
ಹೈದರಾಬಾದ್: ಮಂಗಳವಾರ ಬೆಳಗ್ಗೆ ಎನ್‍ಕೌಂಟರ್ ನಲ್ಲಿ ಹತರಾಗಿದ್ದ 5 ಮಂದಿ ಶಂಕಿತ ಸಿಮಿ ಉಗ್ರರು ಸಾವಿಗೂ ಮುನ್ನ ಪೊಲೀಸರನ್ನು ಹಿಗ್ಗಾಮುಗ್ಗಾ ನಿಂಧಿಸಿದ್ದರು ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ವರಂಗಲ್' ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದ ಎನ್‍ಕೌಂಟರ್ ನಲ್ಲಿ ಬಲಿಯಾದ ಐದು ಮಂದಿ ಶಂಕಿತ ಉಗ್ರರು ಪೊಲೀಸರ ಕೈಯಿಂದ ಹತರಾಗುವ ಮುನ್ನ ತೀರಾ ದುರ್ವರ್ತನೆ ತೋರಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೈಲಿನಿಂದ ಕೋರ್ಟ್'ಗೆ ಹೋಗಲು ಪೊಲೀಸ್ ವಾಹನ ಹತ್ತುತ್ತಿರುವಂತೆಯೇ ಉಗ್ರರು ಪೊಲೀಸರ ವಿರುದ್ಧ ಹರಿಹಾಯ್ದಿದ್ದರು. ಮಾರ್ಗಮಧ್ಯೆ ತೀರ ಕೆಟ್ಟದಾಗಿ ವರ್ತಿಸಲು ಆರಂಭಿಸಿದ್ದರು.
ಉಗ್ರರನ್ನು ನ್ಯಾಯಾಲಯಕ್ಕೆ ಕರೆತರುವ ಪೊಲೀಸ್ ಎಸ್ಕಾರ್ಟ್'ನ ನೇತೃತ್ವ ವಹಿಸಿದ್ದ ಸಬ್'ಇನ್ಸ್'ಪೆಕ್ಟರ್ ಉದಯ್ ಭಾಸ್ಕರ್ ಅವರು ಹೇಳುವಂತೆ, ಉಗ್ರರನ್ನು ನ್ಯಾಯಾಲಯಕ್ಕೆ ಕರೆತರುವಾಗ ವಿಕರುದ್ದೀನ್ ಅಹ್ಮದ್ ತುಂಬಾ ಅಸಹ್ಯವಾಗಿ ನಡೆದುಕೊಂಡ. ಪೊಲೀಸ್ ವಾಹನ ಏರುತ್ತಿದ್ದಂತೆಯೇ ಆತ ನನ್ನ ಮುಖಕ್ಕೆ ಉಗಿಯಲು ಆರಂಭಿಸಿದ. ಇತರ 16 ಪೊಲೀಸರನ್ನೂ ಅವಾಚ್ಯವಾಗಿ ನಿಂದಿಸಿದ ಎಂದು ಅವರು ಹೇಳಿದ್ದಾರೆ.
ವಿಕಾರುದ್ದೀನ್ ಅಷ್ಟೇ ಅಲ್ಲ, ಇತರೆ 4 ಮಂದಿ ಉಗ್ರರು ಕೂಡ ಬಹಳ ಅಸಭ್ಯವಾಗಿ ವರ್ತಿಸುತ್ತಿದ್ದರು. ಪೊಲೀಸರನ್ನು ಕೋಪದಿಂದ ನೋಡಿ ಉಗಿಯುತ್ತಿದ್ದರಂತೆ. ಇವಿಷ್ಟೂ ಘಟನೆ ನಡೆದಿರುವುದು ವರಂಗಲ್-ನಲ್ಗೊಂಡ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದೂ ಕೂಡ ಪೊಲೀಸ್ ವಾಹನದಲ್ಲಿ ಎಂಬುದು ಅಚ್ಚರಿಯ ಸಂಗತಿ.
Advertisement