ಸ್ವಾಯತ್ತೆ ಮೂಲಕ ಸುರಾಜ್ಯ ಸಾಧನೆ

ನಾವು ದಿಲ್ಲಿ ತಿಜೋರಿ ಖಾಲಿ ಮಾಡಿದ್ದೇವೆ. ಅಂದರೆ ಅಲ್ಲಿದ್ದ ಹಣವನ್ನು ರಾಜ್ಯಗಳಿಗೆ ಹಂಚಿದ್ದೇವೆ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡುವ ಮೂಲಕ ಸುರಾಜ್ಯ ಸಾಧಿಸುವ ಉದ್ದೇಶ ನಮ್ಮದು. ನಾವು ಕೊಡುವವರು. ತಿಜೋರಿಯಿಂದ ಹಣ...
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ (ಕೃಪೆ : ಕೆ ಪಿ ಎನ್)
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ (ಕೃಪೆ : ಕೆ ಪಿ ಎನ್)
Updated on: 

ಬೆಂಗಳೂರು: ನಾವು ದಿಲ್ಲಿ ತಿಜೋರಿ ಖಾಲಿ ಮಾಡಿದ್ದೇವೆ. ಅಂದರೆ ಅಲ್ಲಿದ್ದ ಹಣವನ್ನು ರಾಜ್ಯಗಳಿಗೆ ಹಂಚಿದ್ದೇವೆ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡುವ ಮೂಲಕ ಸುರಾಜ್ಯ
ಸಾಧಿಸುವ ಉದ್ದೇಶ ನಮ್ಮದು. ನಾವು ಕೊಡುವವರು. ತಿಜೋರಿಯಿಂದ ಹಣ ತೆಗೆದುಕೊಳ್ಳಬೇಕಾದ ಅಗತ್ಯ ನಮಗಿಲ್ಲ. ಇದು ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹೇಳಿದ ಸ್ಪಷ್ಟ ಮಾತು. ಮೋದಿ ಪ್ರಜಾಪ್ರಭುತ್ವಕ್ಕೆ, ಗಣರಾಜ್ಯ ವ್ಯವಸ್ಥೆಗೆ ಕುತ್ತು ಎಂದು ಆರೋಪಿಸುವವರಿಗೆ ಪ್ರಧಾನಿ ಈ
ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಅಂಗವಾಗಿ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ತಮ್ಮ
ರಾಷ್ಟ್ರಾಭಿವೃದ್ಧಿಯ ವಿಚಾರಧಾರೆ ಹರಿಬಿಡುವುದರ ಜತೆಗೆ ಕಪ್ಪು ಹಣ ವಾಪಸ್ ತರುವುದೂ ಸೇರಿದಂತೆ ತಮ್ಮ ಹತ್ತು ತಿಂಗಳ ಆಡಳಿತದ ಬಗ್ಗೆ ಟೀಕೆ ಮಾಡುತ್ತಿದ್ದವರ ಬಾಯಿಗೆ ಈ ಭಾಷಣದ ಮೂಲಕ ಬೀಗ ಹಾಕಿದ್ದಾರೆ.

`ಸರ್ಕಾರದ ಖಜಾನೆ ಖಾಲಿ ಮಾಡಿದರುಎಂದು ವ್ಯಂಗ್ಯ ಮಾಡಿದ್ದಾರೆ .  ಆದರೆ ನಾನಿಲ್ಲಿ ಘೋಷಣೆ ಮಾಡುತ್ತಿದ್ದೇನೆ. ಇಡೀ ದೇಶದ ತಿಜೋರಿ ಖಾಲಿಮಾಡಿದ್ದು ನಿಜ.
ಆದರೆ ತಿಜೋರಿಯಹಣವನ್ನು ರಾಜ್ಯಗಳಿಗೆ ಹಂಚಿದ್ದೇವೆ. ರಾಜ್ಯಗಳ ಮೇಲೆ ಹೆಚ್ಚಿನ ನಂಬಿಕೆ ಇರಿಸಿದ್ದೇವೆ. ಅವುಗಳಿಗೆ ಹೆಚ್ಚಿನ ಹಣ, ಹೆಚ್ಚಿನ ಜವಾಬ್ದಾರಿ ನೀಡುವುದು ನಮ್ಮ
ಉದ್ದೇಶ. ಸರ್ಕಾರ ಹಣ ಇಟ್ಟು ಕೊಂಡು ಮಾಡುವುದೇನಿದೆ? ಅಭಿವೃದ್ಧಿಗೆ ಎಲ್ಲ ಹಣ ಖರ್ಚು ಮಾಡಲು ಹಿಂಜರಿಯುವುದಿಲ್ಲ' ಎಂದು ಘೋಷಿಸಿದ್ದಾರೆ.

