ಬೆದರಿಕೆಗೆ ಬಗ್ಗಿದ ಸ್ವಿಸ್

: ಕಪ್ಪುಹಣಕ್ಕೆ ಸಂಬಂಧಿಸಿ ಭಾರತದ ಕೋರಿಕೆಗೆ ಕ್ಯಾರೇ ಎನ್ನದ ಸ್ವಿಸ್ ಸರ್ಕಾರ ಈಗ `ದಂಡಂ ದಶಗುಣಂ' ಎಂಬಂತೆ `ಕಠಿಣ ಬೆದರಿಕೆ'ಗೆ ಮಣಿದಿದೆ..
ಹಣ
ಹಣ

ನವದೆಹಲಿ: ಕಪ್ಪುಹಣಕ್ಕೆ ಸಂಬಂಧಿಸಿ ಭಾರತದ ಕೋರಿಕೆಗೆ ಕ್ಯಾರೇ ಎನ್ನದ ಸ್ವಿಸ್ ಸರ್ಕಾರ ಈಗ `ದಂಡಂ ದಶಗುಣಂ' ಎಂಬಂತೆ `ಕಠಿಣ ಬೆದರಿಕೆ'ಗೆ ಮಣಿದಿದೆ.
ಶಂಕಿತ ಬ್ಯಾಂಕುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸ್ವಿಸ್
ಸರ್ಕಾರ, ಅಕ್ರಮ ಹಣವನ್ನು ದೂರವಿಡುವ ನಿಟ್ಟಿನಲ್ಲಿಹೆಜ್ಜೆಯಿಟ್ಟಿದೆ. ತನ್ನ ಬ್ಯಾಂಕಿಂಗ್ ವ್ಯವಸ್ಥೆಯಿಂದ ಅಕ್ರಮ ಹಾಗೂ ತೆರಿಗೆತಪ್ಪಿಸಿದ ಹಣವನ್ನು ದೂರವಿಡಲು ಮೇಲ್ವಿಚಾರಣೆ
ಹಾಗೂ ಜಾಗೃತ ಕ್ರಮವನ್ನು ಅನುಸರಿಸುವ ಕಾರ್ಯವನ್ನು ಸ್ವಿಸ್ ಸರ್ಕಾರ ಆರಂಬಿsಸಿದೆ. ಅದರಂತೆ, ಎಲ್ಲ ಖಾತೆದಾರರು ತಮ್ಮದು ತೆರಿಗೆ ತಪ್ಪಿಸಿದ ಹಣವಲ್ಲ ಎಂಬ ಲಿಖಿತ ಪತ್ರ ನೀಡಬೇಕು ಎಂದು ಭಾರತೀಯರಿಗೆ ಸೂಚಿಸಲಾಗಿದೆ. ಜತೆಗೆ, ಆಡಿಟರ್ ಸರ್ಟಿಫಿಕೇಟ್ ಗಳನ್ನು ಒದಗಿಸುವಂತೆಯೂ ತಿಳಿಸಿದೆ. ಭಾರತ ಮಾತ್ರವಲ್ಲದೆ
ಜರ್ಮನಿ, ಬೆಲ್ಜಿಯಂ, ಫ್ರಾ ನ್ಸ್, ಅರ್ಜೆಂಟೀನಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಸ್ವಿಸ್ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇತ್ತೀಚೆಗೆ ಎಚ್ಚರಿಕೆ ನೀಡಿದ್ದವು.

