ಪಾಕಿಸ್ತಾನಕ್ಕೆ ಯುದ್ಧೋಪಕರಣ ಮಾರಾಟ ಮಾಡಲು ಅಮೆರಿಕ ಕಾಂಗ್ರೆಸ್ ಒಪ್ಪಿಗೆ

ಪಾಕಿಸ್ತಾನ ರಾಷ್ಟ್ರಕ್ಕೆ ಭಾರಿ ಪ್ರಮಾಣದ ಯುದ್ಧೋಪಕರಣಗಳನ್ನು ಮಾರಾಟ ಮಾಡುವ ಯೋಜನೆ ಅಮೆರಿಕ ಕಾಂಗ್ರೆಸ್ ಒಪ್ಪಿಗೆ ನೀಡಿದೆ...
ಅಮೆರಿಕ ರಕ್ಷಣಾ ಇಲಾಖೆಯ ಹೆಲಿಕಾಪ್ಚರ್ ಗಳು
ಅಮೆರಿಕ ರಕ್ಷಣಾ ಇಲಾಖೆಯ ಹೆಲಿಕಾಪ್ಚರ್ ಗಳು

ವಾಷಿಂಗ್‌ಟನ್: ಪಾಕಿಸ್ತಾನ ರಾಷ್ಟ್ರಕ್ಕೆ ಭಾರಿ ಪ್ರಮಾಣದ ಯುದ್ಧೋಪಕರಣಗಳನ್ನು ಮಾರಾಟ ಮಾಡುವ ಯೋಜನೆ ಅಮೆರಿಕ ಕಾಂಗ್ರೆಸ್ ಒಪ್ಪಿಗೆ ನೀಡಿದೆ.

ಸುಮಾರು 952 ಮಿಲಿಯನ್ ಡಾಲರ್ ಮೌಲ್ಯದ ಯುದ್ಧ ಹೆಲಿಕಾಪ್ಟರ್ ಗಳು, ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಇತರೆ ಯುದ್ಧೋಪರಕರಣಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಅಮೆರಿಕ ಕಾಂಗ್ರೆಸ್ ತನ್ನ ಒಪ್ಪಿಗೆ ಸೂಚಿಸಿದೆ. ಅಲ್ಲದೆ ಈ ನೂತನ ಖರೀದಿ ಒಪ್ಪಂದದಿಂದಾಗಿ ಪಾಕಿಸ್ತಾನ ಮಿಲಿಟರಿ ಪಡೆಯ ಶಕ್ತಿ ಹೆಚ್ಚಲಿದ್ದು, ದಕ್ಷಿಣ ಏಷ್ಯಾದಲ್ಲಿರುವ ಬುಡಕಟ್ಟು ಭಯೋತ್ಪಾದಕರ ವಿರುದ್ಧ ಹೋರಾಡಲು ಸಹಾಯವಾಗಲಿದೆ ಎಂದು ಅಮೆರಿಕ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಈ ನೂತನ ಒಪ್ಪಂದದಿಂದಾಗಿ ಪಾಕಿಸ್ತಾನ ಅತ್ಯಾಧುನಿಕ 15 ಎಹೆಚ್-1ಜೆಡ್ ವೈಪರ್ ಅಟ್ಯಾಕ್ ಕಾಪ್ಟರ್ ಗಳು, 1 ಸಾವಿರ ಎಜಿಎಂ ಹೆಲ್ ಫೈರ್ 2 ಕ್ಷಿಪಣಿಗಳು ಸೇರಿದಂತೆ ಕೆಲ ಭದ್ರತಾ ಉಪಕರಣಗಳು, 32 ಟಿ-700 ಜಿಯಿ 401 ಸಿ ಎಂಜಿನ್ ಗಳು, 36 ಹೆಚ್-1 ತಾಂತ್ರಿಕ ಕಂಪ್ಯೂಚರ್ ಗಳು, 32 ಡಿಸ್ ಪ್ಲೇ ಆಪ್ಟಮೈಜ್ಡ್ ಹೆಲ್ಮೆಟ್ ಗಳು, 17 ಎಎನ್/ಎಎಆರ್-47 ಕ್ಷಿಪಣಿಗಳು, ಕ್ಷಿಪಣಿ ದಾಳಿ ಪತ್ತೆ ಹಚ್ಚುವ ಮಿಸೈಲ್ ವಾರ್ನಿಂಗ್ ಅಲಾರ್ಮ್ ಸಿಸ್ಟಮ್ ಗಳು, ಅದರ ಬಿಡಿಭಾಗಗಳು ಸೇರಿದಂತೆ 952 ಮಿಲಿಯನ್ ಡಾಲರ್ ಮೌಲ್ಯದ ಭದ್ರತಾ ಉಪಕರಣಗಳನ್ನು ಅಮೆರಿಕ ಪಾಕಿಸ್ತಾನಕ್ಕೆ ರಫ್ತು ಮಾಡಲಿದೆ. ಅಲ್ಲದೆ ಅವುಗಳ ಕುರಿತ ತರಬೇತಿಗಾಗಿ ತಂಡವನ್ನು ಕೂಡ ಪಾಕಿಸ್ತಾನಕ್ಕೆ ರವಾನೆ ಮಾಡಲಿದೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ.

ಸಾಮೂಹಿಕ ಭಯೋತ್ಪಾದಕ ದಾಳಿಗಳನ್ನು ಎದುರಿಸಲು ಹೆಲಿಕಾಪ್ಟರ್ ಮತ್ತು ಕ್ಷಿಪಣಿ ವ್ಯವಸ್ಥೆ ಸಮರ್ಥವಾಗಿದೆ. ಪ್ರತ್ಯೇಕತಾವಾದಿಗಳನ್ನು ನಿಯಂತ್ರಿಸುಲ ಇವು ಪಾಕಿಸ್ತಾನಕ್ಕೆ ಅನುಕೂಲಕರವಾಗಲಿದೆ ಎಂದು ಪೆಂಟಗಾನ್ ನ ರಕ್ಷಣಾ ಇಲಾಖೆಯ ಮಾರಾಟ ವಿಭಾಗದ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com