ಅಭಿವೃದ್ಧಿ  ಎಂಬುದು ಬಿಜೆಪಿ ಇರುವ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಹಿಂದೆ ದೆಹಲಿ ಗದ್ದುಗೆಯಲ್ಲಿ ಕುಳಿತವರು ರಾಜ್ಯಗಳು ಇರುವುದೇ ಬೇಡುವುದಕ್ಕೆ
ಎಂಬ ಧೋರಣೆಯವರಾಗಿದ್ದರು. ಆದರೆ ನಮಗೆ ಯಾವ ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎಂಬುದು ಮುಖ್ಯವಲ್ಲ. ಎಲ್ಲ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ
ಮುಂದುವರಿಯಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಅದಮ್ಯ ನಂಬಿಕೆ ಇದೆ. ದೇಶದ ಅಭಿವೃದ್ಧಿಯ ಧೋರಣೆ ಹೇಗಿರಬೇಕೆಂಬ ಪರ್ಯಾಲೋಚನೆಯಲ್ಲಿ
ರಾಜ್ಯಗಳೂ ಭಾಗಿಯಾಗಬೇಕೆಂಬ ಕಾರಣಕ್ಕೆ ನೀತಿ ಆಯೋಗವನ್ನು ಜಾರಿಗೆ ತರಲಾಗಿದ್ದು, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದಕ್ಕೆ ಇದು ನೆರವು
ನೀಡಲಿದೆ.


ರಾಜ್ಯಕ್ಕೆ ಭಾರಿ ಕೊಡುಗೆ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇಲ್ಲ. ಆದರೆ ನಾವು ಇಲ್ಲಿಗೆ ಎಷ್ಟು ಅನುದಾನ ಕೊಟ್ಟಿದ್ದೇವೆ ಎಂದರೆ ನಿಮಗೆ ಅಚ್ಚರಿಯಾಗಬಹುದು.13 ನೇ ಹಣಕಾಸು ಯೋಜನೆ
ಯಲ್ಲಿ 14,600 ಕೋಟಿ ರೂ ಬಿಡುಗಡೆಯಾಗಿತ್ತು. 14 ನೇ ಹಣಕಾಸು ಆಯೋ ಗದಿಂದ 24,800 ಕೋಟಿ ರೂ ಬಿಡುಗಡೆಯಾಗಿದೆ. ಈ ಬಾರಿ 61,700 ಕೋಟಿ ಹಣ
ಬಿಡುಗಡೆ ಮಾಡಿದ್ದೇವೆ. ಮುಂದಿನ ಬಾರಿ 12,83,500 ಕೋಟಿ ಬಿಡುಗಡೆ ಮಾಡಲಿದ್ದೇವೆ. ಇದು ಬಿಜೆಪಿ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ. ಇದೇ ಮಾದರಿ
ಯಲ್ಲಿ ಎಲ್ಲ ರಾಜ್ಯಗಳಿಗೂ ಹಣ ಬಿಡುಗಡೆ ಮಾಡಲಿದ್ದೇವೆ. ಇದಕ್ಕೆ ನಮ್ಮ ಖಜಾನೆ ಖಾಲಿಯಾದರೂಚಿಂತಿಸಲ್ಲ ಎಂದು ಸ್ಪಷ್ಟಪಡಿಸಿದರು.