ಶೀಘ್ರವೇ ಸುಪ್ರೀಂಗೆ ಸ್ಥಿತಿಗತಿ ವರದಿ: ಕಪ್ಪುಹಣಕ್ಕೆ ಸಂಬಂಧಿಸಿ ಸದ್ಯದಲ್ಲೇ ವಿಶೇಷ ತನಿಖಾ ತಂಡ(ಎಸ್‍ಐಟಿ) ಸುಪ್ರೀಂ ಕೋರ್ಟ್‍ಗೆ ಹೊಸ ಸ್ಥಿತಿಗತಿ ವರದಿ ಸಲ್ಲಿಸುವ
ನಿರೀಕ್ಷೆಯಿದೆ. ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಅಕ್ರಮ ಹಣಕ್ಕೆ ಸಂಬಂಧಿಸಿ ವಿವಿಧ ತನಿಖಾ ಸಂಸ್ಥೆಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಈ ವರದಿಯಲ್ಲಿ
ವಿವರಿಸಲಾಗುತ್ತದೆ. ಕೆಲ ದಿನಗಳ ಹಿಂದೆಯೇ  ಎಸ್‍ಐಟಿ ಕಪ್ಪುಹಣ ಪ್ರಕರಣಗಳ ತನಿಖೆಯಿಂದ ಸಿಕ್ಕಿದ ಅಂಕಿಅಂಶಗಳನ್ನು ಸಂಗ್ರಹಿಸುವ ಕಾರ್ಯ ಶುರುಮಾಡಿತ್ತು.
ಜತೆಗೆ 628 ಎಚ್‍ಎಸ್‍ಬಿಸಿ ಬ್ಯಾಂಕು ಪ್ರಕರಣಗಳಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಕೈಗೊಂಡ ಕ್ರಮಗಳನ್ನೂ ಪಟ್ಟಿ ಮಾಡಿತ್ತು. ಇವೆಲ್ಲವನ್ನೂ ಒಳಗೊಂಡ
ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಎಸ್‍ಐಟಿ ಸಿದ್ಧತೆ ನಡೆಸಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಷಾ ಅವರ
ನೇತೃತ್ವದ ಸಮಿತಿಯು ಎಲ್ಲ ತನಿಖಾ ಸಂಸ್ಥೆಗಳನ್ನು ಸೇರಿಸಿ 2 ಬಾರಿ ಪೂರ್ಣಪ್ರಮಾಣದ ಸಭೆಯನ್ನು ನಡೆಸಿದ್ದರು.
 
ತೆರಿಗೆ ಪಂಗನಾಮ: 100 ವಿದೇಶಿ ಸಂಸ್ಥೆಗಳಿಗೆ ನೋಟಿಸ್

ಕಳೆದ ಕೆಲವು ವರ್ಷಗಳಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಿ ತೆರಿಗೆ ಪಾವತಿಸದ ಸುಮಾರು 100 ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇವರು ಬಾಕಿ ಉಳಿಸಿರುವ ತೆರಿಗೆ ಎಷ್ಟು ಗೊತ್ತೇ?
ಬರೋಬ್ಬರಿ ರು. 300ರಿಂದ ರು. 400 ಶತಕೋಟಿ. ಈ ರೀತಿ ತೆರಿಗೆ ಪಾವತಿಸದ ಹೂಡಿಕೆದಾರರ ಬಗ್ಗೆ ತೆರಿಗೆ ಇಲಾಖೆಯು ಮಾಹಿತಿ ಸಂಗ್ರಹಿಸುತ್ತಿದ್ದು, ಇವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ನೋಟಿಸ್ ಜಾರಿಯಾದ ಬೆನ್ನಲ್ಲೇ ಕಳವಳಕ್ಕೀಡಾಗಿರುವ ವಿದೇಶಿ ಹೂಡಿಕೆದಾರರು ಸಚಿವರು, ನಿಯಂತ್ರಕರೊಂದಿಗೆ ಲಾಬಿ ಮಾಡಲು ಆರಂಭಿಸಿದ್ದಾರೆ. ಜತೆಗೆ, ಈ ಕ್ರಮವು ಪ್ರತಿಕೂಲವಲ್ಲದ ಮತ್ತು ಸ್ಥಿರ ತೆರಿಗೆ ನೀತಿಯನ್ನು ಅನುಸರಿಸುತ್ತೇವೆ ಎಂಬ ಸರ್ಕಾರದ ನಿಲುವಿಗೆ ವಿರುದಟಛಿವಾದದ್ದು ಎಂದೂ ಆರೋಪಿಸತೊಡಗಿದ್ದಾರೆ. ಅಲ್ಲದೆ, ಕನಿಷ್ಠ ಪರ್ಯಾಯ ತೆರಿಗೆ(ಎಂಎಟಿ)ಯು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಅನ್ವಯವಾಗುವುದಿಲ್ಲ ಎಂದೂ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜೇಟ್ಲಿ, ಜಯಂತ್ ಸಿನ್ಹಾ, ಸೆಬಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಜತೆ ಮಾತುಕತೆ ನಡೆಸಿರುವ ಹೂಡಿಕೆದಾರರು ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com