ಈಜಿಪ್ಟ್: ಮುಸ್ಲಿಂ ಬ್ರದರ್ ಹುಡ್ ಮುಖಂಡನಿಗೆ ಜೀವಾವಧಿ ಶಿಕ್ಷೆ

ಮುಸ್ಲಿಂ ಬ್ರದರ್ ಹುಡ್ ಸಂಘಟನೆಯ ಮುಖಂಡ ಮಹಮದ್ ಬ್ಯಾಡಿ ಸೇರಿದಂತೆ ಒಟ್ಟು 14 ಮಂದಿಗೆ ಈಜಿಪ್ಟ್ ನ್ಯಾಯಾಲಯ ಜೀವಾವಧಿ ಶಿಕ್ಷಿ ವಿಧಿಸಿದೆ..
ಮುಸ್ಲಿಂ ಬ್ರದರ್ ಹುಡ್ ನಾಯಕ ಮಹಮದ್ ಬ್ಯಾಡಿ
ಮುಸ್ಲಿಂ ಬ್ರದರ್ ಹುಡ್ ನಾಯಕ ಮಹಮದ್ ಬ್ಯಾಡಿ

ಕೈರೋ: ಈಜಿಪ್ಟ್ ನಲ್ಲಿ ಭಯೋತ್ಪಾದಕ ಹಿಂಸಾಚಾರ, ಆಂತರಿಕ ಕದನಕ್ಕೆ ಕಾರಣನಾದ ಹಿನ್ನಲೆಯಲ್ಲಿ ಮುಸ್ಲಿಂ ಬ್ರದರ್ ಹುಡ್ ಸಂಘಟನೆಯ ಮುಖಂಡ ಮಹಮದ್ ಬ್ಯಾಡಿ ಸೇರಿದಂತೆ ಒಟ್ಟು 14 ಮಂದಿಗೆ ಈಜಿಪ್ಟ್ ನ್ಯಾಯಾಲಯ ಜೀವಾವಧಿ ಶಿಕ್ಷಿ ವಿಧಿಸಿದೆ.

ಈಜಿಪ್ಟ್ ಮಾಜಿ ಅಧ್ಯಕ್ಷ ಮಹಮದ್ ಮೋರ್ಸಿ ಪದಚ್ಯುತಿ ವೇಳೆ ಈಜಿಪ್ಟ್ ನಲ್ಲಿ ನಡೆದಿದ್ದ ಅಪಾರ ಪ್ರಮಾಣದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಬ್ರದರ್ ಹುಡ್ ಸಂಘಟನೆಯ ಮಹಮದ್ ಬ್ಯಾಡಿಯನ್ನು ಬಂಧನಕ್ಕೊಳಪಡಿಸಲಾಗಿತ್ತು. 2013ರಲ್ಲಿ ನಡೆದಿದ್ದ ಈ ಹಿಂಸಾಚಾರದಲ್ಲಿ ಸಾವಿರಾರು ನಾಗರೀಕರು ಮತ್ತು ಸೈನಿಕರು ಮೃತಪಟ್ಟಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಈಜಿಪ್ಚ್ ನ್ಯಾಯಾಲಯ ಶನಿವಾರ ತನ್ನ ತೀರ್ಪನ್ನು ನೀಡಿದೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಮದ್ ಬ್ಯಾಡಿ ಸೇರಿದಂತೆ ಮುಸ್ಲಿಂ ಬ್ರದರ್ ಹುಡ್ ಸಂಘಟನೆಯ ಇತರೆ 13 ಮಂದಿ ಹಿರಿಯ ನಾಯಕರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com