
ಲಂಡನ್: ಹತ್ತು ಇಸಿಸ್ ಉಗ್ರರಿಂದ ಅತ್ಯಾಚಾರಕ್ಕೊಳಗಾದ 9 ವರ್ಷದ ಬಾಲಕಿ ಈಗ ಗರ್ಭಿಣಿ!
ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯಾಜಿದಿ ಸಮುದಾಯದ 9 ವರ್ಷದ ಬಾಲಕಿಯ ಮೇಲೆ 10 ಉಗ್ರರು ಸಾಮೂಹಿಕ ಅತ್ಯಚಾರ ಎಸಗಿದ್ದಾರೆ. ಈಗ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಇರಾಕ್‌ನ ಸಿಂಜಾರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಿಂದ ನೂರಾರು ಮಹಿಳೆಯರು ಮತ್ತು ಮಕ್ಕಳನ್ನು ಇಸ್ಲಾಮಿಕ್ ಸ್ಟೇಟ್ (ಇಸಿಸ್) ಉಗ್ರರು ಅಪಹರಿಸಿ, ಕಳೆದ ಎಂಟು ತಿಂಗಳ ಕಾಲ ಅವರನ್ನು ಒತ್ತೆ ಇರಿಸಿಕೊಳ್ಳಲಾಗಿತ್ತು.
ಯಾಜಿದಿ ಮಹಿಳೆಯರ ಮೇಲೆ ಬಹಿರಂಗವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಲೈಂಗಿಕ ದೌರ್ಜನ್ಯ, ಹೊಡೆತ ಸೇರಿದಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ.
ಈ ಸಮಯದಲ್ಲಿ 9 ವರ್ಷದ ಬಾಲಕಿ ಮೇಲೂ ನಿರಂತರ ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ.
ಸದ್ಯ ಅಪಹರಣಕ್ಕೊಳಗಾಗಿದ್ದ ಮಹಿಳೆಯರನ್ನು ಬಿಡುಗಡೆ ಮಾಡಲಾಗಿದೆ. ಯಾಜಿದಿ ಸಮುದಾಯದ 200ಕ್ಕೂ ಹೆಚ್ಚು ಮಹಿಳೆಯರು ತಾವು ಅನುಭವಿಸಿದ ಭಯಾನಕ ನರಕದ ಬಗ್ಗೆ ಹೇಳಿಕೊಂಡಿದ್ದಾರೆ.
Advertisement