್ದೇನೆ ' ಎಂದು ಪತ್ರ ಬರೆದಿದ್ದಾಳೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com