ದೇಶದ ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ


ಕರ್ನಾಟಕ ಅಭಿವೃದ್ಧಿಗೆ ಎಲ್ಲ ನೆರವು ನೀಡಲಾಗುವುದು.  ಅಧಿಕಾರವಹಿಸಿಕೊಂಡ ನಂತರ ಬೆಂಗಳೂರಿಗೆ ಇದು ನನ್ನಎರಡನೇ ಭೇಟಿ. ಆಗ ನಾನು ಏರ್‍ಶೋ ಉದ್ಘಾಟಿಸಲು
ಬಂದಿದ್ದೆ. ವಿಮಾನ ಹೇಗೆ ಹಾರಾಡುತ್ತೆ, ಹೇಗೆ ಪಲ್ಟಿ ಹೊಡೆಯುತ್ತೆಂಬುದನ್ನು ನೋಡಲು ಬಂದಿರಲಿಲ್ಲ. ದೇಶದ ರಕ್ಷಣಾಕ್ಷೇತ್ರಕ್ಕೆ ಬೇಕಾದ ಉದ್ದಿಮೆದಾರರನ್ನು ಬೆಂಗಳೂರಿಗೆಕರೆತಂದು ಇಲ್ಲಿ ರಕ್ಷಣಾ ಉದ್ದಿಮೆಗಳು ಹೆಚ್ಚು ಬೆಳೆಯುವಂತೆ ಮಾಡುವುದೇ ಆಗಿತ್ತು. ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಪರಿಸ್ಥಿತಿ ಹೇಗಿದೆ ಎಂದರೆ ನಮ್ಮ ಮೇಲೆ ಯಾರಾದರೂ ಬದೂಕಿನಿಂದ ದಾಳಿ ನಡೆಸಿದರೆ ಬಳಸುವ ಗುಂಡು ಪರದೇಶದ್ದಾಗಿರುತ್ತಿತ್ತು. ಈ ಪರಿಸ್ಥಿತಿ ಬದಲಾಗಬೇಕೆಂಬ ಉದ್ದೇಶದಿಂದಲೇ ಮೇಕ್ ಇನ್ ಇಂಡಿಯಾ  ಜಾರಿಗೆ ತರಲಾಗಿದ್ದು, ಭಾರತಕ್ಕೆ ಮಾತ್ರವಲ್ಲ ಇಡಿ ದಕ್ಷಿಣ ಏಷ್ಯಾ ದೇಶಗಳ ರಕ್ಷಣಾ ಆದ್ಯತೆ ಪೂರೈಸುವ ಮಟ್ಟಕ್ಕೆ ಭಾರತ ಬೆಳೆಯಬೇಕು.

ಕೃಷಿ ಯೋಜನೆ
ಮೊದಲ ಯೋಜನೆ: ಕೃಷಿಯಲ್ಲಿ ಆಧು ನಿಕ ತಂತ್ರಜ್ಞಾನ ಅಳವಡಿಕೆ. ಜೊತೆಗೆ ವೃಕ್ಷ ಕೃಷಿ. ಹಿಂದೆ ಹಳ್ಳಿಗಳಲ್ಲಿ ರೈತರು ಹೇಗೆ ತಮ್ಮ ಜಮೀನುಗಳಲ್ಲಿ ಹೇಗೆ ಮರ ಬೆಳೆಸುತ್ತಿದ್ದರೋ, ಅದೇ ರೀತಿ ಈಗಲೂ ವೃಕ್ಷ ಕೃಷಿಗೆ ಆದ್ಯತೆ. 
ಎರಡನೆ ಯೋಜನೆ: ಭೂ ಒಡೆತನ, ಮಣ್ಣಿನ ಗುಣಮಟ್ಟ ರಕ್ಷಣೆ.
ಮೂರನೆಯೋಜನೆ: ಪಶುಸಂಗೋಪನೆಗೆ ಹೆಚ್ಚು ಆದ್ಯತೆ ನೀಡಿ, ಕೃಷಿಯಮೇಲೆ ರೈತರಿಗೆ ಹೆಚ್ಚು ಅವಲಂಬನೆ ಮಾಡಲು ಅವಕಾಶ ನೀಡಿಕೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com