
ಬರ್ಲಿನ್: ಭಾರತದಲ್ಲಿ ಸಂಸ್ಕೃತ ಭಾಷೆ ಎಂಬ ಮರದ ಬೇರು ಗಟ್ಟಿಯಾಗಿರುವುದರಿಂದಲೇ ಜಾತ್ಯಾತೀತತೆಯನ್ನು ಜಗ್ಗಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ತ್ರಿರಾಷ್ಟ್ರ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬರ್ಲಿನ್ ನಲ್ಲಿ ಭಾರತೀಯ ಸಮುದಾಯ ನಿನ್ನೆರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಭಾರತದ ಜಾತ್ಯಾತೀತತೆಯನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಇದಕ್ಕೆ ಪ್ರಮುಖ ಕಾರಣ ಗಟ್ಟಿಯಾಗಿ ನೆರೆಯೂರಿರುವ ಸಂಸ್ಕೃತ ಭಾಷೆ ಹಾಗೂ ಆತ್ಮ ವಿಶ್ವಾಸ.
ಅಂದಿನ ದಿನಗಳಲ್ಲಿ ಜರ್ಮನ್ ನ ರೇಡಿಯೋಗಳಲ್ಲಿ ಸುದ್ದಿಗಳ ಮುಖ್ಯಾಂಶಗಳನ್ನು ಸಂಸ್ಕೃತದಲ್ಲಿ ನೀಡಲಾಗುತ್ತಿತ್ತು. ಭಾರತದಲ್ಲಿ ಸಂಸ್ಕೃತ ಭಾಷೆಯಲ್ಲಿ ಯಾವುದೇ ಸುದ್ದಿಗಳನ್ನು ನೀಡುತ್ತಿರಲಿಲ್ಲ. ಈ ಒಂದು ಕಾರಣದಿಂದ ಜ್ಯಾತ್ಯಾತೀತೆಯು ಅಪಾಯದ ಅಂಚಿನಲ್ಲಿದೆ ಎಂದು ಭಾವಿಸಲಾಗುತ್ತಿತ್ತು. ಆದರೂ ಯಾರಿಂದಲೂ ಅದನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ.
ಭಾರತದ ಜಾತ್ಯಾತೀತೆ ದುರ್ಬಲವಲ್ಲ. ಭಾಷೆ ಎಂಬ ಒಂದು ಕಾರಣವಿಡಿದು ಯಾರು ಬೇಕಾದರೂ ಜಾತ್ಯಾತೀತತೆಯನ್ನು ಅಲುಗಾಡಿಸುತ್ತಾರೆ ಎನ್ನುವುದಕ್ಕೆ. ಆತ್ಮವಿಶ್ವಾಸ ಗಟ್ಟಿಯಿದ್ದರೆ ಅದನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
ಈ ಹೇಳಿಕೆ ಯಾವ ಉದ್ದೇಶದಿಂದ ಹೇಳಿದ್ದಾರೆ ಎಂಬುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿಲ್ಲದಿದ್ದರೂ, ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಕೇಂದ್ರೀಯ ವಿದ್ಯಾಲಯಗಳ 6ರಿಂದ 8ನೆ ತರಗತಿಯ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಜರ್ಮನ್ ಬದಲಿಗೆ ಸಂಸ್ಕೃತದ ಆಯ್ಕೆಯ ವಿವಾದ ಕುರಿತಂತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement